AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pope Francis: ಪೋಪ್ ಫ್ರಾನ್ಸಿಸ್​ಗೆ ಎಲೆಕ್ಟ್ರಿಕ್ ಕಾರು ಸಿದ್ಧಪಡಿಸಲಿದೆ ಫಿಸ್ಕರ್ ಆಟೋಮೊಬೈಲ್ ಕಂಪೆನಿ

ಪೋಪ್ ಫ್ರಾನ್ಸಿಸ್ ಅವರಿಗಾಗಿ ಎಲೆಕ್ಟ್ರಿಕ್ ಕಾರು ಸಿದ್ಧಪಡಿಸಲಿದೆ ಕ್ಯಾಲಿಫೋರ್ನಿಯಾ ಮೂಲದ ಫಿಸ್ಕರ್ ಆಟೋಮೊಬೈಲ್ಸ್ ಕಂಪೆನಿ. ಮುಂದಿನ ವರ್ಷ ಈ ಕಾರು ಸಿದ್ಧಗೊಳ್ಳಲಿದೆ.

Pope Francis: ಪೋಪ್ ಫ್ರಾನ್ಸಿಸ್​ಗೆ ಎಲೆಕ್ಟ್ರಿಕ್ ಕಾರು ಸಿದ್ಧಪಡಿಸಲಿದೆ ಫಿಸ್ಕರ್ ಆಟೋಮೊಬೈಲ್ ಕಂಪೆನಿ
ಪೋಪ್ ಫ್ರಾನ್ಸಿಸ್ (ಸಂಗ್ರಹ ಚಿತ್ರ)
Srinivas Mata
|

Updated on:May 25, 2021 | 11:35 PM

Share

ಕ್ಯಾಲಿಫೋರ್ನಿಯಾ ಮೂಲದ ಫಿಸ್ಕರ್ ಆಟೋಮೊಬೈಲ್ ಕಂಪೆನಿಯು ಪೋಪ್ ಫ್ರಾನ್ಸಿಸ್​ ಅವರಿಗಾಗಿ ಎಲೆಕ್ಟ್ರಿಕ್ ಕಾರು ನಿರ್ಮಾಣ ಮಾಡಿಕೊಡಲಿದೆ ಎಂಬ ಸುದ್ದಿ ಬಂದಿದೆ. ಕಸ್ಟಮ್ ಮೇಡ್ ಫಿಸ್ಕರ್ ಓಷನ್ ಕಾರು ಪೋಪ್​ರ ಸಂಚಾರಕ್ಕಾಗಿ ಸಿದ್ಧಗೊಳ್ಳಲಿದೆ. ಮಾಡಿಫೈ ಆದ ಕಾರು ಹೇಗೆ ಕಾಣಿಸಿಕೊಳ್ಳಲಿದೆ ಎಂಬುದನ್ನು ಹೆನ್ರಿಕ್ ಫಿಸ್ಕರ್ ಮತ್ತು ಅವರ ಪತ್ನಿ ಕಳೆದ ವಾರ ರೋಮನ್ ಕ್ಯಾಥೋಲಿಕ್ ಚರ್ಚ್ ಮುಖ್ಯಸ್ಥರಾದ ಪೋಪ್​ಗೆ ತೋರಿಸಿದ್ದಾರೆ. ಸಾರ್ವಜನಿಕವಾಗಿ ಪೋಪ್ ಕಾಣಿಸಿಕೊಳ್ಳುವುದಕ್ಕಾಗಿಯೇ ಬಳಸುವುದಕ್ಕೆ ಈ ವಾಹನವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಸಂಪೂರ್ಣ ಗಾಜಿನಿಂದ ಸುತ್ತುವರೆದ ರೂಫ್​ನಿಂದ ಜನಜಂಗುಳಿಯನ್ನು ವೀಕ್ಷಿಸುವುದಕ್ಕೆ ಅವಕಾಶ ಇದೆ. ಈ ಕಾರು ಮುಂದಿನ ವರ್ಷ ಡೆಲಿವರಿ ಆಗಬಹುದು. ಫಿಸ್ಕರ್ ನೀಡಿದ ಹೇಳಿಕೆಯಂತೆ, ಭವಿಷ್ಯದ ತಲೆಮಾರಿಗೆ ಹವಾಮಾನ ಬದಲಾವಣೆಯಿಂದ ಏನೆಲ್ಲ ಸಮಸ್ಯೆ ಎಂಬ ಬಗ್ಗೆ ಪೋಪ್ ಆತಂಕ ವ್ಯಕ್ತಿ ಪಡಿಸಿದ ಮೇಲೆ ಈ ಕಾರು ತಯಾರಿಸುವ ಆಲೋಚನೆ ಬಂದಿದ್ದಾಗಿ ಹೇಳಲಾಗಿದೆ.

ಫಿಸ್ಕರ್ ಓಷನ್ ಉತ್ಪಾದನೆ ಈ ವರ್ಷದಲ್ಲೇ ಆರಂಭ ಆಗಲಿದೆ. ಲಭ್ಯ ಇರುವ ಮಾಹಿತಿಯಂತೆ, ಈಗಾಗಲೇ 16,000 ಆರ್ಡರ್ ಬಂದಿದೆ. ಇದು ಫಿಸ್ಕರ್​ನ ಮೊದಲ ಎಸ್​ಯುವಿ. ಮುಂದಿನ ವರ್ಷದಿಂದ ಮಾರಾಟ ಆರಂಭವಾಗುತ್ತದೆ. ಇದು ವಿಶ್ವದ ಬಹಳ ಸುಸ್ಥಿರ ವಾಹನ ಎಂದು ಕಂಪೆನಿ ಹೇಳಿಕೊಂಡಿದೆ. ಒಂದು ಸಲ ಚಾರ್ಜ್ ಮಾಡಿದರೆ 482 ಕಿ.ಮೀ. ದೂರ ಸಾಗುತ್ತದೆ. ಫಿಸ್ಕರ್ ಕಂಪೆನಿಯು ಕ್ಯಾಲಿಫೋರ್ನಿಯಾದೇ ಆದರೂ ಕಳೆದ ವರ್ಷದ ಸಾರ್ವಜನಿಕ ಷೇರು ವಿತರಣೆ ಆಗಿದ್ದ ನ್ಯೂಯಾರ್ಕ್ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ. ಫಿಸ್ಕರ್ ಕಾರು ಜೋಡಣೆ ಆಗುವುದು ಆಸ್ಟ್ರಿಯಾದಲ್ಲಿ. ಅಲ್ಲೇ ಕಾರಿನ ಚಾಸೀಸ್ ಕಟ್ಟುವ ಮತ್ತು ಬ್ಯಾಟರಿ ಪೂರೈಸುವ ಮ್ಯಾಗ್ನಾ- ಸ್ಟೇಯರ್ ಇರುವುದು. ಓಷನ್ ಯಶಸ್ಸಿನ ಮೂಲಕ ಮತ್ತೆ ತನ್ನ ಬ್ರ್ಯಾಂಡ್ ಮೌಲ್ಯವನ್ನು ಮೇಲೆತ್ತುವ ಆಲೋಚನೆಯಲ್ಲಿದೆ ಕಂಪೆನಿ. ಈ ಹಿಂದೆ ಕರ್ಮ ಹೈಬ್ರೀಡ್ ಕಾರು ಮಾರುಕಟ್ಟೆಯಲ್ಲಿ ವಿಫಲವಾಗಿದೆ.

ಪೋಪ್ ಆದವರು ಎಲೆಕ್ಟ್ರಿಕ್ ಕಾರು ಆಯ್ಕೆ ಮಾಡಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಈಚೆಗಿನ ದಿನಗಳಲ್ಲಿ ಹೈಡ್ರೋಜೆನ್ ಫ್ಯುಯೆಲ್- ಸೆಲ್​ನಿಂದ ಚಲಿಸುವ ಟೊಯೊಟಾ ಮಿರಾಲಿ ಬಳಸುತ್ತಿದ್ದಾರೆ. 2012ರಲ್ಲಿ ರೆನೋದಿಂದ ಪೋಪ್ ಬೆನೆಡಿಕ್ಟ್​ಗೆ ಎಲೆಕ್ಟ್ರಿಕ್ ಕಾಂಗೂ ವ್ಯಾನ್ ಸಿದ್ಧಪಡಿಸಿತ್ತು. ಅಂದಹಾಗೆ ಮರ್ಸಿಡೀಸ್ ಬೆಂಜ್ ಕಂಪೆನಿಯು ವ್ಯಾಟಿಕನ್​ಗೆ ಅಧಿಕೃತವಾಗಿ ಬುಲೆಟ್​ಪ್ರೂಫ್ ಹೈಬ್ರಿಡ್ ಮಾಡೆಲ್ ತಯಾರು ಮಾಡುತ್ತಾ ಬಂದಿದೆ.

ಇದನ್ನೂ ಓದಿ: ಭಾರತದಲ್ಲಿ ಮುಂದಿನ ಎರಡು ತಿಂಗಳೊಳಗೆ ಎಲೆಕ್ಟ್ರಿಕಲ್ ವಾಹನಗಳ ಚಾರ್ಜಿಂಗ್ ಪಾಯಿಂಟ್​ಗಳ ಆರಂಭಿಸುವ ಯೋಜನೆ

(California based Fisker automobile company manufacturing electric car to deliver it to Pope Francis. Here is the details)

Published On - 6:22 pm, Tue, 25 May 21