AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mehul Choksi: ದೇಶ ಭ್ರಷ್ಟ ವಜ್ರದ ವ್ಯಾಪಾರಿ ಮೆಹುಲ್ ಚೋಸ್ಕಿ ಈಗ ಎಲ್ಲಿದ್ದಾನೆ? ಆಂಟಿಗುವಾ ಪ್ರಧಾನಿ ಗಷ್ಟನ್ ಬ್ರೌನ್​ ಹೇಳುವುದೇನು?

Prime Minister Gaston Browne: ನಾವೂ ಸಹ ಮೆಹುಲ್ ಚೋಸ್ಕಿ ವಿರುದ್ಧ ಗ್ರೀನ್​ ನೋಟಿಸ್​ ಜಾರಿ ಮಾಡುತ್ತೇವೆ. ಕಾನೂನು ತನ್ನದೇ ಪ್ರಕ್ರಿಯೆಗಳನ್ನು ಪಾಲಿಸುತ್ತದೆ. ಅಲ್ಲಿಯವರೆಗೂ ಕಾಯಬೇಕು. ಅದು ಮುಗಿದ ಬಳಿಕ ಆತನನ್ನು ನಾವು ಭಾರತಕ್ಕೆ ಹಸ್ತಾಂತರಿಸಲು ಸಿದ್ಧ ಎಂದು ವಿಯಾನ್​ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಆಂಟಿಗುವಾ ಪ್ರಧಾನಿ ಗಾಸ್ಟನ್​ ಬ್ರೋನ್ ಸ್ಪಷ್ಟಪಡಿಸಿದ್ದಾರೆ.

Mehul Choksi: ದೇಶ ಭ್ರಷ್ಟ ವಜ್ರದ ವ್ಯಾಪಾರಿ ಮೆಹುಲ್ ಚೋಸ್ಕಿ ಈಗ ಎಲ್ಲಿದ್ದಾನೆ? ಆಂಟಿಗುವಾ ಪ್ರಧಾನಿ ಗಷ್ಟನ್ ಬ್ರೌನ್​ ಹೇಳುವುದೇನು?
Mehul Choksi: ದೇಶ ಭ್ರಷ್ಟ ವಜ್ರದ ವ್ಯಾಪಾರಿ ಮೆಹುಲ್ ಚೋಸ್ಕಿ ಈಗ ಎಲ್ಲಿದ್ದಾನೆ? ಆಂಟಿಗುವಾ ಪ್ರಧಾನಿ ಗಷ್ಟನ್ ಬ್ರೌನ್​ ಹೇಳುವುದೇನು?
ಸಾಧು ಶ್ರೀನಾಥ್​
|

Updated on:May 26, 2021 | 12:31 PM

Share

ಆಂಟಿಗುವಾ​: ದೇಶ ಭ್ರಷ್ಟ ವಜ್ರ ವ್ಯಾಪಾರಿ ಮೆಹುಲ್ ಚೋಸ್ಕಿ ಮೊನ್ನೆ ಆಂಟಿಗೋವಾದಿಂದ ಪರಾರಿಯಾಗಿದ್ದಾನೆ ಎಂಬ ಬಗ್ಗೆ ವರದಿ ಕೇಳಿದಿರಿ. ತಾಜಾ ಮಾಹಿತಿ ಪ್ರಕಾರ ಮೆಹುಲ್ ಚೋಸ್ಕಿ ಆಂಟಿಗೋವಾ ಬಿಟ್ಟು ಪರಾರಿಯಾಗಿರುವುದು ಬಹುತೇಕ ದೃಢಪಟ್ಟಿದೆ. ಈ ಬಗ್ಗೆ ಆಂಟಿಗುವಾ ಮತ್ತು ಬಾರ್ಬುಡಾ ಪ್ರಧಾನ ಮಂತ್ರಿ ಗಷ್ಟನ್ ಬ್ರೌನ್​ ಮಾತನಾಡಿದ್ದಾರೆ. ಆಂಟಿಗುವಾದಲ್ಲಿ ವ್ಯಾಪಾರ ಮಾಡ್ತೀನಿ ಅಂತಾ ಬಂದು ಇಲ್ಲಿನ ಪೌರತ್ವ ಪಡೆದು ಇಲ್ಲೇ ಸೆಟಲ್​ ಆಗಿರುವ ಉದ್ಯಮಿ ಮೆಹುಲ್ ಚೋಸ್ಕಿ ನಮ್ಮ ದೇಶದಿಂದ ಹೊರಹೋಗಿರುವ ಮಾಹಿತಿ ಖಚಿತಪಟ್ಟಿಲ್ಲ. ಆದರೆ ಆ ಬಗ್ಗೆ ಊಹಾಪೋಹ ಎದ್ದಿದೆ ಎಂದು ತಿಳಿಸಿದ್ದಾರೆ.

61 ವರ್ಷ ಪ್ರಾಯದ ವಜ್ರದ ವ್ಯಾಪಾರಿ ಮೆಹುಲ್ ಚೋಸ್ಕಿ ಮತ್ತು ಅವನ ಸಂಬಂಧೀ ನೀರವ್​ ಮೋದಿ ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್​​ಗೆ (Punjab National Bank -PNB) 13,500 ಕೋಟಿ ರೂಪಾಯಿ ವಂಚನೆ ಎಸಗಿ ಪರಾರಿಯಾಗಿದ್ದಾರೆ. ಇಬ್ಬರು ವಿರುದ್ಧವೂ ಸಿಬಿಐ (CBI) ಮತ್ತು ಜಾರಿ ನಿರ್ದೇಶನಾಲಯ (ED) ತನಿಖೆ ನಡೆಸುತ್ತಿದ್ದು, ಇಬ್ಬರೂ ಭಾರತಕ್ಕೆ ವಾಪಸಾಗಬೇಕಾಗಿದ್ದಾರೆ.

ವಿಯಾನ್ (WION) ಟಿವಿ ಮಾಧ್ಯಮದ ಜೊತೆ ಮೆಹುಲ್ ಚೋಸ್ಕಿ ಆಂಟಿಗೋವಾದಿಂದ ಪರಾರಿಯಾಗಿರುವ ವರದಿಗಳ ಬಗ್ಗೆ ಮಾತನಾಡಿರುವ ಆಂಟಿಗುವಾ ಪ್ರಧಾನಿ, ಸ್ವತಃ ಉದ್ಯಮಿ ಮತ್ತು ಬ್ಯಾಂಕರ್​ ಆಗಿದ್ದ ಗಷ್ಟನ್ ಬ್ರೌನ್ ಅವರು ​‘24 ಗಂಟೆಯಾದರೂ ಮೆಹುಲ್ ಚೋಸ್ಕಿ ಪತ್ತೆಯಾಗಿಲ್ಲ. ಹಾಗಾಗಿ ಆತನ ವಿರುದ್ಧ ಕಣ್ಮರೆಯಾಗಿರುವ ಬಗ್ಗೆ ಸ್ಥಳೀಯವಾಗಿ ಬಿತ್ರರಿಸಲಾಗಿದೆ. ಅದನ್ನ ಈಗ ಇಂಟರ್​ಪೋಲ್​ ಜೊತೆಗೂ ಹಂಚಿಕೊಳ್ಳಲಾಗಿದೆ. ಮೆಹುಲ್ ಚೋಸ್ಕಿ ವಿರುದ್ಧ ಸ್ಥಳೀಯ ಕೋರ್ಟ್​ಗಳಲ್ಲಿ 2 ವಿಷಯಗಳು ದಾಖಲಾಗಿವೆ: ಒಂದು ಆತನ ಪೌರತ್ವವನ್ನು ಹಿಂತೆಗೆದುಕೊಳ್ಳುವುದು, ಮತ್ತೊಂದು ಆತನನ್ನು ಭಾರತಕ್ಕೆ ಹಸ್ತಾಂತರಿಸುವುದು. ಇತ್ತೀಚೆಗೆ ಮೆಹುಲ್ ಚೋಸ್ಕಿ ಸ್ವತಃ ಕೇಸನ್ನು ಶೀಘ್ರವೇ ಇತ್ಯರ್ಥ ಪಡಿಸುವಂತೆ ಕೋರಿದ್ದ. ಅದೇ ವೇಳೆ ತನ್ನ ವಕೀಲರನ್ನೂ ಬದಲಾಯಿಸಿದ್ದ. ಯುಕೆಯ ಪ್ರಸಿದ್ಧ ಕ್ರಿಮಿನಲ್​ ಲಾಯರ್​ ಎಡ್ವರ್ಡ್​ ಫಿಜರಾಲ್ಡ್​ ಸಿಬಿಇ ಕ್ಯುಸಿ (Edward Fitzgerald CBE QC) ಸೇವೆಗಳನ್ನು ಪಡೆಯಲಾರಂಭಿಸಿದ್ದ’ ಎಂದು ಸವಿಸ್ತಾರವಾಗಿ ಹೇಳಿದ್ದಾರೆ.

ಭಾರತದಿಂದ ಪರಾರಿಯಾಗಿರುವುದಕ್ಕೆ ಭಾರತ ತನಿಖಾ ಸಂಸ್ಥೆಗಳು ಅದಾಗಲೇ ಆತನ ವಿರುದ್ಧ ರೆಡ್​ ಕಾರ್ನರ್​ ನೋಟಿಸ್​ ಜಾರಿ ಮಾಡಿದೆ. ಇದೀಗ ನಾವೂ ಸಹ ಆತನ ವಿರುದ್ಧ ಗ್ರೀನ್​ ನೋಟಿಸ್​ ಜಾರಿ ಮಾಡುತ್ತೇವೆ. ಕಾನೂನು ತನ್ನದೇ ಪ್ರಕ್ರಿಯೆಗಳನ್ನು ಪಾಲಿಸುತ್ತದೆ. ಅಲ್ಲಿಯವರೆಗೂ ಕಾಯಬೇಕು. ಅದು ಮುಗಿದ ಬಳಿಕ ಆತನನ್ನು ನಾವು ಭಾರತಕ್ಕೆ ಹಸ್ತಾಂತರಿಸಲು ಸಿದ್ಧ ಎಂದು ವಿಯಾನ್​ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಆಂಟಿಗುವಾ ಪ್ರಧಾನಿ ಗಷ್ಟನ್ ಬ್ರೌನ್ ಸ್ಪಷ್ಟಪಡಿಸಿದ್ದಾರೆ.

(green notice will be placed internationally for Mehul Choksi as a missing person says Prime Minister of Antigua Gaston Browne)

ಇದನ್ನೂ ಓದಿ:

Vijay Mallya: ಭಾರತದಲ್ಲಿರುವ ನನ್ನ ವಕೀಲರುಗಳಿಗೆ ಫೀಸ್​ ಕೊಡಬೇಕು… ದಯವಿಟ್ಟು ಹಣ ನೀಡಿ ಎಂದು ಲಂಡನ್​ ಕೋರ್ಟ್​ ಮೊರೆ ಹೋದ ವಿಜಯ್​ ಮಲ್ಯ!

ವಂಚಕ ಮೆಹೂಲ್ ಚೋಸ್ಕಿ ಆಂಟಿಗುವಾದಲ್ಲಿ ನಾಪತ್ತೆ? ವಾಹನ ಜಾಲಿ ಬಂದರು ಪ್ರದೇಶದಲ್ಲಿ ಪತ್ತೆ! ಆತಂಕದಲ್ಲಿ ಕುಟುಂಬಸ್ಥರು

Published On - 12:27 pm, Wed, 26 May 21

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು
ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು
ಪ್ರವಾಸಿಗರ ಕ್ಯಾಮೆರಾಗೆ ಬಿಂದಾಸ್ ಪೋಸ್ ನೀಡಿದ ಜೋಡಿ ಹುಲಿಗಳು!
ಪ್ರವಾಸಿಗರ ಕ್ಯಾಮೆರಾಗೆ ಬಿಂದಾಸ್ ಪೋಸ್ ನೀಡಿದ ಜೋಡಿ ಹುಲಿಗಳು!
ವಸ್ತುಗಳನ್ನು ಮನೆಗೆ ಕೊಡಲು ಬಂದ ಡೆಲಿವರಿ ಬಾಯ್ ಮಾಡಿದ್ದೇನು ನೋಡಿ
ವಸ್ತುಗಳನ್ನು ಮನೆಗೆ ಕೊಡಲು ಬಂದ ಡೆಲಿವರಿ ಬಾಯ್ ಮಾಡಿದ್ದೇನು ನೋಡಿ