Vijay Mallya: ಭಾರತದಲ್ಲಿರುವ ನನ್ನ ವಕೀಲರುಗಳಿಗೆ ಫೀಸ್ ಕೊಡಬೇಕು… ದಯವಿಟ್ಟು ಹಣ ನೀಡಿ ಎಂದು ಲಂಡನ್ ಕೋರ್ಟ್ ಮೊರೆ ಹೋದ ವಿಜಯ್ ಮಲ್ಯ!
London court: ಭಾರತದಲ್ಲಿರುವ ನನ್ನ ವಕೀಲರುಗಳಿಗೆ ಶುಲ್ಕ ಜಸ್ಟ್ 5.7 ಕೋಟಿ ರೂಪಾಯಿ ನೀಡಬೇಕಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ಇದೇ ಲಾಯರುಗಳಿಗೆ ನಾನು ಇನ್ನೂ 2 ಕೋಟಿ ರೂಪಾಯಿ (£ 758,000) ಖರ್ಚು ಮಾಡಬೇಕಾದೀತು. ಆದರೆ ಇಷ್ಟು ಹಣ ನನ್ನ ಬಳಿ ಇಲ್ಲ. ಹಾಗಾಗಿ ಕೋರ್ಟ್ ಈ ಹಣ ಕ್ರೋಢೀಕರಣಕ್ಕೆ ನನಗೆ ನೆರವು ನೀಡಬೇಕು ಎಂದು ವಿಲಾಸಿ ಮನುಷ್ಯ ವಿಜಯ್ ಮಲ್ಯ ಯುಕೆ ಕೋರ್ಟ್ಗೆ ಕೇಳಿಕೊಂಡಿದ್ದಾನೆ.
ಲಂಡನ್: ನಿನ್ನಯಷ್ಟೇ ವಜ್ರ ವ್ಯಾಪಾರಿ ಮೆಹುಲ್ ಚೋಸ್ಕಿ ಆಂಟಿಗೋವಾದಿಂದ ಪರಾರಿಯಾಗಿರುವ ಬಗ್ಗೆ ವರದಿ ಕೇಳಿದಿರಿ. ಈ ಮಧ್ಯೆ ಮತ್ತೊಬ್ಬ ವಂಚಕ ನೀರವ್ ಮೋದಿ ಸದ್ಯ ಲಂಡನ್ ಜೈಲಿನಲ್ಲಿದ್ದು, ಆತನನ್ನು ಭಾರತಕ್ಕೆಹಸ್ತಾಂತರಿಸಿ ಎಂದು ಅಲ್ಲಿನ ಕೋರ್ಟ್ ಆದೇಶಿಸಿದೆ. ಆದರೆ ಅವನೋ ದಮ್ಮಯ್ಯ ನನ್ನನ್ನು ದಯವಿಟ್ಟು ಭಾರತಕ್ಕೆ ಕಳಿಸಿಕೊಡಬೇಕಿ ಎಂದು ಅದೇ ಲಂಡನ್ನಲ್ಲಿ ಕೋರ್ಟ್ ಮೊರೆ ಹೋಗಿರುವುದೂ ವರದಿಯಾಗಿದೆ. ಈ ಮಧ್ಯೆ ಇವರೆಲ್ಲರಿಗಿಂತ ಮಹಾ ವಂಚಕ, ಕನ್ನಡಿಗ ವಿಜಯ್ ಮಲ್ಯ ಎಂಬ ಮದ್ಯದ ದೊರೆ ಭಾರತದಲ್ಲಿರುವ ನನ್ನ ವಕೀಲರುಗಳಿಗೆ ಶುಲ್ಕ ಕೊಡಬೇಕು… ದಯವಿಟ್ಟು ಹಣ ನೀಡಿ ಎಂದು ಲಂಡನ್ ಕೋರ್ಟ್ ಮೊರೆ ಹೋಗಿದ್ದಾನೆ!
ಏನಿಲ್ಲ ಭಾರತದಲ್ಲಿರುವ ನನ್ನ ವಕೀಲರುಗಳಿಗೆ ಶುಲ್ಕ ಜಸ್ಟ್ 5.7 ಕೋಟಿ ರೂಪಾಯಿ ನೀಡಬೇಕಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ಇದೇ ಲಾಯರುಗಳಿಗೆ ನಾನು ಇನ್ನೂ 2 ಕೋಟಿ ರೂಪಾಯಿ (£ 758,000) ಖರ್ಚು ಮಾಡಬೇಕಾದೀತು. ಆದರೆ ಇಷ್ಟು ಹಣ ನನ್ನ ಬಳಿ ಇಲ್ಲ. ಹಾಗಾಗಿ ಕೋರ್ಟ್ ಈ ಹಣ ಕ್ರೋಢೀಕರಣಕ್ಕೆ ನನಗೆ ನೆರವು ನೀಡಬೇಕು ಎಂದು ವಿಲಾಸಿ ಮನುಷ್ಯ ವಿಜಯ್ ಮಲ್ಯ ಯುಕೆ ಕೋರ್ಟ್ಗೆ ಕೇಳಿಕೊಂಡಿದ್ದಾನೆ. ನನ್ನ ವಿರುದ್ಧ ದಿವಾಳಿ ಪ್ರಕರಣಗಳು ದಾಖಲಾಗಿವೆ. ಕೋರ್ಟ್ನಲ್ಲಿ ಇದರ ವಿಚಾರಣೆ ನಡೆಯುತ್ತಿದೆ. ಈ ಮಧ್ಯೆ ನನ್ನ ಅಷ್ಟೂ ಆಸ್ತಿಯನ್ನು ನಾನಾ ಕೋರ್ಟ್ಗಳು ಮುಟ್ಟುಗೋಲು ಹಾಕಿಕೊಂಡಿವೆ. ಇದರಿಂದ ನನ್ನ ಬಳಿ ಹಣವೇ ಇಲ್ಲವಾಗಿದೆ. ಹಾಗಾಗಿ ಕೋರ್ಟ್ ಫಂಡ್ ನಿಂದ (court funds office) ಹಣ ಬಿಡುಗಡೆ ಮಾಡಬೇಕು ಎಂದು ವಿಜಯ್ ಮಲ್ಯ ಕೋರ್ಟ್ಗೆ ಅಲವತ್ತುಕೊಂಡಿದ್ದಾನೆ.
ಏನಿದು ಕೋರ್ಟ್ ಫಂಡ್ ಬಾಬತ್ತು (court funds office)?:
ಸಾಲ ಶೂಲದಲ್ಲಿ ಮುಳುಗಿರುವ ವಿಲಾಸಿ ವಿಜಯ್ ಮಲ್ಯ ವಿರುದ್ಧ ಡೆಪ್ಯುಟಿ ಐಸಿಸಿ ಜಡ್ಜ್ ಬರ್ನೆಟ್ ಅವರು ಕಳೆದ ಫೆಬ್ರವರಿಯಲ್ಲಿ ಆರ್ಡರ್ ಒಂದನ್ನು ಪಾಸ್ ಮಾಡಿ ವಿಜಯ್ ಮಲ್ಯನಿಗೆ ಜೀವನೋಪಾಯಕ್ಕಾಗಿ ಪ್ರತಿ ತಿಂಗಳೂ ಕೋರ್ಟ್ ಫಂಡ್ ನಿಂದ (court funds office) 23 ಲಕ್ಷ ರೂಪಾಯಿ ಬಿಡುಗಡೆ ಮಾಡುವಂತೆ ಸೂಚಿಸಿದ್ದರು. ಆದರೆ ಅದರಲ್ಲಿ ಆತ ಭಾರತದಲ್ಲಿರುವ ತನ್ನ ವಕೀಲರುಗಳಿಗೆ ನೀಡಬೇಕಾದ ಶುಲ್ಕವನ್ನು ಸೇರಿಸಿರಲಿಲ್ಲ. ಬಳಿಕ, ಮಲ್ಯನ ಹೆಸರಿನಲ್ಲಿರುವ ಒಟ್ಟು ಕೋರ್ಟ್ ಫಂಡ್ ನಿಂದ 12 ಕೋಟಿ ರೂಪಾಯಿ ಬಳಸಿಕೊಳ್ಳುವಂತೆ ಸೂಚಿಸಿದ್ದರು. ಅದರಂತೆ ಈಗ ವಿಜಯ್ ಮಲ್ಯ ತನ್ನ ವಕೀಲರುಗಳಿಗೆ ಸುಮಾರು 8 ಕೋಟಿ ರೂಪಾಯಿ ಶುಲ್ಕ ಕೊಡಬೇಕು ಎಂದು ತಿಳಿಸಲಾಗಿ, ಕೋರ್ಟ್ ಈಗ ಆ ಹಣವನ್ನು ಬಳಸಿಕೊಳ್ಳುವಂತೆ ಹೇಳಿದೆ.
(Vijay Mallya application in UK court to give him Rs 7 point 8 crore from court funds office in London to pay his lawyers in India)
ವಂಚಕ ಮೆಹೂಲ್ ಚೋಸ್ಕಿ ಆಂಟಿಗುವಾದಲ್ಲಿ ನಾಪತ್ತೆ? ವಾಹನ ಜಾಲಿ ಬಂದರು ಪ್ರದೇಶದಲ್ಲಿ ಪತ್ತೆ! ಆತಂಕದಲ್ಲಿ ಕುಟುಂಬಸ್ಥರು
Published On - 11:06 am, Wed, 26 May 21