AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶದಲ್ಲಿ ಕೊವಿಡ್​ನಿಂದ 577 ಮಕ್ಕಳು ಅನಾಥರಾಗಿದ್ದಾರೆ: ಸಚಿವೆ ಸ್ಮೃತಿ ಇರಾನಿ

ಏಪ್ರಿಲ್​ 1ರಿಂದ ಇಲ್ಲಿಯವರೆಗೆ 577 ಮಕ್ಕಳು ಅನಾಥರಾಗಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ತಿಳಿಸಿದ್ದಾರೆ.

ದೇಶದಲ್ಲಿ ಕೊವಿಡ್​ನಿಂದ 577 ಮಕ್ಕಳು ಅನಾಥರಾಗಿದ್ದಾರೆ: ಸಚಿವೆ ಸ್ಮೃತಿ ಇರಾನಿ
ಸಚಿವೆ ಸ್ಮೃತಿ ಇರಾನಿ
shruti hegde
|

Updated on:May 26, 2021 | 10:58 AM

Share

ದೆಹಲಿ: ಕೊವಿಡ್​ ಸೋಂಕಿನಿಂದ ಅದೆಷ್ಟೋ ಪೋಷಕರು ಬಲಿಯಾಗಿದ್ದಾರೆ. ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳು ಅನಾಥರಾಗಿದ್ದಾರೆ. ದೇಶದಲ್ಲಿ ಸರಿಸುಮಾರು ಏಪ್ರಿಲ್​ 1ರಿಂದ ಇಲ್ಲಿಯವರೆಗೆ 577 ಮಕ್ಕಳು ಅನಾಥರಾಗಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಸಮೀಕ್ಷೆಯ ಬಳಿಕ ವರದಿ ಉಲ್ಲೇಖಿಸಿ ಮಾತನಾಡಿದರು.

ಪೋಷಕರನ್ನು ಕಳೆದುಕೊಂಡ ಮಕ್ಕಳನ್ನು ರಕ್ಷಿಸಲು ಸರ್ಕಾರ ಬದ್ಧವಾಗಿದೆ. 2021 ಏಪ್ರಿಲ್​ 1ರಿಂದ ನಿನ್ನೆ( ಮಂಗಳವಾರ) ಮಧ್ಯಾಹ್ನ 2 ಗಂಟೆಯವರೆಗೆ ಪೋಷಕರನ್ನು ಕಳೆದುಕೊಂಡ 577 ಮಕ್ಕಳನ್ನು ವರದಿ ಮಾಡಲಾಗಿದೆ. ಅವರ ಪೋಷಕರು ಕೊವಿಡ್​ಗೆ ಬಲಿಯಾಗಿದ್ದಾರೆ ಎಂದು ಸಚಿವೆ ಸ್ಮೃತಿ ಇರಾನಿ ಟ್ವೀಟ್​ ಮೂಲಕ ತಿಳಿಸಿದರು.

ಈ ಮಕ್ಕಳನ್ನು ಎಂದಿಗೂ ಕೈಬಿಡಲಾಗಿಲ್ಲ. ಜಿಲ್ಲೆಯ ಅಧಿಕಾರಿಗಳು ಅವರ ರಕ್ಷಣೆ ಮಾಡುತ್ತಿದ್ದಾರೆ. ಮಕ್ಕಳಿಗೆ ಕೌನ್ಸಲಿಂಗ್​ ಅಗತ್ಯವಿದ್ದರೆ, ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ನೀಡಲು ತಂಡ ಸಿದ್ಧವಾಗಿದೆ. ಈ ಮಕ್ಕಳ ಕಲ್ಯಾಣಕ್ಕಾಗಿ ಹಣದ ಕೊರತೆ ಆಗುವುದಿಲ್ಲ ಎಂದು ಅವರು ಹೇಳಿದರು.

ಕೇಂದ್ರವು, ರಾಜ್ಯ ಮತ್ತು ಜಿಲ್ಲೆಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದೆ. ಈ ಮೂಲಕ ಮಕ್ಕಳನ್ನು ರಕ್ಷಿಸುತ್ತಿದೆ. ಈ ಕುರಿತಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಸಭೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅನಾಥ ಮಕ್ಕಳ ಪಾಲನೆ- ಪೋಷಣೆಗೆ ಪ್ರತಿ ಜಿಲ್ಲೆಗೆ 10 ಲಕ್ಷ ರೂಪಾಯಿ ತೆಗೆದಿರಿಸಿದೆ ಎಂದು ಮಾಹಿತಿ ತಿಳಿದು ಬಂದಿದೆ.

ಕೊವಿಡ್​ನಿಂದ ಪೋಷಕರನ್ನು ಕಳೆದುಕೊಂಡ ಅನಾಥ ಮಕ್ಕಳ ಕುರಿತಾಗಿ ಸಂಬಂಧಿಸಿದ ಕಾರ್ಯಕರ್ತರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ(ಡಬ್ಲ್ಯುಸಿಡಿ) ಸಚಿವಾಲಯವು ಸಂಪರ್ಕಿಸಿದಾಗ, ಯಾವುದೇ ವಿವರಣೆಯನ್ನು ನೀಡಿಲ್ಲ ಎಂಬುದು ನೋವಿನ ಸಂಗತಿ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: 

Tamil Nadu Election 2021: ಭರ್ಜರಿ ಡ್ಯಾನ್ಸ್​ ಮಾಡಿ, ಸ್ಕೂಟರ್​ ರೈಡ್ ಮಾಡಿ ಚುನಾವಣಾ ಪ್ರಚಾರ ನಡೆಸಿದ ಸಚಿವೆ ಸ್ಮೃತಿ ಇರಾನಿ

Published On - 10:53 am, Wed, 26 May 21

Follow Us
10 ಸಾವಿರ ಜನರಿಗೆ ವಿಷ್ಣುವರ್ಧನ್ ಅಭಿಮಾನಿಗಳಿಂದ ವೆಜ್, ನಾನ್-ವೆಜ್ ಊಟ
10 ಸಾವಿರ ಜನರಿಗೆ ವಿಷ್ಣುವರ್ಧನ್ ಅಭಿಮಾನಿಗಳಿಂದ ವೆಜ್, ನಾನ್-ವೆಜ್ ಊಟ
ಸಂಕಷ್ಟದ ಸಮಯದಲ್ಲಿ 63 ರನ್ ಚಚ್ಚಿದ ರಜತ್ ಪಾಟಿದರ್
ಸಂಕಷ್ಟದ ಸಮಯದಲ್ಲಿ 63 ರನ್ ಚಚ್ಚಿದ ರಜತ್ ಪಾಟಿದರ್
ಮಳೆ: ಬೆಂಗಳೂರಿನಲ್ಲಿ ಲ್ಯಾಂಡ್​ ಆಗದೇ ವಾಪಸಾದ ರಾಜ್ಯಪಾಲರಿದ್ದ ವಿಮಾನ
ಮಳೆ: ಬೆಂಗಳೂರಿನಲ್ಲಿ ಲ್ಯಾಂಡ್​ ಆಗದೇ ವಾಪಸಾದ ರಾಜ್ಯಪಾಲರಿದ್ದ ವಿಮಾನ
ದಾವಣಗೆರೆ ಬೈ ಎಲೆಕ್ಷನ್ ರಿಸಲ್ಟ್ ಬಗ್ಗೆ ಜಾರಕಿಹೊಳಿ ಸ್ಫೋಟಕ ಹೇಳಿಕೆ
ದಾವಣಗೆರೆ ಬೈ ಎಲೆಕ್ಷನ್ ರಿಸಲ್ಟ್ ಬಗ್ಗೆ ಜಾರಕಿಹೊಳಿ ಸ್ಫೋಟಕ ಹೇಳಿಕೆ
‘ಕೋಟಿಗೊಬ್ಬ’ ಮರು ಬಿಡುಗಡೆ: ಫ್ಯಾನ್ಸ್ ಜೊತೆ ಸಿನಿಮಾ ನೋಡಿದ ಪ್ರಿಯಾಂಕಾ
‘ಕೋಟಿಗೊಬ್ಬ’ ಮರು ಬಿಡುಗಡೆ: ಫ್ಯಾನ್ಸ್ ಜೊತೆ ಸಿನಿಮಾ ನೋಡಿದ ಪ್ರಿಯಾಂಕಾ
ಅಮೆರಿಕದ ಜೊತೆ ಆಟವಾಡಬೇಡಿ; ಇರಾನ್​ಗೆ ಜೆಡಿ ವ್ಯಾನ್ಸ್ ಎಚ್ಚರಿಕೆ
ಅಮೆರಿಕದ ಜೊತೆ ಆಟವಾಡಬೇಡಿ; ಇರಾನ್​ಗೆ ಜೆಡಿ ವ್ಯಾನ್ಸ್ ಎಚ್ಚರಿಕೆ
ಪ್ರಗತಿ ಪರಿಶೀಲನಾ ಸಭೆಯಲ್ಲಿ ರುದ್ರಪ್ಪ ಲಮಾಣಿ ಕಣ್ಣೀರು
ಪ್ರಗತಿ ಪರಿಶೀಲನಾ ಸಭೆಯಲ್ಲಿ ರುದ್ರಪ್ಪ ಲಮಾಣಿ ಕಣ್ಣೀರು
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ