ಜಿ20 ಶೃಂಗಸಭೆಯು ವಿಶ್ವದ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಬಹುದೆಂದು ಸಾಬೀತುಪಡಿಸಿದೆ: ಜೋ ಬೈಡನ್

ಈ ಜಿ20 ಶೃಂಗಸಭೆಯಿಂದ ವಿಶ್ವದ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಬಹುದೆಂದು ಸಾಬೀತುಪಡಿಸಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದಾರೆ. ಜೋ ಬೈಡನ್ ಜಿ20 ಶೃಂಗಸಭೆಯ ಎರಡನೇ ಅಧಿವೇಶನದಲ್ಲಿ ಭಾಗವಹಿಸುತ್ತಿಲ್ಲ, ಭಾನುವಾರ ಬೆಳಗ್ಗೆ ವಿಯೆಟ್ನಾಂಗೆ ತೆರಳಿದ್ದಾರೆ. ಜಿ20 ಶೃಂಗಸಭೆಯನ್ನು ಶ್ಲಾಘಿಷಿಸಿರುವ ಜೋ ಬೈಡನ್ ಇದು ನಮ್ಮ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಬಹುದು ಎಂಬುದನ್ನು ಸಾಬೀತುಪಡಿಸಿದೆ ಎಂದಿದ್ದಾರೆ.

ಜಿ20 ಶೃಂಗಸಭೆಯು ವಿಶ್ವದ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಬಹುದೆಂದು ಸಾಬೀತುಪಡಿಸಿದೆ: ಜೋ ಬೈಡನ್
ಜೋ ಬೈಡನ್
Image Credit source: India Today

Updated on: Sep 10, 2023 | 12:00 PM

ಜಿ20 ಶೃಂಗಸಭೆಯಿಂದ ವಿಶ್ವದ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಬಹುದೆಂದು ಸಾಬೀತುಪಡಿಸಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್(Joe Biden) ತಿಳಿಸಿದ್ದಾರೆ. ಜೋ ಬೈಡನ್ ಜಿ20 ಶೃಂಗಸಭೆಯ ಎರಡನೇ ಅಧಿವೇಶನದಲ್ಲಿ ಭಾಗವಹಿಸುತ್ತಿಲ್ಲ, ಭಾನುವಾರ ಬೆಳಗ್ಗೆ ವಿಯೆಟ್ನಾಂಗೆ ತೆರಳಿದ್ದಾರೆ. ಜಿ20 ಶೃಂಗಸಭೆಯನ್ನು ಶ್ಲಾಘಿಷಿಸಿರುವ ಜೋ ಬೈಡನ್ ಇದು ನಮ್ಮ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಬಹುದು ಎಂಬುದನ್ನು ಸಾಬೀತುಪಡಿಸಿದೆ ಎಂದಿದ್ದಾರೆ.

ಜೋ ಬೈಡನ್ ಟ್ವೀಟ್ ಮಾಡಿದ್ದು, ಅದರಲ್ಲಿ ವಿಶ್ವದ ಆರ್ಥಿಕತೆಯು ಹವಾಮಾನ ಬಿಕ್ಕಟ್ಟು ಇನ್ನಿತರೆ ಸಮಸ್ಯೆಗಳಿಂದ ಬಳಲುತ್ತಿದೆ, ಈ ಶೃಂಗಸಭೆ ಈ ಎಲ್ಲಾ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಬಲ್ಲದು. ಭಾರತ-ಪಶ್ಚಿಮ ಏಷ್ಯಾ-ಯುರೋಪ್‌ನ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ಅಮೆರಿಕ, ಭಾರತ, ಸೌದಿ ಅರೇಬಿಯಾ, ಯುಎಇ, ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಯುರೋಪಿಯನ್ ಒಕ್ಕೂಟಗಳು ಒಪ್ಪಿಕೊಂಡಿವೆ, ಇದರಿಂದ ನನಗೆ ತುಂಬಾ ಸಂತೋಷವಾಗಿದೆ. ಇದಕ್ಕಾಗಿ ಐತಿಹಾಸಿಕ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ.

ಮತ್ತಷ್ಟು ಓದಿ: ಜಿ20- ಶೃಂಗಸಭೆ: ಹಸಿರು ಹವಾಮಾನ ನಿಧಿಗೆ 2 ಬಿಲಿಯನ್ ಡಾಲರ್ ಸಹಾಯ ಘೋಷಿಸಿದ ಬ್ರಿಟನ್ ಪ್ರಧಾನಿ ರಿಷಿ ಸುನಕ್

ದೆಹಲಿಯಿಂದ ಹೊರಡುವ ಮುನ್ನ ಬೈಡನ್ ರಾಜ್​ಘಾಟ್​ನಲ್ಲಿ ಮಹಾತ್ಮ ಗಾಂಧಿಗೆ ಗೌರವ ಸಲ್ಲಿಸಿದರು. ಇನ್ನು ವಿಯೆಟ್ನಾಂನಲ್ಲಿ ಅಮೆರಿಕ ಹಾಗೂ ವಿಯೆಟ್ನಾಂ ನಡುವಿನ ಸಹಕಾರದ ಕುರಿತು ಚರ್ಚೆ ನಡೆಸಲಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us