ಗುಜರಾತ್ ಸೇರಿದಂತೆ ಈ 4 ರಾಜ್ಯಗಳಿಂದ ಯಾರೂ ಬರುವಂತಿಲ್ಲ: ಸಿಎಂ ಯಡಿಯೂರಪ್ಪ

|

Updated on: May 18, 2020 | 8:34 PM

ಬೆಂಗಳೂರು: ಕೊರೊನಾ ಕಾಟದಿಂದಾಗಿ ಕೇಂದ್ರದ ಮಾರ್ಗಸೂಚಿಯಂತೆ 4ನೇ ಹಂತದ ಲಾಕ್‌ಡೌನ್‌ ಜಾರಿಗೊಳಿಸುವ ನಿಟ್ಟಿನಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ. ಪ್ರಮುಖವಾಗಿ ಇತರೆ ಕೆಲ ರಾಜ್ಯಗಳಿಂದ ಕರ್ನಾಟಕಕ್ಕೆ ಆಗಮಿಸುವವರಿಂದ ಕೊರೊನಾ ಸೋಂಕು ಹರಡುವ ಸಾಧ್ಯತೆಯಿದೆ. ಅದಕ್ಕೆ ಕಡಿವಾಣ ಹಾಕಲು ಸಿಎಂ ಯಡಿಯೂರಪ್ಪ ಕಟ್ಟುನಿಟ್ಟಾಗಿ 4 ರಾಜ್ಯಗಳಿಂದ ಯಾರೂ ಕರ್ನಾಟಕದೊಳಕ್ಕೆ ಬರುವುದು ಬೇಡ ಎಂದಿದ್ದಾರೆ. ಅಕಸ್ಮಾತ್ ಬಂದರೂ ತಪ್ಪದೇ ಕ್ವಾರಂಟೈನ್​ಗೆ ಒಳಪಡಲೇಬೇಕು ಎಂದಿದ್ದಾರೆ. ಮೇ 31 ರವರೆಗೂ ಯಾರೂ ಬರಬೇಡಿ: ಸೋಂಕು ಜಾಸ್ತಿಯಿರುವ ಗುಜರಾತ್, ಮಹಾರಾಷ್ಟ್ರ, ಕೇರಳ ಮತ್ತು […]

ಗುಜರಾತ್ ಸೇರಿದಂತೆ ಈ 4 ರಾಜ್ಯಗಳಿಂದ ಯಾರೂ ಬರುವಂತಿಲ್ಲ: ಸಿಎಂ ಯಡಿಯೂರಪ್ಪ
Follow us on

ಬೆಂಗಳೂರು: ಕೊರೊನಾ ಕಾಟದಿಂದಾಗಿ ಕೇಂದ್ರದ ಮಾರ್ಗಸೂಚಿಯಂತೆ 4ನೇ ಹಂತದ ಲಾಕ್‌ಡೌನ್‌ ಜಾರಿಗೊಳಿಸುವ ನಿಟ್ಟಿನಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ. ಪ್ರಮುಖವಾಗಿ ಇತರೆ ಕೆಲ ರಾಜ್ಯಗಳಿಂದ ಕರ್ನಾಟಕಕ್ಕೆ ಆಗಮಿಸುವವರಿಂದ ಕೊರೊನಾ ಸೋಂಕು ಹರಡುವ ಸಾಧ್ಯತೆಯಿದೆ. ಅದಕ್ಕೆ ಕಡಿವಾಣ ಹಾಕಲು ಸಿಎಂ ಯಡಿಯೂರಪ್ಪ ಕಟ್ಟುನಿಟ್ಟಾಗಿ 4 ರಾಜ್ಯಗಳಿಂದ ಯಾರೂ ಕರ್ನಾಟಕದೊಳಕ್ಕೆ ಬರುವುದು ಬೇಡ ಎಂದಿದ್ದಾರೆ. ಅಕಸ್ಮಾತ್ ಬಂದರೂ ತಪ್ಪದೇ ಕ್ವಾರಂಟೈನ್​ಗೆ ಒಳಪಡಲೇಬೇಕು ಎಂದಿದ್ದಾರೆ.

ಮೇ 31 ರವರೆಗೂ ಯಾರೂ ಬರಬೇಡಿ:
ಸೋಂಕು ಜಾಸ್ತಿಯಿರುವ ಗುಜರಾತ್, ಮಹಾರಾಷ್ಟ್ರ, ಕೇರಳ ಮತ್ತು ತಮಿಳುನಾಡು ರಾಜ್ಯಗಳಿಂದ ಜನ ಬರುವುದು ಬೇಡ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಇದು ಲಾಕ್​ಡೌನ್​ 4 ಮುಗಿಯುವವರೆಗೂ ಅಂದ್ರೆ ಮೇ 31 ರವರೆಗೂ ಈ ನಿಯಮ ಜಾರಿಯಲ್ಲಿರುತ್ತದೆ ಎಂದು ಅವರು ತಿಳಿಸಿದ್ದಾರೆ.

Published On - 2:35 pm, Mon, 18 May 20