
ಬೆಂಗಳೂರು, ಮೇ.14: ದೇಶದ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದದ್ದು ಕೇರಳಂ ಸಿಎಂ ಆಯ್ಕೆ. ಹೈಕಮಾಂಡ್ ಕೂಡ ಇದೊಂದು ತಲೆ ನೋವಾಗಿತ್ತು. ಇದೀಗ ಸಿಎಂ ಆಯ್ಕೆ ಆಗಿದೆ. ಟ್ರಂಪ್ ಚೀನಾ ಭೇಟಿ ಬಗ್ಗೆ ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಬುಧವಾರ ಬೀಸಿದ ಭೀಕರ ಬಿರುಗಾಳಿ ಮತ್ತು ಮಳೆಗೆ ರಾಜ್ಯಾದ್ಯಂತ ಇದುವರೆಗೆ 74 ಜನರು ಬಲಿಯಾಗಿದ್ದಾರೆ. ಅಡುಗೆ ಎಣ್ಣೆಯ ಬೆಲೆ ಏರಿಕೆಯ ಬೆನ್ನಲ್ಲೇ ಇದೀಗ ಅಕ್ಕಿ ದರವೂ ಏರಿಕೆಯಾಗುತ್ತಿದ್ದು, ಜನಸಾಮಾನ್ಯರಿಗೆ ಎರಡೆರಡು ಶಾಕ್ ಎದುರಾಗಿದೆ. ರಫ್ತು ಹೆಚ್ಚಳ ಹಾಗೂ ಕಚ್ಚಾ ವಸ್ತುಗಳ ಕೊರತೆಯಿಂದಾಗಿ ಬೆಂಗಳೂರಿನಲ್ಲಿ ಅಕ್ಕಿ ಬೆಲೆ ಪ್ರತಿ ಕೆಜಿಗೆ 10 ರೂಪಾಯಿವರೆಗೆ ಏರಿಕೆಯಾಗುವ ಸಾಧ್ಯತೆಯಿದೆ.
ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತ ಗಳಿಸಿದ ಹತ್ತು ದಿನಗಳ ನಂತರ, ಕಾಂಗ್ರೆಸ್ ಹೈಕಮಾಂಡ್ ಕೊನೆಗೂ ಮುಖ್ಯಮಂತ್ರಿ ಅಭ್ಯರ್ಥಿಯ ಗೊಂದಲಕ್ಕೆ ತೆರೆ ಎಳೆದಿದೆ. ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಹಿರಿಯ ನಾಯಕ ವಿ.ಡಿ.ಸತೀಶನ್ (V.D. Satheesan) ಅವರನ್ನು ಎಐಸಿಸಿ ಇಂದು (ಮೇ 14) ಅಧಿಕೃತವಾಗಿ ಪ್ರಕಟಿಸಿದೆ. ಇನ್ನು ಸಿಎಂ ಸ್ಥಾನಕ್ಕೆ ಭಾರೀ ಪೈಪೋಟಿಗಳು ನಡೆದಿತ್ತು. ವೇಣುಗೋಪಾಲ್ ಕೂಡ ಈ ಮುಂಚೂಣಿಯಲ್ಲಿ ಇದ್ದರು.
ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯು ಸಾರ್ವಜನಿಕರ ಬಜೆಟ್ ಅನ್ನು ಅಸ್ತವ್ಯಸ್ತಗೊಳಿಸುತ್ತಿದೆ. ಇತ್ತೀಚೆಗಷ್ಟೇ ಅಡುಗೆ ಎಣ್ಣೆಯ ಬೆಲೆ ಗಗನಕ್ಕೇರಿತ್ತು, ಇದರ ಬೆನ್ನಲ್ಲೇ ಈಗ ದೈನಂದಿನ ಆಹಾರವಾದ ಅಕ್ಕಿಯ ಬೆಲೆಯೂ ಏರಿಕೆಯ ಹಾದಿಯಲ್ಲಿದೆ. ಬೆಂಗಳೂರಿನ ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ ಪ್ರತಿ ಕೆಜಿಗೆ 5 ರಿಂದ 10 ರೂಪಾಯಿವರೆಗೆ ಏರಿಕೆಯಾಗುವ ಲಕ್ಷಣಗಳು ಕಾಣುತ್ತಿವೆ.
ಇದನ್ನೂ ಓದಿ: ಕೊನೆಗೂ ಕೇರಳದ ಸಿಎಂ ಹೆಸರು ಘೋಷಿಸಿದ AICC: ವಿ.ಡಿ.ಸತೀಶನ್ ದೇವರನಾಡಿನ ನೂತನ ಮುಖ್ಯಮಂತ್ರಿ
ಜಗತ್ತಿನ ಎರಡು ಬಲಿಷ್ಠ ರಾಷ್ಟ್ರಗಳಾದ ಅಮೆರಿಕ ಮತ್ತು ಚೀನಾ ಪರಸ್ಪರ ಪ್ರತಿಸ್ಪರ್ಧಿಗಳಾಗುವ ಬದಲು ಪಾಲುದಾರರಾಗಬೇಕು ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಪ್ರತಿಪಾದಿಸಿದ್ದಾರೆ. ಬೀಜಿಂಗ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ನಡೆಸಿದ ದ್ವಿಪಕ್ಷೀಯ ಸಭೆಯಲ್ಲಿ ಅವರು ಈ ಮಹತ್ವದ ಸಂದೇಶ ನೀಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:51 pm, Thu, 14 May 26