ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಬಿಆರ್‌ಎಸ್ ಹೆಚ್ಚು ಕಾಣಿಸಿಕೊಂಡಿಲ್ಲ, ಕೆಸಿಆರ್ ಮೌನದ ಹಿಂದಿನ ರಹಸ್ಯವೇನು?

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 19, 2024 | 3:13 PM

ರಾಜಕಾರಣ ಚದುರಂಗದಂತಿದೆ. ಯಾವಾಗ ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇದು ಇಡೀ ರಾಜಕೀಯ ಅಸ್ತಿತ್ವವನ್ನೇ ಪ್ರಶ್ನಿಸುತ್ತದೆ. ರಾಜಕೀಯದಲ್ಲಿ ಉಚ್ಛ್ರಾಯಕ್ಕೆ ತಲುಪಿದ ಮಹಾನ್ ನಾಯಕರು ಸೋತ ನಂತರ ಪಾಠ ಕಲಿತಿದ್ದಾರೆ. ಈಗ ಇದೆಲ್ಲ ಹೇಳುತ್ತಿರುವುದು ಬಿಆರ್ ಎಸ್ ಪಕ್ಷದ ಬಗ್ಗೆ.

ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಬಿಆರ್‌ಎಸ್ ಹೆಚ್ಚು ಕಾಣಿಸಿಕೊಂಡಿಲ್ಲ, ಕೆಸಿಆರ್ ಮೌನದ ಹಿಂದಿನ ರಹಸ್ಯವೇನು?
ಕೆಸಿಆರ್ ಮೌನದ ಹಿಂದಿನ ರಹಸ್ಯವೇನು?
Follow us on

ರಾಜಕೀಯ ಚಾಣಾಕ್ಷತೆಯಲ್ಲಿ ಕೆ ಚಂದ್ರಶೇಖರರಾವ್​ ಅವರನ್ನು ಮೀರಿಸುವವರು ಯಾರು.. ಸಂಸತ್ ಚುನಾವಣೆಗೂ ಮುನ್ನವೇ ಪ್ರಮುಖ ನಾಯಕರು ಪಕ್ಷ ತೊರೆಯುತ್ತಿದ್ದಾರೆ.. ಮದ್ಯ ಪ್ರಕರಣದಲ್ಲಿ ಕವಿತಾ ಬಂಧನವಾದರೂ ಬಿಆರ್ ಎಸ್ ಪಕ್ಷದ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಇಂಥದ್ದಕ್ಕೆಲ್ಲ ಹೆದರುವುದಿಲ್ಲ ಎಂಬಂತಿದ್ದಾರೆ. ತಮ್ಮ ರಾಜಕೀಯ ಚಾಣಾಕ್ಷತೆಯಿಂದ ಆರ್.ಎಸ್.ಪ್ರವೀಣ್ ಕುಮಾರ್ ಅವರಂತಹವರನ್ನೂ ಬಿಆರ್ ಎಸ್ ಸೇರುವಂತೆ ಪ್ರೇರೇಪಿಸಿದ್ದಾರೆ. ಅವರ ಜತೆಗೆ ಬಹುಜನ ನಾಯಕರನ್ನು ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಆದರೆ ಕಷ್ಟಕಾಲದಲ್ಲಿ ತನಗೆ ಇಂತಹವರೇ ಬೇಕಾಗಿರುವುದು ಎಂದು ನಿನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೆಸಿಆರ್ ಪರೋಕ್ಷವಾಗಿ ಹೇಳಿದ್ದಾರೆ. ನಾಯಕರು ಹೋದರೂ ಕೇಡರ್ ಉಳಿಯುವಂತೆ ನೋಡಿಕೊಳ್ಳುತ್ತಿದ್ದಾರೆ. ಲೋಕಸಭೆ ಚುನಾವಣೆ ಬಳಿಕ ಕೆಸಿಆರ್ ನಾನಾ ಜಿಲ್ಲೆಗಳಿಗೆ ಭೇಟಿ ನೀಡಿ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಸರಣಿ ಸಭೆ ನಡೆಸಬೇಕು ಎಂಬುದು ಪಕ್ಷದ ಮುಖಂಡರ ಅಭಿಪ್ರಾಯ. ಈ ಹಿನ್ನೆಲೆಯಲ್ಲಿ ಕೆಸಿಆರ್ ಯಾವ ರೀತಿ ನಡೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ರಾಜಕಾರಣ ಚದುರಂಗದಂತಿದೆ. ಯಾವಾಗ ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವೊಮ್ಮೆ ಉಚ್ಛ್ರಾಯ ಅಧಿಕಾರಕ್ಕೆ ಕರೆದೊಯ್ದರೆ ಮರು ಕ್ಷಣವೇ ಪಾತಾಳ ತೋರಿಸಿರುತ್ತದೆ. ಇದು ಇಡೀ ರಾಜಕೀಯ ಅಸ್ತಿತ್ವವನ್ನೇ ಪ್ರಶ್ನಿಸುತ್ತದೆ. ರಾಜಕೀಯದಲ್ಲಿ ಉಚ್ಛ್ರಾಯಕ್ಕೆ ತಲುಪಿದ ಮಹಾನ್ ನಾಯಕರು ಸೋತ ನಂತರ ಪಾಠ ಕಲಿತಿದ್ದಾರೆ. ಈಗ ಇದೆಲ್ಲ ಹೇಳುತ್ತಿರುವುದು ಬಿಆರ್ ಎಸ್ ಪಕ್ಷದ ಬಗ್ಗೆ.

ಹತ್ತು ವರ್ಷಗಳ ಕಾಲ ಅಧಿಕಾರದಲ್ಲಿದ್ದು ದೆಹಲಿಯನ್ನೂ ನಡುಗಿಸಿರುವ, ತೆಲಂಗಾಣ ಚಳವಳಿಯ ಪಕ್ಷವಾಗಿ ಬಿಆರ್‌ಎಸ್‌ಗೆ ಬಲವಾದ ಗುರುತಿದೆ. ಕೇಂದ್ರದ ಮೋದಿ ಸರಕಾರಕ್ಕೆ ಕಂಟಕ ಎನ್ನುವಷ್ಟರ ಮಟ್ಟಿಗೆ ಬಿಆರ್ ಎಸ್ ತನ್ನ ಪ್ರಭಾವ ಬೀರಿತ್ತು. ಆದರೆ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಆರ್‌ಎಸ್ ಪಕ್ಷ 39 ಸ್ಥಾನಗಳನ್ನು ಗೆದ್ದು ಪ್ರತಿಪಕ್ಷಕ್ಕೆ ಸೀಮಿತವಾಗಿಬಿಟ್ಟಿದೆ. ಆದರೆ, ಈ ಅನಿರೀಕ್ಷಿತ ಬೆಳವಣಿಗೆ ಕೆಸಿಆರ್ ಮತ್ತು ಬಿಆರ್‌ಎಸ್ ಪಕ್ಷಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ವಿರೋಧ ಪಕ್ಷವಾಗಿ ಪ್ರಬಲ ಧ್ವನಿಯನ್ನು ಎತ್ತಬೇಕಿರುವ ಕಾಲದಲ್ಲಿ ಕಾಳೇಶ್ವರಂ, ಲಿಕ್ಕರ್ ಹಗರಣವು ಪಕ್ಷದ ನಾಯಕರನ್ನು ವಿಧಾನಸಭೆಯಲ್ಲಿ ಉಸಿರುಗಟ್ಟಿಸಿದೆ. ಕಳೆದ ಹತ್ತು ವರ್ಷಗಳಿಂದ ಅಧಿಕಾರದಲ್ಲಿದ್ದ ನಾಯಕರೆಲ್ಲ ಈಗ ಕೈ ಬಿಡುತ್ತಿರುವುದರಿಂದ ಬಿಆರ್ ಎಸ್ ಮುಖಂಡರಲ್ಲಿ ಸಹಜವಾಗಿಯೇ ಗೊಂದಲ ಮೂಡಿದೆ. ಮಾಜಿ ಶಾಸಕ ಅರೂರಿ ರಮೇಶ್, ಚೇವೆಲ್ಲಾ ಸಂಸದ ರಂಜಿತ್ ರೆಡ್ಡಿ, ಖೈರತಾಬಾದ್ ಶಾಸಕ ದಾನಂ, ಬೊಂತು ರಾಮಮೋಹನ್, ಗ್ರೇಟರ್ ಹೈದರಾಬಾದ್‌ನಲ್ಲಿ ಬಾಬಾ ಫಸಿಯುದ್ದೀನ್ ಮತ್ತು ಪ್ರಮುಖ ಕಾರ್ಪೊರೇಟರ್‌ಗಳು ಕೈ ಪಕ್ಷದ ಜೊತೆ ಕೈ ಜೋಡಿಸಿ ಬಿಆರ್‌ಎಸ್‌ಗೆ ಅನಿರೀಕ್ಷಿತ ಶಾಕ್ ನೀಡಿದ್ದಾರೆ. ಮಾಜಿ ಸಚಿವ ಮಲ್ಲಾರ್ ರೆಡ್ಡಿ ಕೂಡ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದೇ ರೀತಿ ಪಕ್ಷಕ್ಕೆ ಗುಡ್ ಬೈ ಹೇಳಲು ಇನ್ನೂ ಹಲವು ನಾಯಕರು ಚಿಂತನೆ ನಡೆಸುತ್ತಿರುವಂತೆ ಕಾಣುತ್ತಿದೆ.

Published On - 2:21 pm, Tue, 19 March 24