ಮಾಜಿ ಗರ್ಲ್​ಫ್ರೆಂಡ್​ಗೆ ಬೇರೊಬ್ಬನ ಜತೆ ಸಂಬಂಧ, ಸ್ನೇಹಿತರ ಜತೆ ಸೇರಿ ಆಕೆಯ ಮೇಲೆ ಅತ್ಯಾಚಾರ

ಮಾಜಿ ಪ್ರಿಯಕರನೊಬ್ಬ ತನ್ನ ಮಾಜಿ ಗೆಳತಿ ಮೇಲೆ ಸ್ನೇಹಿತರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಮಹಾರಾಷ್ಟ್ರದ ಭಿವಂಡಿಯಲ್ಲಿ ನಡೆದಿದೆ. ಫೆಬ್ರವರಿ 20ರಂದು ಬೆಳಗ್ಗೆ ಶಾಲೆಯ ಬಳಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಯಿತು. ಟೈಮ್ಸ್​ ಆಫ್​ ಇಂಡಿಯಾ ವರದಿ ಪ್ರಕಾರ, ಆ ಯುವತಿಯನ್ನು ಆಕೆಯ ಮಾಜಿ ಗೆಳೆಯ ಅಪಹರಿಸಿದ ತನ್ನ ನಾಲ್ವರು ಸ್ನೇಹಿತರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾನೆ.

ಮಾಜಿ ಗರ್ಲ್​ಫ್ರೆಂಡ್​ಗೆ ಬೇರೊಬ್ಬನ ಜತೆ ಸಂಬಂಧ, ಸ್ನೇಹಿತರ ಜತೆ ಸೇರಿ ಆಕೆಯ ಮೇಲೆ ಅತ್ಯಾಚಾರ
ಅಪರಾಧ
Image Credit source: India Today

Updated on: Feb 24, 2025 | 10:02 AM

ನಿನ್ನೆಯವರೆಗೂ ಈಕೆ ತನ್ನ ಗೆಳತಿ ಎಂದು ಖುಷಿ ಪಡುತ್ತಿದ್ದ ವ್ಯಕ್ತಿ ಈಗ ಆಕೆ ಬೇರೊಬ್ಬನ ಜತೆ ಸಂಬಂಧದಲ್ಲಿದ್ದಾಳೆಂದು ತಿಳಿದು ತನ್ನ ಪ್ರೀತಿಯನ್ನೇ ಮರೆತು ಮೃಗನಂತೆ ವರ್ತಿಸಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಆತ ಮಾಜಿ ಗೆಳತಿ ಮೇಲೆ ಸ್ನೇಹಿತರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಮಹಾರಾಷ್ಟ್ರ ಭಿವಂಡಿಯಲ್ಲಿ ನಡೆದಿದೆ. 22 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ .

ಫೆಬ್ರವರಿ 20ರಂದು ಬೆಳಗ್ಗೆ ಶಾಲೆಯ ಬಳಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಯಿತು. ಟೈಮ್ಸ್​ ಆಫ್​ ಇಂಡಿಯಾ ವರದಿ ಪ್ರಕಾರ, ಆ ಯುವತಿಯನ್ನು ಆಕೆಯ ಮಾಜಿ ಗೆಳೆಯ ಅಪಹರಿಸಿದ ತನ್ನ ನಾಲ್ವರು ಸ್ನೇಹಿತರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾನೆ.

ಮಹಿಳೆ ಮತ್ತು ಅತ್ಯಾಚಾರವೆಸಗಿದ ವ್ಯಕ್ತಿ ಕೆಲವು ವರ್ಷಗಳಿಂದ ರಿಲೇಷನ್​ಶಿಪ್​ನಲ್ಲಿದ್ದರು ಆಕೆ ಆತನನ್ನು ಬಿಟ್ಟು ಬೇರೊಬ್ಬನನ್ನು ಪ್ರೀತಿಸಿದ್ದನ್ನು ಅರಗಿಸಿಕೊಳ್ಳಲಾಗದೆ ಫೆಬ್ರವರಿ 19ರಂದು ರಾತ್ರಿ ಯುವತಿಯ ಸಹೋದರನನ್ನು ಅಪಹರಿಸಿದ್ದರು. ನಂತರ ಆತನಿಗೆ ತನ್ನ ತಂಗಿಗೆ ಕರೆ ಮಾಡಿ ಇಲ್ಲಿಗೆ ಬರುವಂತೆ ಹೇಳು ಎಂದು ಹೇಳಿದ್ದಾನೆ.
ಆತ ಕರೆ ಮಾಡಿ ತಂಗಿಗೆ ಬರುವಂತೆ ಕೇಳಿಕೊಂಡಿದ್ದಾನೆ, ಆಕೆ ಸ್ಥಳಕ್ಕೆ ಬಂದಾಗ ಆರೋಪಿಗಳು ಆಕೆಯ ಸಹೋದರ ಮತ್ತು ಆಕೆಯನ್ನು ಕರೆದೊಯ್ಯುತ್ತಿದ್ದ ಆಟೋರಿಕ್ಷಾ ಚಾಲಕನನ್ನು ಥಳಿಸಿ ಆಕೆಯನ್ನು ಎಳೆದುಕೊಂಡು ಹೋಗಿದ್ದಾರೆ.

ಮತ್ತಷ್ಟು ಓದಿ: ಮಹಾರಾಷ್ಟ್ರ: ಮನೆಗೆ ಬಂದ ನವವಧು ಮೇಲೆ ಮಾವ, ಆತನ ಸ್ನೇಹಿತನಿಂದ ಅತ್ಯಾಚಾರ

ಆರೋಪಿಗಳು ನಾಗಾಂವ್‌ನ ಶಾಲೆಯ ಬಳಿ ಮತ್ತು ಫಾತಿಮಾನಗರದ ಪಿಕಪ್ ವ್ಯಾನ್‌ನೊಳಗೆ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾರೆ. ಯುವತಿ ಮೇಲೆ ಎರಡು ವಿಭಿನ್ನ ಸ್ಥಳಗಳಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಸೂಚಿಸುತ್ತದೆ. ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ ನಂತರ ಆಕೆ ಪೊಲೀಸ್ ಠಾಣೆಗೆ ಬಂದು ದೂರು ಕೊಟ್ಟಿದ್ದಾಳೆ.

ಎಲ್ಲಾ ಆರು ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಅಡಿಯಲ್ಲಿ ಅತ್ಯಾಚಾರ, ಸಾಮೂಹಿಕ ಅತ್ಯಾಚಾರ ಮತ್ತು ಇತರ ಅಪರಾಧಗಳಿಗೆ ವಿವಿಧ ವಿಭಾಗಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದ್ದು, ಅವರನ್ನು ಇನ್ನೂ ಬಂಧಿಸಲಾಗಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us