ಕೌಟುಂಬಿಕ ಕಲಹ ವ್ಯಕ್ತಿಯ ಹತ್ಯೆ, ದೇಹದಲ್ಲಿ 69 ಗುಂಡುಗಳು ಪತ್ತೆ

ದೀರ್ಘಕಾಲದ ಕೌಟುಂಬಿಕ ಕಲಹ ಹತ್ಯೆ(Murder)ಯಲ್ಲಿ ಅಂತ್ಯಗೊಂಡಿದೆ. ನವೆಂಬರ್ 30ರಂದು ದಕ್ಷಿಣ ದೆಹಲಿಯ ಆಯಾ ನಗರದಲ್ಲಿ ಈ ಘಟನೆ ನಡೆದಿದೆ. 52 ವರ್ಷದ ರತನ್ ಲೋಹಿಯಾ ಎಂಬುವವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ.ಅವರ ದೇಹದಲ್ಲಿ 69 ಗುಂಡುಗಳು ಪತ್ತೆಯಾಗಿವೆ. ಕಾರಿನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಹತ್ಯೆಗೆ ಸುಪಾರಿಕೊಟ್ಟು ಕಿಲ್ಲರ್​ಗಳನ್ನು ನೇಮಿಸಿಕೊಂಡಿರಬಹುದು ಎನ್ನುವ ಅನುಮಾನ ಮೂಡಿದೆ. ರತನ್ ಲೋಹಿಯಾ ಕೆಲಸಕ್ಕಾಗಿ ಮನೆಯಿಂದ ಹೊರಗೆ ಬಂದಾಗ , ಪುರುಷರ ಗುಂಪೊಂದು ಅವರನ್ನು ಸುತ್ತುವರೆದು ಗುಂಡಿನ ಸುರಿಮಳೆಗೈದಿದ್ದರು. ರತನ್ ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಕೌಟುಂಬಿಕ ಕಲಹ ವ್ಯಕ್ತಿಯ ಹತ್ಯೆ, ದೇಹದಲ್ಲಿ 69 ಗುಂಡುಗಳು ಪತ್ತೆ
ರತನ್

Updated on: Dec 19, 2025 | 11:18 AM

ನವದೆಹಲಿ, ಡಿಸೆಂಬರ್ 19: ದೀರ್ಘಕಾಲದ ಕೌಟುಂಬಿಕ ಕಲಹ ಹತ್ಯೆ(Murder)ಯಲ್ಲಿ ಅಂತ್ಯಗೊಂಡಿದೆ. ನವೆಂಬರ್ 30ರಂದು ದಕ್ಷಿಣ ದೆಹಲಿಯ ಆಯಾ ನಗರದಲ್ಲಿ ಈ ಘಟನೆ ನಡೆದಿದೆ. 52 ವರ್ಷದ ರತನ್ ಲೋಹಿಯಾ ಎಂಬುವವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ.ಅವರ ದೇಹದಲ್ಲಿ 69 ಗುಂಡುಗಳು ಪತ್ತೆಯಾಗಿವೆ. ಕಾರಿನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಹತ್ಯೆಗೆ ಸುಪಾರಿಕೊಟ್ಟು ಕಿಲ್ಲರ್​ಗಳನ್ನು ನೇಮಿಸಿಕೊಂಡಿರಬಹುದು ಎನ್ನುವ ಅನುಮಾನ ಮೂಡಿದೆ.
ರತನ್ ಲೋಹಿಯಾ ಕೆಲಸಕ್ಕಾಗಿ ಮನೆಯಿಂದ ಹೊರಗೆ ಬಂದಾಗ , ಪುರುಷರ ಗುಂಪೊಂದು ಅವರನ್ನು ಸುತ್ತುವರೆದು ಗುಂಡಿನ ಸುರಿಮಳೆಗೈದಿದ್ದರು. ರತನ್ ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಅಪರಾಧ ನಡೆದ ಸ್ಥಳವನ್ನು ತಲುಪಿದಾಗ, ಪೊಲೀಸರು ಖಾಲಿ ಶೆಲ್‌ಗಳು ಮತ್ತು ಮೂರು ಲೈವ್ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡರು. ನವೆಂಬರ್ 30 ರಂದು ಬೆಳಗ್ಗೆ 6 ಗಂಟೆಯ ಸುಮಾರಿಗೆ ಆಯಾ ನಗರದ ಭಾನುವಾರ ಮಾರುಕಟ್ಟೆಯ ಬಳಿ ಕಪ್ಪು ಬಣ್ಣದ ನಿಸ್ಸಾನ್ ಮ್ಯಾಗ್ನೈಟ್ ಕಾರಿನಲ್ಲಿ ಮೂವರು ದಾಳಿಕೋರರು ರತನ್​ಗಾಗಿ ಕಾಯುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ತೋರಿಸಿವೆ. ಕಾರಿನ ನಂಬರ್ ಪ್ಲೇಟ್‌ಗಳನ್ನು ಉದ್ದೇಶಪೂರ್ವಕವಾಗಿ ತೆಗೆದುಹಾಕಲಾಗಿದೆ ಎಂದು ತಿಳಿದುಬಂದಿದೆ.

ರಾಂಬೀರ್ ಲೋಹಿಯಾ ಮತ್ತು ಆತನ ಸಂಬಂಧಿಕರು ರಾಂಬೀರ್ ಅವರ ಮಗ ಅರುಣ್ ಸಾವಿಗೆ ಸೇಡು ತೀರಿಸಿಕೊಳ್ಳಲು ಈ ಕೊಲೆ ಮಾಡಿದ್ದಾರೆ ಎಂದು ರತನ್ ಕುಟುಂಬ ಆರೋಪಿಸಿದೆ. ಮೇ 15 ರಂದು, ಅರುಣ್ ತನ್ನ ಕಾರಿನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ, ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಗುಂಡು ಹಾರಿಸಿ ಅವರನ್ನು ಕೊಂದಿದ್ದರು. ಅರುಣ್ ಸಾವಿನ ಪ್ರಕರಣದಲ್ಲಿ ರತನ್ ಅವರ ಹಿರಿಯ ಮಗ ದೀಪಕ್​ನನ್ನು ಬಂಧಿಸಲಾಗಿತ್ತು.

ಮತ್ತಷ್ಟು ಓದಿ: ಜಾಗದ ವಿಚಾರಕ್ಕೆ ನಡೀತು ಬರ್ಬರ ಕೊಲೆ: ತೋಟದಲ್ಲೇ ಹರಿದ ನೆತ್ತರು

ರತನ್ ಅವರ ಮಗಳು ನೀಡಿರುವ ಮಾಹಿತಿ ಪ್ಕಾರ, ರಾಂಬೀರ್ ಮತ್ತು ಅವರ ಸಂಬಂಧಿಕರು ತಮ್ಮ ತಂದೆಗೆ ಬಹಳ ಸಮಯದಿಂದ ಬೆದರಿಕೆ ಹಾಕುತ್ತಿದ್ದರು, ತಮ್ಮ ತಂದೆಗೆ ಯಾರೊಂದಿಗೂ ವೈಯಕ್ತಿಕ ದ್ವೇಷವಿಲ್ಲ ಎಂದು ಅವರು ಹೇಳಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ