ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ಮತ್ತು ಇಂಧೋರ್ ವಿಮಾನ ನಿಲ್ದಾಣಗಳಿಂದ ವಿಮಾನಗಳನ್ನು ಅಪಹರಿಸಿ, ಪಾಕಿಸ್ತಾನಕ್ಕೆ ತೆಗೆದುಕೊಂಡು ಹೋಗುತ್ತೇನೆ ಎಂದು ಬೆದರಿಕೆ ಹಾಕಿದ್ದ 34 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತ ಮಧ್ಯಪ್ರದೇಶದ ಶುಜಾಲ್ಪುರದವನು ಎಂಬುದು ವಿಚಾರಣೆಯ ವೇಳೆ ಗೊತ್ತಾಗಿದೆ.
ಭೋಪಾಲ್ನ ಗಾಂಧಿನಗರ ಪೊಲೀಸ್ ಠಾಣೆಯ ಮುಖ್ಯ ಅಧಿಕಾರಿ ಅರುಣ್ ಶರ್ಮಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಜಾ ಭೋಜ್ ಏರ್ಪೋರ್ಟ್ಗೆ ಮಂಗಳವಾರ ಸಂಜೆ 5ಗಂಟೆಯ ಹೊತ್ತಿಗೆ ಅಪರಿಚಿತ ಕರೆಯೊಂದು ಬಂದಿತ್ತು. ವಿಮಾನ ಅಪಹರಣ ಮಾಡುವುದಾಗಿ ಬೆದರಿಕೆ ಹಾಕಿದ್ದ. ಏರ್ಪೋರ್ಟ್ನವರು ಕೂಡಲೇ ನಮಗೆ ಕರೆ ಮಾಡಿ ವಿಷಯ ತಿಳಿಸಿದರು. ನಾವು ಕಾಲ್ ಟ್ರೇಸ್ ಮಾಡಿ ಈತನನ್ನು ಪತ್ತೆಹಚ್ಚಿದ್ದೇವೆ. ವಿಚಾರಣೆಗಾಗಿ ಬಂಧಿಸಿದ್ದೇವೆ ಎಂದು ತಿಳಿಸಿದ್ದಾರೆ.
ವಿಮಾನ ಅಪಹರಣ ಮಾಡುವ ಬೆದರಿಕೆ ಹಾಕಿದ್ದ ಈತನನ್ನು ಮಂಗಳವಾರ ರಾತ್ರಿ ಶುಜಾಲ್ಪುರ್ ಪಟ್ಟಣದಲ್ಲಿ (ಭೋಪಾಲ್ಗಿಂತ 100 ಕಿಮೀ ದೂರದಲ್ಲಿದೆ) ಬಂಧಿಸಲಾಗಿದೆ. ಇವನನ್ನು ಸಮಗ್ರವಾಗಿ ವಿಚಾರಣೆಗೆ ಒಳಪಡಿಸಲಾಗಿದೆ. ಈತನಿಂದ ಕರೆ ಬಂದ ಬಳಿಕ ಮುಂಬೈಗೆ ಭೋಪಾಲ್ನಿಂದ ತೆರಳಿದ್ದ ವಿಮಾನವನ್ನು ಸರಿಯಾಗಿ ತಪಾಸಣೆ ಮಾಡಲಾಗಿದೆ. ವಿಮಾನ ನಿಲ್ದಾಣಗಳಲ್ಲಿ ಭದ್ರತೆಯನ್ನೂ ಹೆಚ್ಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ:Pvt Schools Fees Torcher : ‘ಸಚಿವರು ಖಾಸಗಿ ಶಾಲೆಗಳ ಜತೆ ಶಾಮೀಲಾದಂತೆ ಕಾಣ್ತಿದೆ’
Man who threatens to hijack planes is arrested in Bhopal
Published On - 5:02 pm, Wed, 9 June 21