ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಕರೆಯ ಮೇರೆಗೆ ದೇಶಾದ್ಯಂತ ಮೇರಿ ಮಾಠಿ ಮೇರಾ ದೇಶ್ ಅಭಿಯಾನ ನಡೆಸಲಾಗುತ್ತಿದೆ. ಈ ಕಾರ್ಯಕ್ರಮದಡಿ ದೇಶಾದ್ಯಂತ ಹುತಾತ್ಮರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದರಂತೆ ಇಂದು (ಆಗಸ್ಟ್ 27) ಒಡಿಶಾದ ರಾಜಧಾನಿ ಐಐಟಿ (IIT) ಭುವನೇಶ್ವರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಶಿಕ್ಷಣ ಮತ್ತು ಕೌಶಲ್ಯ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಭಾಗವಹಿಸಿ ವಿದ್ಯಾರ್ಥಿಗಳಿಗೆ ಪ್ರತಿಜ್ಞೆ ಬೋಧಿಸಿದರು.
ಐಐಟಿಯ ವಿದ್ಯಾರ್ಥಿಗಳು ಭಾರತದ ಬೃಹತ್ ನಕ್ಷೆಯನ್ನು ತಯಾರಿಸಿದರು. ನಂತರ, ಧರ್ಮೇಂದ್ರ ಪ್ರಧಾನ್ ಅವರು ಅಲ್ಲಿದ್ದ ವಿದ್ಯಾರ್ಥಿಗಳಿಗೆ ಮತ್ತು ಜನರಿಗೆ ಗುಲಾಮಗಿರಿಯ ಮನಸ್ಥಿತಿಯನ್ನು ಕಿತ್ತುಹಾಕಲು ಮತ್ತು 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಾಧಿಸುವ ಪ್ರತಿಜ್ಞೆಯನ್ನು ಬೋಧಿಸಿದರು.
ಇದನ್ನೂ ಓದಿ: ಇಂದಿನಿಂದ ‘ಮೇರಿ ಮಾಠಿ ಮೇರಾ ದೇಶ್’ ಅಭಿಯಾನ ಶುರು, ಎಲ್ಲಿಯವರೆಗೆ ನಡೆಯುತ್ತೆ, ಉದ್ದೇಶವೇನು ಇಲ್ಲಿದೆ ಮಾಹಿತಿ
ಮೈದಾನದಲ್ಲಿ ವಿವಿಧ ಐಐಟಿ ಸಂಸ್ಥೆಗಳ ವಿದ್ಯಾರ್ಥಿಗಳು ಸೇರಿ ಭಾರತದ ಬೃಹತ್ ಭೂಪಟವನ್ನು ತಯಾರಿಸಲಾಯಿತು. ಹುತಾತ್ಮರ ಸ್ಮರಣಾರ್ಥ ಎಲ್ಲರ ಸಹಕಾರದೊಂದಿಗೆ ಈ ಸ್ಥಳದಲ್ಲಿ ಸ್ಮಾರಕವನ್ನು ನಿರ್ಮಿಸಬೇಕೆಂದು ಧರ್ಮೇಂದ್ರ ಪ್ರಧಾನ್ ಇದೇ ವೇಳೆ ಒತ್ತಾಯಿಸಿದರು.
My address at #MeraMaatiMeraDesh program in @iitbbs campus. https://t.co/1YUxPfZXZE
— Dharmendra Pradhan (@dpradhanbjp) August 28, 2023
ಐಐಟಿ ಭುವನೇಶ್ವರದಲ್ಲಿ ನೆರೆದಿದ್ದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಧರ್ಮೇಂದ್ರ ಪ್ರಧಾನ್, ಮೇರಿ ಮಾಠಿ ಮೇರಾ ದೇಶ್ ಕಾರ್ಯಕ್ರಮದಡಿ ದೇಶದ ಪ್ರತಿಯೊಂದು ಪ್ರದೇಶದಿಂದ ಮಣ್ಣನ್ನು ಸಂಗ್ರಹಿಸಿ ದೆಹಲಿಗೆ ತರುವ ಯೋಜನೆ ಬಗ್ಗೆಯೂ ತಿಳಿಸಿದರು. ಅಲ್ಲದೆ, ಇತ್ತೀಚೆಗೆ ಚಂದ್ರಯಾನ 3 ರ ಯಶಸ್ಸನ್ನು ಪ್ರಸ್ತಾಪಿಸಿ ಭಾರತವು ಚಂದ್ರಯಾನ 3 ಮೂಲಕ ಚಂದಮಾಮವನ್ನು ತನ್ನದಾಗಿಸಿಕೊಂಡಿದೆ ಎಂದರು. ಅವರು ಇದನ್ನು ಭಾರತದ ಸಾಮೂಹಿಕ ಸಾಧನೆ ಎಂದು ಕರೆದರು.
ಧರ್ಮೇಂದ್ರ ಪ್ರಧಾನ್ ಅವರು ಐಐಟಿ ಭುವನೇಶ್ವರ್ ಕ್ಯಾಂಪಸ್ ಅನ್ನು ಸಹ ಪರಿಶೀಲಿಸಿದರು. ಈ ಸಂದರ್ಭದಲ್ಲಿ, ಅವರು ಐಐಟಿಯ ನಿರ್ದೇಶಕರು ಮತ್ತು ಅಧ್ಯಾಪಕರೊಂದಿಗೆ ಸಂವಾದ ನಡೆಸಿದರು ಮತ್ತು ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಅವಲೋಕನ ನಡೆಸಿದರು. ಈ ವೇಳೆ ರಿಸರ್ಚ್ ಪಾರ್ಕ್, ಕೇಂದ್ರೀಯ ವಿದ್ಯಾಲಯ, ಅಲ್ಲಿ ನಿರ್ಮಾಣವಾಗುತ್ತಿರುವ ವಿದ್ಯಾರ್ಥಿಗಳ ಹಾಸ್ಟೆಲ್ ಸೇರಿದಂತೆ ಉಳಿದ ಕಾಮಗಾರಿಗೆ ಆಯ್ಕೆಯಾಗಿರುವ ಸ್ಥಳಕ್ಕೂ ಭೇಟಿ ನೀಡಿದರು.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:23 pm, Mon, 28 August 23