ಪಶ್ಚಿಮ ಬಂಗಾಳ(West Bengal)ದ ಜಲ್ಪೈಗುರಿ ಜಿಲ್ಲೆಯಲ್ಲಿರುವ ರಾಮಕೃಷ್ಣ ಆಶ್ರಮ(Ramakrishna Ashram)ದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಸನ್ಯಾಸಿಗಳಿಗೆ ಬಂದೂಕು ತೋರಿಸಿ ಬೆದರಿಕೆ ಹಾಕಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ದುಷ್ಕರ್ಮಿಗಳು ಸ್ಥಳದಿಂದ ಹೋಗುವಂತೆ ನಮ್ಮ ಮಠಾಧೀಶರು ಮತ್ತು ಇತರ ಸಿಬ್ಬಂದಿಗೆ ಬಂದೂಕು ತೋರಿಸಿ ಬೆದರಿಕೆ ಹಾಕಿದ್ದಾರೆ. ಇದೆಲ್ಲದರ ಹಿಂದೆ ಸ್ಥಳೀಯ ಭೂ ಮಾಫಿಯಾ ಕೈವಾಡವಿದೆ ಎಂದು ಆರೋಪಿಸಲಾಗಿದೆ.
ಬೆಳಗಿನ ಜಾವ 3 ಗಂಟೆಗೆ ಸುಮಾರು 10 ಮಂದಿ ಶಸ್ತ್ರಸಜ್ಜಿತ ಯುವಕರು ನಮ್ಮ ಆಶ್ರಮವನ್ನು ಪ್ರವೇಶಿಸಿದರು ಎಂದು ಮಿಷನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ . ಅವರು ನೇರವಾಗಿ ಮೊದಲ ಮಹಡಿಗೆ ಹೋದರು ನಮ್ಮ ಹಿರಿಯ ಸನ್ಯಾಸಿಗಳು ಸೇರಿದಂತೆ ಅಲ್ಲಿದ್ದ ಎಂಟು ಮಂದಿಯನ್ನು ಆವರಣದಿಂದ ಹೋಗುವಂತೆ ಬಂದೂಕು ತೋರಿಸಿ ಬೆದರಿಕೆ ಹಾಕಿದ್ದಾರೆ.
ಸಿಸಿಟಿವಿ ಕ್ಯಾಮೆರಾಗಳನ್ನೂ ಒಡೆದಿದ್ದಾರೆ, ಹೋಗುವಾಗ ಗೇಟಿಗೂ ಬೀಗ ಹಾಕಿದ್ದರು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಾಗ ಅವರು ಬೀಗ ಒಡೆದು ಸಿಕ್ಕಿಬಿದ್ದವರನ್ನು ಹೊರತೆಗೆದಿದ್ದಾರೆ.
ಮತ್ತಷ್ಟು ಓದಿ: ವೋಟ್ ಬ್ಯಾಂಕ್ ಓಲೈಸಲು ಸನ್ಯಾಸಿಗಳ ಮೇಲೆ ಟಿಎಂಸಿ ದಾಳಿ ನಡೆಸುತ್ತಿದೆ: ಮೋದಿ
ಈಗಾಗಲೇ ಸ್ಥಳೀಯ ರೌಡಿ ಹಾಗೂ ಆತನ ಸಹಚರರ ವಿರುದ್ಧ ಭಕ್ತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಪೊಲೀಸರು ತನಿಖೆ ಆರಂಭಿಸಿದ್ದು, ಭದ್ರತೆ ಒದಗಿಸುವ ಭರವಸೆ ನೀಡಿದ್ದಾರೆ. ಪೊಲೀಸ್ ಮತ್ತು ಆಡಳಿತದ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ ಎಂದಿದ್ದಾರೆ.
ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಸಂದರ್ಭದಲ್ಲಿ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಸಂತರಲ್ಲಿ ಭಯದ ವಾತಾವರಣ ಸೃಷ್ಟಿಸಲು ಟಿಎಂಸಿ ಯತ್ನಿಸುತ್ತಿದೆ ಎಂದು ಪ್ರಧಾನಿ ಆರೋಪಿಸಿದ್ದರು. ರಾಮಕೃಷ್ಣ ಮಿಷನ್ ಮತ್ತು ಭಾರತ್ ಸೇವಾಶ್ರಮ ಸಂಘದ ಸನ್ಯಾಸಿಗಳಿಗೆ ಸ್ವತಃ ಸಿಎಂ ಮಮತಾ ಬ್ಯಾನರ್ಜಿ ಬೆದರಿಕೆ ಹಾಕುತ್ತಿದ್ದಾರೆ.
ಟಿಎಂಸಿ ಗೂಂಡಾಗಳು ರಾಮಕೃಷ್ಣ ಮಿಷನ್‌ನ ಆಶ್ರಮದ ಮೇಲೆ ದಾಳಿ ಮಾಡುವಷ್ಟು ಧೈರ್ಯಶಾಲಿಯಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ