ಆಸ್ಪತ್ರೆ‌ ಬೆಡ್‌ನಿಂದ ಮಧ್ಯಪ್ರದೇಶದ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಹೇಳಿದ್ದೇನು ಗೊತ್ತೇ?

| Updated By:

Updated on: Jul 27, 2020 | 3:03 PM

ಭೋಪಾಲ್‌: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಕೊರೊನಾ ಸೋಂಕು ತಗಲುಲಿದ ನಂತರ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದು, ಹಗಲು ರಾತ್ರಿಯನ್ನದೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆ ಬೆಡ್‌ನಿಂದಲೇ ತಮ್ಮ ಅಭಿಮಾನಿಗಳು ಮತ್ತು ಬೆಂಬಲಿಗರನ್ನುದ್ದೇಶಿಸಿ ಚೌಹಾಣ್‌ ವಿಶೇಷ ಸಂದೇಶ ಕಳಿಸಿದ್ದಾರೆ. ಈ ಸಂದೇಶದಲ್ಲಿ ಮುಖ್ಯಮುಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌, ಕೊರೊನಾದಿಂದ ಯಾರೂ ಅಂಜಬೇಕಿಲ್ಲ. ಕೊರೊನಾ ಸೋಂಕಿನ ಲಕ್ಷಣಗಳು ಕಂಡ ಕೂಡಲೇ ತಕ್ಷಣವೇ ಟೆಸ್ಟ್‌ ಮಾಡಿಸಿಕೊಳ್ಳಿ. ಅದನ್ನು ಮುಚ್ಚಿಡುವ ಪ್ರಯತ್ನ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಇಷ್ಟೇ ಅಲ್ಲ ಕೊರೊನಾದಂಥ ಭಯಾನಕ […]

ಆಸ್ಪತ್ರೆ‌ ಬೆಡ್‌ನಿಂದ ಮಧ್ಯಪ್ರದೇಶದ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಹೇಳಿದ್ದೇನು ಗೊತ್ತೇ?
Follow us on

ಭೋಪಾಲ್‌: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಕೊರೊನಾ ಸೋಂಕು ತಗಲುಲಿದ ನಂತರ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದು, ಹಗಲು ರಾತ್ರಿಯನ್ನದೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆ ಬೆಡ್‌ನಿಂದಲೇ ತಮ್ಮ ಅಭಿಮಾನಿಗಳು ಮತ್ತು ಬೆಂಬಲಿಗರನ್ನುದ್ದೇಶಿಸಿ ಚೌಹಾಣ್‌ ವಿಶೇಷ ಸಂದೇಶ ಕಳಿಸಿದ್ದಾರೆ.

ಈ ಸಂದೇಶದಲ್ಲಿ ಮುಖ್ಯಮುಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌, ಕೊರೊನಾದಿಂದ ಯಾರೂ ಅಂಜಬೇಕಿಲ್ಲ. ಕೊರೊನಾ ಸೋಂಕಿನ ಲಕ್ಷಣಗಳು ಕಂಡ ಕೂಡಲೇ ತಕ್ಷಣವೇ ಟೆಸ್ಟ್‌ ಮಾಡಿಸಿಕೊಳ್ಳಿ. ಅದನ್ನು ಮುಚ್ಚಿಡುವ ಪ್ರಯತ್ನ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ಇಷ್ಟೇ ಅಲ್ಲ ಕೊರೊನಾದಂಥ ಭಯಾನಕ ಸಾಂಕ್ರಮಿಕದ ವಿರುದ್ಧ ಪರಿಣಾಮಕಾರಿ ಹೋರಾಟ ಮಾಡಬೇಕೆಂದರೇ ಹಾಗೂ ತಪ್ಪಿಸಿಕೊಳ್ಳಬೇಕಾದರೇ ತಪ್ಪದೇ ಮುಖಕ್ಕೆ ಮಾಸ್ಕ್‌ ಧರಿಸಿ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ ಎಂದು ಜನತೆಯಲ್ಲಿ ವಿನಂತಿಸಿಕೊಂಡಿದ್ದಾರೆ.

ಜೊತೆಗೆ ಕೊರೊನಾ ಮಾರಿಯ ವಿರುದ್ಧ ಅಂಜದೇ ಹೋರಾಡುತ್ತಿರುವ ಕೊರೊನಾ ವಾರಿಯರ್‌ ಅಂದ್ರೆ ವೈದ್ಯರು ಮತ್ತು ವೈದ್ಯಕೀಯ ಕಾರ್ಯಕರ್ತರ ಸೇವೆಯನ್ನು ಮನಃಪೂರ್ವಕವಾಗಿ ಶಾಘಿಸಿದ್ದಾರೆ.

Published On - 4:34 pm, Sun, 26 July 20