
ಮುಂಬೈ, ಸೆಪ್ಟೆಂಬರ್ 23: ‘‘ರೈಡ್ ಕ್ಯಾನ್ಸಲ್ ಮಾಡಿದ್ದಕ್ಕೆ ಕ್ಷಮೆ ಇರಲಿ’ ಊಬರ್(Uber )ಚಾಲಕ ಕಳುಹಿಸಿದ ಇದೊಂದೇ ಒಂದು ವಾಕ್ಯ ಪ್ರಯಾಣಿಕನ ಹೃದಯಕ್ಕೆ ತಾಗಿಬಿಡ್ತು. ಸಾಮಾನ್ಯವಾಗಿ ಊಬರ್ ಇರಲಿ, ಓಲಾ ಇರಲಿ ಇನ್ಯಾವುದೇ ಕ್ಯಾಬ್ಗಳಿರಲಿ. ಒಮ್ಮೆ ಖುಷಿ ಅನುಭವವಾದರೆ ಒಮ್ಮೊಮ್ಮೆ ಬೇಸರ ತರಿಸುತ್ತೆ. ಎಲ್ಲವೂ ಚಾಲಕ ಹಾಗೂ ಪ್ರಯಾಣಿಕರ ಮನಸ್ಥಿತಿ ಮೇಲೆ ಅವಲಂಬಿತವಾಗಿರುತ್ತವೆ.
ಇದು ಮುಂಬೈನಲ್ಲಿ ನಡೆದ ಘಟನೆ ರೆಡ್ಇಟ್ನಲ್ಲಿ ಒಬ್ಬರು ಈ ವಿಚಾರವನ್ನು ಹಂಚಿಕೊಂಡಿದ್ದಾರೆ.
ಸಾಮಾನ್ಯವಾಗಿ ಚಾಲಕರು ರೈಡ್ ಕ್ಯಾನ್ಸಲ್ ಮಾಡಿದಾಗ ಕೆಟ್ಟ ಕೋಪ ಬರುತ್ತೆ, ನಾವೆಲ್ಲೋ ಅರ್ಜೆಂಟಾಗಿ ಹೋಗಬೇಕಾಗಿರುತ್ತೆ ಅಂಥಾ ಸಮಯದಲ್ಲಿ ಕೈಕೊಟ್ಟುಬಿಟ್ರು ಅಂತಾ ಹಿಡಿ ಶಾಪ ಹಾಕ್ತೀವಿ. ಆದರೆ ಈ ಊಬರ್ ಡ್ರೈವರ್ ರೈಡ್ ಕ್ಯಾನ್ಸಲ್ ಮಾಡಿದರೂ ಕೂಡ ಅವರಿಗೆ 5 ಸ್ಟಾರ್ ರೇಟಿಂಗ್ ಕೊಡಬೇಕು ಅನ್ನೋವಷ್ಟು ಪ್ರಯಾಣಿಕನಿಗೆ ಸಂತೋಷವಾಗಿದ್ದಂತೂ ಹೌದು.
ಘಟನೆ ಏನು?
ಪ್ರಯಾಣಿಕರೊಬ್ಬರು ಬೋರಿವಲಿಯಿಂದ ಥಾಣೆಗೆ ಊಬರ್ ಬುಕ್ ಮಾಡಿದ್ದರು. ಚಾಲಕ ಮೊದಲು ಬರುವುದಾಗಿ ಒಪ್ಪಿಕೊಂಡರೂ ಅಲ್ಲಿಂದ ಅಲ್ಲಿಗೆ ತೋರಿಸುತ್ತಿರುವ ಹಣ ನೋಡಿ ಬಳಿಕ ಕ್ಯಾನ್ಸಲ್ ಮಾಡಿದ್ದರು.ಆದರೆ ಗೌರವಯುತವಾಗಿ ಪ್ರಯಾಣಿಕನಿಗೆ ಒಂದು ಮೆಸೇಜ್ ಕೂಡ ಕಳುಹಿಸಿದ್ದಾರೆ.
ಅದರಲ್ಲಿ ಕ್ಷಮಿಸಿ ಸರ್, ನಾನು ಈಗ ನೋಡಿದೆ ಕೇವಲ 250 ರೂ. ತೋರಿಸುತ್ತಿದೆ. ಇಲ್ಲಿಂದ ಅಲ್ಲಿಗೆ ಹೋಗಿ ನಿಮ್ಮನ್ನು ಡ್ರಾಪ್ ಮಾಡುವಷ್ಟರಲ್ಲಿ ಕನಿಷ್ಠ ಒಂದೂವರೆ ತಾಸು ಬೇಕು. ಇಷ್ಟು ಕಡಿಮೆ ದುಡ್ಡಿನಲ್ಲಿ ಅಲ್ಲಿವರೆಗೆ ಬಂದರೆ ಏನೂ ಉಳಿಯುವುದಿಲ್ಲ ಸರ್ ಹಾಗಾಗಿ ಟ್ರಿಪ್ ಕ್ಯಾನ್ಸಲ್ ಮಾಡ್ತಿದ್ದೀನಿ ದಯವಿಟ್ಟು ಕ್ಷಮಿಸಿ ಎಂದು ಬರೆದಿದ್ದರು. ಈ ಸಂದೇಶ ನೋಡಿ ಪ್ರಯಾಣಿಕ ತುಂಬಾ ಖುಷಿ ಪಟ್ಟಿದ್ದರು.
ಇಂತಹ ಜನರು ಸಿಗುವುದು ಅಪರೂಪ, ಯಾರಾದರೂ ಆಗಲಿ ಅದೇನೇ ಸಮಸ್ಯೆಗಳಿರಲಿ ಹೇಳಬೇಕಾದ ರೀತಿಯಲ್ಲಿ ತಿಳಿಸಿದರೆ ಎಂಥವರಾರು ಅರ್ಥ ಮಾಡಿಕೊಳ್ಳುತ್ತಾರೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ಓದಿ: ಕರ್ನಾಟಕದಲ್ಲಿ ಉಬರ್, ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆ ಜೂನ್ 15 ರವರೆಗೆ ವಿಸ್ತರಿಸಿದ ಹೈಕೋರ್ಟ್
ಯಾರಾದರೂ ನನಗೆ ಈ ರೀತಿ ಮೆಸೇಜ್ ಕಳುಹಿಸಿದರೆ ಚಾಲಕನಿಗೆ ನಷ್ಟವಾಗದಂತೆ ನಾನೇ ಟ್ರಿಪ್ ಕ್ಯಾನ್ಸಲ್ ಮಾಡುತ್ತಿದ್ದೆ ಎಂದು ಮತ್ತೊಬ್ಬರು ಹೇಳಿದ್ದಾರೆ.
ರಾಷ್ಟ್ರಿಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ