ಸ್ವಲ್ಪ ತಡವಾಗಿದ್ರು ಪ್ರಾಣ ಹೋಗ್ತಿತ್ತು: ಮುಂಬೈನ ಗಗನಚುಂಬಿ ಕಟ್ಟಡದ 22ನೇ ಮಹಡಿಯ ಪ್ಯಾರಪೆಟ್​ನಲ್ಲಿ ಕುಳಿತಿದ್ದ ವೃದ್ಧರ ರಕ್ಷಣೆ

ಮುಂಬೈನ ಕಾಂದಿವಾಲಿ ಹೈರೈಸ್​ನ 22ನೇ ಮಹಡಿಯ ಪ್ಯಾರಪೆಟ್​ನಲ್ಲಿ ಕುಳಿತಿದ್ದ 70 ವರ್ಷದ ವೃದ್ಧರನ್ನು ರಕ್ಷಿಸಲಾಗಿದೆ. ವೃದ್ಧರು ಮಾನಸಿಕ ಅಸ್ವಸ್ಥರಾಗಿದ್ದರು ಎಂಬುದು ತಿಳಿದುಬಂದಿದೆ.

ಸ್ವಲ್ಪ ತಡವಾಗಿದ್ರು ಪ್ರಾಣ ಹೋಗ್ತಿತ್ತು: ಮುಂಬೈನ ಗಗನಚುಂಬಿ ಕಟ್ಟಡದ 22ನೇ ಮಹಡಿಯ ಪ್ಯಾರಪೆಟ್​ನಲ್ಲಿ ಕುಳಿತಿದ್ದ ವೃದ್ಧರ ರಕ್ಷಣೆ
ವೃದ್ಧರ ರಕ್ಷಣೆ

Updated on: Mar 06, 2023 | 8:41 AM

ಮುಂಬೈನ ಕಾಂದಿವಾಲಿ ಹೈರೈಸ್​ನ 22ನೇ ಮಹಡಿಯ ಪ್ಯಾರಪೆಟ್​ನಲ್ಲಿ ಕುಳಿತಿದ್ದ 70 ವರ್ಷದ ವೃದ್ಧರನ್ನು ರಕ್ಷಿಸಲಾಗಿದೆ.
ವೃದ್ಧರು ಮಾನಸಿಕ ಅಸ್ವಸ್ಥರಾಗಿದ್ದರು ಎಂಬುದು ತಿಳಿದುಬಂದಿದೆ. ಅಗ್ನಿಶಾಮಕ ದಳದ ಮಾಹಿತಿಯ ಪ್ರಕಾರ, ವ್ಯಕ್ತಿ 32 ಅಂತಸ್ತಿನ ಕಟ್ಟಡದ 22 ನೇ ಮಹಡಿಯಲ್ಲಿ ಸುಮಾರು 4 ಅಡಿಗಳಷ್ಟು ಸುರಕ್ಷತಾ ಗೋಡೆಯ ಮೇಲೆ ಹತ್ತಿ 6 ಅಡಿ ಆಳದ ಪ್ಯಾರಪೆಟ್ ಗೋಡೆಯ ಮೇಲೆ ಇವರು ಇಳಿದಿದ್ದರು.

ಸ್ವಲ್ಪ ತಡವಾಗಿದ್ದರೂ ಅವರ ಪ್ರಾಣಕ್ಕೆ ಅಪಾಯವಿತ್ತು. ವೃದ್ಧರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪ್ಯಾರಪೆಟ್ ಗೋಡೆಯ ಮೇಲೆ ಕುಳಿತಿರುವ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸುರಕ್ಷತಾ ಸರಂಜಾಮು, ಹಗ್ಗ ಮತ್ತು ವಿವಿಧ ಸಾಧನಗಳನ್ನು ಬಳಸಿ ಪ್ಯಾರಪೆಟ್ ಗೋಡೆಯ ಮೇಲೆ ಇಳಿದು ಅವರನ್ನು ರಕ್ಷಿಸಿದ್ದಾರೆ.

ಮತ್ತಷ್ಟು ಓದಿ: Viral Video: ದೋಸೆ ಹಿಟ್ಟಿನಿಂದ ಬೆಕ್ಕಿನ ಚಿತ್ರ ಬಿಡಿಸಿದ ವಿಡಿಯೋ ವೈರಲ್​​

ಗಗನಚುಂಬಿ ಕಟ್ಟಡದ 22 ನೇ ಮಹಡಿಯಲ್ಲಿರುವ ಆಶ್ರಯ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ಕುಳಿತಿದ್ದಾರೆ ಎಂದು ಸಂಜೆ 5:15 ರ ಸುಮಾರಿಗೆ ಅಗ್ನಿಶಾಮಕ ದಳಕ್ಕೆ ಕರೆ ಬಂದಿತ್ತು ಎಂದು ಅವರು ಹೇಳಿದರು.
ಅಲ್ಲಿನ ನಿವಾಸಿಗಳು ಬೆಂಕಿ ಅಥವಾ ಇತರ ತುರ್ತು ಸಂದರ್ಭಗಳಲ್ಲಿ ಆ ಪ್ರದೇಶದ ಮೂಲಕ ಹಾದುಹೋಗಬಹುದು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us