ಡೊನಾಲ್ಡ್ ಟ್ರಂಪ್ ಭಾರತದ ಗೌರವವನ್ನು ಹೆಚ್ಚಿಸಿದ್ದಾರೆ: ಪ್ರಧಾನಿ ಮೋದಿ ಸಂತಸ

ಅಹಮದಾಬಾದ್: ಐತಿಹಾಸಿಕ ಕ್ಷಣಕ್ಕೆ ಇಂದು ಗುಜರಾತ್‌ನ ಮೊಟೆರಾ ಸ್ಟೇಡಿಯಂ ಸಾಕ್ಷಿಯಾಯಿತು. ‘ನಮಸ್ತೆ ಟ್ರಂಪ್’ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ದಂಪತಿ ಭಾಗಿಯಾಗಿ ಭಾರತ ಮತ್ತು ಅಮೇರಿಕಾದ ಸ್ನೇಹಕ್ಕೆ ಮತ್ತಷ್ಟು ಬಲ ತುಂಬಿದ್ದಾರೆ. ಏರ್​ಫೋರ್ಸ್-1 ವಿಮಾನದ ಮೂಲಕ ಬಂದಿಳಿದ ಟ್ರಂಪ್‌ ದಂಪತಿಗೆ ಪ್ರಧಾನಿ ನರೇಂದ್ರ ಮೋದಿ ಅದ್ದೂರಿಯ ಸ್ವಾಗತದಿಂದ ಬರಮಾಡಿಕೊಂಡ್ರು. ‘ಈ ಭೂಮಿ ಗುಜರಾತ್​ನದ್ದು, ಆದರೆ ಜೋಶ್ ಹಿಂದೂಸ್ತಾನದ್ದು’ ಭಾರತದ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಉದ್ದೇಶಿಸಿ ಭಾಷಣ ಮಾಡಿದರು. ಈ ವೇಳೆ […]

ಡೊನಾಲ್ಡ್ ಟ್ರಂಪ್ ಭಾರತದ ಗೌರವವನ್ನು ಹೆಚ್ಚಿಸಿದ್ದಾರೆ: ಪ್ರಧಾನಿ ಮೋದಿ ಸಂತಸ
ಸಾಧು ಶ್ರೀನಾಥ್​

Updated on: Feb 24, 2020 | 2:57 PM

ಅಹಮದಾಬಾದ್: ಐತಿಹಾಸಿಕ ಕ್ಷಣಕ್ಕೆ ಇಂದು ಗುಜರಾತ್‌ನ ಮೊಟೆರಾ ಸ್ಟೇಡಿಯಂ ಸಾಕ್ಷಿಯಾಯಿತು. ‘ನಮಸ್ತೆ ಟ್ರಂಪ್’ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ದಂಪತಿ ಭಾಗಿಯಾಗಿ ಭಾರತ ಮತ್ತು ಅಮೇರಿಕಾದ ಸ್ನೇಹಕ್ಕೆ ಮತ್ತಷ್ಟು ಬಲ ತುಂಬಿದ್ದಾರೆ. ಏರ್​ಫೋರ್ಸ್-1 ವಿಮಾನದ ಮೂಲಕ ಬಂದಿಳಿದ ಟ್ರಂಪ್‌ ದಂಪತಿಗೆ ಪ್ರಧಾನಿ ನರೇಂದ್ರ ಮೋದಿ ಅದ್ದೂರಿಯ ಸ್ವಾಗತದಿಂದ ಬರಮಾಡಿಕೊಂಡ್ರು.

‘ಈ ಭೂಮಿ ಗುಜರಾತ್​ನದ್ದು, ಆದರೆ ಜೋಶ್ ಹಿಂದೂಸ್ತಾನದ್ದು’
ಭಾರತದ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಉದ್ದೇಶಿಸಿ ಭಾಷಣ ಮಾಡಿದರು. ಈ ವೇಳೆ ಭಾರತ-ಅಮೆರಿಕ ನಡುವಿನ ಬಾಂಧವ್ಯ ಸುದೀರ್ಘವಾದುದು. ಇಂದು ಮೊಟೆರಾ ಸ್ಟೇಡಿಯಂನಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಿದೆ. ಹೌಡಿ ಮೋದಿ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿದ್ದೆ. ಅದೇ ರೀತಿ ನನ್ನ ಗೆಳೆಯ ಅಮೆರಿಕ ಅಧ್ಯಕ್ಷ ಟ್ರಂಪ್ ‘ನಮಸ್ತೆ ಟ್ರಂಪ್’ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಭೂಮಿ ಗುಜರಾತ್​ನದ್ದು ಆದರೆ ಜೋಶ್ ಹಿಂದೂಸ್ತಾನದ್ದು ಆಗಿದೆ ಎಂದರು.

ಅಧ್ಯಕ್ಷರೇ ನೀವು ಇಂದು ಸಬರಮತಿ ದಂಡೆಯಲ್ಲಿದ್ದೀರಿ. ಈ ಸ್ಥಳ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಅಹಿಂಸೆ ಮೂಲಕ ಪ್ರಮುಖ ಪಾತ್ರ ವಹಿಸಿದ್ದ ಐತಿಹಾಸಿಕ ಸ್ಥಳವಿದು. ಸರ್ದಾರ್​ ಪಟೇಲರ ಏಕತಾ ಪ್ರತಿಮೆ ಇರುವ ಪ್ರಸಿದ್ಧ ಸ್ಥಳ, ಭಾರತ-ಅಮೆರಿಕ ಜನತೆಯ ಅಭಿವೃದ್ಧಿಗೆ ಹೊಸ ಹೆಜ್ಜೆ ಇಡಲು ಸಾಕ್ಷಿಯಾಗುತ್ತಿರುವ ಸ್ಥಳ.

ಅಮೆರಿಕನ್ನರ ಕನಸು ಸಾಕಾರಕ್ಕೆ ಟ್ರಂಪ್​ ಶ್ರಮಿಸುತ್ತಿದ್ದಾರೆ. ಅಮೆರಿಕದ ಪ್ರಥಮ ಮಹಿಳೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಹಾಗೂ ಮಕ್ಕಳಿಗಾಗಿ ಇವಾಂಕಾ ಮಾಡುತ್ತಿರುವ ಕೆಲಸ ಶ್ಲಾಘನೀಯವಾಗಿದೆ. ಈ ಹಿಂದೆ ಭೇಟಿ ನೀಡಿದ್ದಾಗ ಮತ್ತೆ ಆಗಮಿಸುವೆ ಎಂದಿದ್ದಿರಿ. ಇಂದು ಮತ್ತೆ ಇವಾಂಕಾ ನಮ್ಮ ನಡುವೆ ಇರುವುದು ಸಂತಸ ತಂದಿದೆ. ನನ್ನ ಗೆಳೆಯ ಟ್ರಂಪ್, ಭಾರತದ ಗೆಳೆಯ ಎಂದು ಟ್ರಂಪ್​ನ ಹೊಗಳಿದರು.

ಡೊನಾಲ್ಡ್ ಟ್ರಂಪ್ ಭಾರತದ ಗೌರವವನ್ನು ಹೆಚ್ಚಿಸಿದ್ದಾರೆ:
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಮೋದಿ ಧನ್ಯವಾದ ಅರ್ಪಿಸಿ ಮಾತನಾಡುತ್ತಾ ಡೊನಾಲ್ಡ್ ಟ್ರಂಪ್ ಭಾರತದ ಗೌರವವನ್ನು ಹೆಚ್ಚಿಸಿದ್ದಾರೆ ಎಂದು ಮುಕ್ತ ಕಂಠದಿಂದ ಟ್ರಂಪ್​ರನ್ನು ಹೊಗಳಿದರು. ಸಂಬಂಧ ವೃದ್ಧಿಗೆ ಅತಿದೊಡ್ಡ ಕಾರಣ ವಿಶ್ವಾಸ. ಭಾರತ, ಅಮೆರಿಕ ನಡುವಿನ ವಿಶ್ವಾಸ ಮತ್ತಷ್ಟು ಹೆಚ್ಚಿದೆ.  ಭಾರತ-ಅಮೆರಿಕ ಸ್ವಾಭಾವಿಕ ಸ್ನೇಹಿತರು.  ನಮ್ಮ ದ್ವಿಪಕ್ಷೀಯ, ಆರ್ಥಿಕ ಬಾಂಧವ್ಯ ಮತ್ತಷ್ಟು ವಿಸ್ತರಣೆಗೊಂಡಿದೆ ಎಂದು ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದರು.

 

Published On - 2:51 pm, Mon, 24 February 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us