ದೇಶದಲ್ಲಿ ಮಂಗಗಳ ಕಡಿತದಿಂದ (Monkey bite) ಗಾಯಗೊಂಡು ಸಾವಿಗೀಡಾದವರ ಸಂಖ್ಯೆಯ ಬಗ್ಗೆ ತನ್ನ ಬಳಿ ಯಾವುದೇ ದಾಖಲೆಗಳಿಲ್ಲ ಎಂದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಸೋಮವಾರ ಸಂಸತ್ಗೆ (Loksabha) ತಿಳಿಸಿದೆ. ಬಿಜೆಪಿ(BJP) ಸಂಸದ ರಾಜ್ ಕುಮಾರ್ ಚಹರ್ ಅವರು ವಿವಿಧ ರಾಜ್ಯಗಳಲ್ಲಿ ಆಗಾಗ್ಗೆ ಕೋತಿಗಳ ಹಾವಳಿಯ ಪ್ರಕರಣಗಳ ಬಗ್ಗೆ ಸಂಸತ್ತಿನಲ್ಲಿ ಕಳವಳ ವ್ಯಕ್ತಪಡಿಸಿದ್ದು, ಸಂತ್ರಸ್ತರಿಗೆ ಪರಿಹಾರದ ಮೊತ್ತದ ಬಗ್ಗೆ ಸ್ಪಷ್ಟೀಕರಣವನ್ನು ಕೋರಿದರು.
“ಕೇಂದ್ರ ಪ್ರಾಯೋಜಿತ ಯೋಜನೆಗಳ ಅಡಿಯಲ್ಲಿ ಪಾವತಿಸಬೇಕಾದ ಪರಿಹಾರದ ಮೊತ್ತದ ಮರುಪಾವತಿಯನ್ನು ಹಣದ ಲಭ್ಯತೆಗೆ ಒಳಪಟ್ಟಿರುವ ವರ್ಧಿತ ದರಗಳ ಪ್ರಕಾರ ರಾಜ್ಯಗಳು ಮಾಡಬಹುದು ಎಂದು ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ” ಎಂದು ಸಚಿವಾಲಯವು ಹೇಳಿದ್ದು ಮಂಗಗಳ ದಾಳಿಯಿಂದ ಉಂಟಾದ ಸಾವುಗಳು ಮತ್ತು ಗಾಯಗಳ ವಿವರಗಳ ಬಗ್ಗೆ ಯಾವುದೇ ದಾಖಲೆಯನ್ನು ಹೊಂದಿಲ್ಲ ಎಂದು ಹೇಳಿದೆ.
2015 ರಲ್ಲಿ 1,900 ಕ್ಕೂ ಹೆಚ್ಚು ಮಂಗ ಕಡಿತದ ಪ್ರಕರಣಗಳು ವರದಿಯಾಗಿವೆ ಎಂದು ಲೋಕಸಭೆಗೆ ಈ ಹಿಂದೆ ತಿಳಿಸಲಾಯಿತು, ಇದು ಹಿಂದಿನ ವರ್ಷಕ್ಕಿಂತ 400 ಕ್ಕೂ ಹೆಚ್ಚು ಪ್ರಕರಣಗಳು ಹೆಚ್ಚಾಗಿದೆ.
2015 ರಲ್ಲಿ ದೆಹಲಿಯಲ್ಲಿ ಪ್ರತಿದಿನ ಕನಿಷ್ಠ ಐದು ಕೋತಿ ಕಡಿತದ ಪ್ರಕರಣಗಳು ವರದಿಯಾಗಿವೆ.
ಕಾಡು ಪ್ರಾಣಿಗಳಿಂದ ಉಂಟಾಗುವ ದಾಳಿ, ಗಾಯಗಳು ಮತ್ತು ಆಸ್ತಿ ಮತ್ತು ಜೀವ ಹಾನಿಗಳಿಗೆ ಪರಿಹಾರವನ್ನು ಕೇಂದ್ರ ಪ್ರಾಯೋಜಿತ ಯೋಜನೆಯಡಿ ಒಳಪಡಿಸಲಾಗಿದೆ ಎಂದು 2018 ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಪತ್ರದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ:Bhopal gas tragedy: ಭೋಪಾಲ್ ಅನಿಲ ದುರಂತ, ಕೇಂದ್ರದ ಹೆಚ್ಚಿನ ಪರಿಹಾರ ಮನವಿ ವಜಾಗೊಳಿಸಿದ ಸುಪ್ರೀಂ
ಸೋಮವಾರ ಸರ್ಕಾರ ನೀಡಿದ ಉತ್ತರದಲ್ಲಿ ಅಂಥಾ ದಾಳಿಯ ಸಂತ್ರಸ್ತರಿಗೆ ಪಾವತಿಸುವ ಪರಿಹಾರ ಮೊತ್ತವನ್ನು ಸಹ ಹೆಚ್ಚಿಸಲಾಗಿದೆ ಎಂದು ಹೇಳಿದೆ, ರಾಜ್ಯಗಳಲ್ಲಿ ಲಭ್ಯವಿರುವ ಹಣವನ್ನು ಅವಲಂಬಿಸಿ ಪಾವತಿಸಬೇಕಾದ ಪರಿಹಾರದ ಮರುಪಾವತಿಯನ್ನು ಮಾಡಲಾಗುತ್ತದೆ ಎಂದು ಅದು ಸ್ಪಷ್ಟಪಡಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:49 pm, Tue, 14 March 23