ಚೀನಾ-ಪಾಕ್​ ಹೊಸ ಪಿತೂರಿ, LOCಯತ್ತ ಸೈನಿಕರ ರವಾನಿಸಿದ ಗುಳ್ಳೆನರಿಗಳು

| Updated By: ಸಾಧು ಶ್ರೀನಾಥ್​

Updated on: Jul 01, 2020 | 2:40 PM

ದೆಹಲಿ: ಭಾರತವನ್ನು ಕೆಣಕಿ ಸರಿಯಾಗಿ ಒದೆ ತಿಂದಿರುವ ನರಿಬುದ್ಧಿ ಚೀನಾ ಸೇಡು ತೀರಿಸಿಕೊಳ್ಳಲು ಇದೀಗ ಮತ್ತೊಂದು ಪಿತೂರಿಗೆ ಕೈ ಹಾಕಿದೆ. ತನ್ನ ಹಳೇ ದೋಸ್ತಿ ಪಾಪಿ ಪಾಕಿಸ್ತಾನದ ಸಹಾಯದಿಂದ ಭಾರತವನ್ನು ಮಣಿಸಲು ಹುನ್ನಾರ ನಡೆಸುತ್ತಿರುವ ಮಾಹಿತಿ ಗುಪ್ತಚರ ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ. ಏನಿದು ಚೀನಾ-ಪಾಕಿಸ್ತಾನದ ಹೊಸ ‘ಡಬಲ್​’ ಸ್ಕೆಚ್​..? ಬಹಳ ವರ್ಷಗಳಿಂದ ಮಿತ್ರನಾಗಿರುವ ಪಾಕಿಸ್ತಾನದ ನೆರವಿಗೆ ಇದೀಗ ಚೀನಾ ಮತ್ತೊಮ್ಮೆ ಮುಂದಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಇದೀಗ ಪಾಕ್​ ಸೇನೆ ಸರಿಸುಮಾರು 20 ಸಾವಿರ ಸೈನಿಕರನ್ನು ಭಾರತದ-ಪಾಕ್ […]

ಚೀನಾ-ಪಾಕ್​ ಹೊಸ ಪಿತೂರಿ, LOCಯತ್ತ ಸೈನಿಕರ ರವಾನಿಸಿದ ಗುಳ್ಳೆನರಿಗಳು
Follow us on

ದೆಹಲಿ: ಭಾರತವನ್ನು ಕೆಣಕಿ ಸರಿಯಾಗಿ ಒದೆ ತಿಂದಿರುವ ನರಿಬುದ್ಧಿ ಚೀನಾ ಸೇಡು ತೀರಿಸಿಕೊಳ್ಳಲು ಇದೀಗ ಮತ್ತೊಂದು ಪಿತೂರಿಗೆ ಕೈ ಹಾಕಿದೆ. ತನ್ನ ಹಳೇ ದೋಸ್ತಿ ಪಾಪಿ ಪಾಕಿಸ್ತಾನದ ಸಹಾಯದಿಂದ ಭಾರತವನ್ನು ಮಣಿಸಲು ಹುನ್ನಾರ ನಡೆಸುತ್ತಿರುವ ಮಾಹಿತಿ ಗುಪ್ತಚರ ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ.

ಏನಿದು ಚೀನಾ-ಪಾಕಿಸ್ತಾನದ ಹೊಸ ‘ಡಬಲ್​’ ಸ್ಕೆಚ್​..?
ಬಹಳ ವರ್ಷಗಳಿಂದ ಮಿತ್ರನಾಗಿರುವ ಪಾಕಿಸ್ತಾನದ ನೆರವಿಗೆ ಇದೀಗ ಚೀನಾ ಮತ್ತೊಮ್ಮೆ ಮುಂದಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಇದೀಗ ಪಾಕ್​ ಸೇನೆ ಸರಿಸುಮಾರು 20 ಸಾವಿರ ಸೈನಿಕರನ್ನು ಭಾರತದ-ಪಾಕ್ ನಡುವಿನ ಅಂತಾರಾಷ್ಟ್ರೀಯ ಗಡಿಯತ್ತ ರವಾನಿಸಿದೆ ಎಂದು ತಿಳಿದುಬಂದಿದೆ.

ಅಂತಾರಾಷ್ಟ್ರೀಯ ಗಡಿ ಬಳಿಯಿರುವ ಗಿಲ್ಗಿಟ್ ಬಾಲ್ಟಿಸ್ತಾನ್ ಪ್ರದೇಶಕ್ಕೆ ಸೈನಿಕರನ್ನು ನಿಯೋಜಿಸಲಾಗಿದೆ ಎಂದು ಗುಪ್ತಚರ ಇಲಾಖೆಯ ಮೂಲಗಳು ಹೇಳಿವೆ. ಜೊತೆಗೆ ಭಾರತಕ್ಕೆ ಅಂಟಿಕೊಂಡಿರುವ ತನ್ನ ಗಡಿಯಲ್ಲಿ ರೇಡಾರ್​ಗಳನ್ನು ಫುಲ್​ ಆಕ್ಟಿವ್​ ಮಾಡಿದೆ.

ತನ್ನ ಸಂಚಿನ ಎರಡನೇ ಭಾಗವಾಗಿ ಚೀನಾದ ಬೇಹುಗಾರಿಕಾ ಸಂಸ್ಥೆಗಳು ಮತ್ತೊಂದು ಪಿತೂರಿಗೆ ಮುಂದಾಗಿದೆ. ಕಾಶ್ಮೀರದ ಕಣಿವೆಯಲ್ಲಿ ಅಶಾಂತಿ ಸೃಷ್ಟಿಸುವ ಸಂಚು ಮಾಡಿರುವ ಚೀನಾ ಪಾಕಿಸ್ತಾನ ಮೂಲದ ಅಲ್​-ಬದರ್​ (Al-Badr) ಉಗ್ರ ಸಂಘಟನೆಗೆ ಕುಮ್ಮಕ್ಕು ನೀಡುತ್ತಿದೆ ಎಂಬ ಮಾಹಿತಿ ಸಿಕ್ಕಿದೆ.

ಭಾರತಕ್ಕೆ ‘2.5’ ಪೆಟ್ಟು ನೀಡಲು ಮುಂದಾದ ಗುಳ್ಳೆನರಿಗಳು..!
ಈ ಎರಡು ಪ್ರಮುಖ ಅಂಶಗಳನ್ನು ನಾವು ವಿಶ್ಲೇಷಿಸಿದಾಗ ಚೀನಾ ಮತ್ತು ಪಾಕಿಸ್ತಾನ ಭಾರತದ ವಿರುದ್ಧ ಎರಡೂವರೆ ಕದನ ಕಣವನ್ನು (Battle front) ಸ್ಥಾಪಿಸುವ ಯೋಚನೆ ಮಾಡಿದೆ. ಅತ್ತ ಚೀನಾದ ವಿರುದ್ಧ ಹೋರಾಡುವ ಸಕಲ ತಯಾರಿ ನಡೆಸಿರುವ ಭಾರತೀಯ ಸೇನೆ ಇದೀಗ ಪಾಕಿಸ್ತಾನದ ಕಡೆಯೂ ಯೋಧರನ್ನ ನಿಯೋಜಿಸಬೇಕಾಗುತ್ತದೆ.

ಇದರಿಂದ ನಮ್ಮ ಸೇನಾಬಲ ಇಬ್ಭಾಗವಾಗುತ್ತದೆ. ಅಂದರೆ ಸೈನಿಕರಲ್ಲದೆ, ಶಸ್ತ್ರಾಸ್ತ್ರ ಹಾಗೂ ಯುದ್ಧ ವಿಮಾನಗಳನ್ನು ಎರಡು ಕಡೆ ನಿಯೋಜಿಸಬೇಕಾಗುವ ಸ್ಥಿತಿ ಎದುರಾಗುತ್ತದೆ. ಜೊತೆಗೆ ಕಣಿವೆಯಲ್ಲಿ ಉಗ್ರ ಚಟುವಟಿಕೆ ಹೆಚ್ಚಾದರೆ ಅದನ್ನು ದಮನಿಸಲು ಸೇನೆಯ ತುಕಡಿಗಳನ್ನು ರವಾನಿಸಬೇಕಾಗುತ್ತದೆ. ಜೊತೆಗೆ ಸೈನಿಕರಿಗೆ ತಲುಪಿಸಬೇಕಾದ ಊಟ, ಮದ್ದುಗುಂಡು ಮತ್ತು ಇತರೆ ಯುದ್ಧ ಸಾಮಗ್ರಿಗಳ ಓಡಾಟವನ್ನ ಅಡ್ಡಿಪಡಿಸಬಹುದು. ಹಾಗಾಗಿ ಎರಡು ಹಳೇ ತೋಳಗಳು ಹೊಸ ಸ್ಕೆಚ್​ ಹಾಕೊಂಡು ಭಾರತವನ್ನ ಮಣಿಸಲು ಸಿದ್ಧತೆ ಮಾಡಿಕೊಳ್ಳುತ್ತಿವೆ.