ರಾಜಕೋಟ್: ಗುಜರಾತ್‌ನ ಕೆಲ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಪ್ರಖ್ಯಾತ ಸ್ವಾಮಿನಾರಾಯಣ್ ದೇವಾಲಯ ಬಹುತೇಕ ನೀರಿನಲ್ಲಿ ಮುಳುಗಡೆಯಾಗಿದೆ.
ಕಳೆದ ಕೆಲ ದಿನಗಳಿಂದ ಗುಜರಾತ್‌ನ ಕೆಲ ಭಾಗಗಳಲ್ಲಿ ಸತತವಾಗಿ ಮಳೆ ಸುರಿಯುತ್ತಿದೆ. ಇದರ ಪರಿಣಾಮವಾಗಿ ಕೆಲವೆಡೆ ಪ್ರವಾಹ ಕೂಡಾ ಬಂದಿದೆ. ಅದರಲ್ಲೂ ಗುಜರಾತ್‌ನ ರಾಜಕೋಟ್ ಜಿಲ್ಲೆಯ ಗೊಂದಾಲ್ ನಗರದಲ್ಲಿರುವ ಖ್ಯಾತ ಸ್ವಾಮಿನಾರಾಯಣ್ ದೇವಾಲಯ ಬಹುತೇಕ ಜಲಾವೃತಗೊಂಡಿದೆ.
ಪ್ರವಾಹದ ನೀರು ಬಹುತೇಕ ದೇವಸ್ಥಾನದ ಗೋಪುರದ ವರೆಗೂ ತಲುಪಿದೆ. ಭಕ್ತಾದಿಗಳು ದೇವಸ್ಥಾನಕ್ಕೆ ಹೋಗುವ ಸಾಧ್ಯತೆಯೇ ಇಲ್ಲವಾಗಿದೆ. ಕೇವಲ ಗೋಪುರ ಮತ್ತು ಮೇಲ್ಛಾವಣಿ ಮಾತ್ರ ಕಾಣುತ್ತಿದೆ.
#Correction Gujarat: Part of BAPS Swaminarayan temple, located in Gondal city of Rajkot district, submerged in deep water following heavy rains in the area pic.twitter.com/LYeZpQNmB0
— ANI (@ANI) August 24, 2020
Also Read: ಭಾರೀ ಪ್ರವಾಹಕ್ಕೆ ಪ್ರಖ್ಯಾತ ಪಶುಪತಿನಾಥ ದೇವಸ್ಥಾನ ನೀರಲ್ಲಿ ಮುಳುಗಡೆ
Published On - 3:24 pm, Mon, 24 August 20