ಹೈದರಾಬಾದ್: ನಗರದ ಹಲವು ಕಡೆ ಭಾರಿ ಮಳೆ ಸುರಿಯುತ್ತಿದೆ. ಹಳೆಬಸ್ತಿ, ಸರೂರನಗರ, ಮೀರ್‌ಪೇಟ, ಕರ್ಮನ್ ಘಾಟ್, ಉಪ್ಪಲ್, ನಾಗೋಲ್, ಜುಬ್ಲಿ ಹಿಲ್ಸ್, ಎಲ್.ಬಿ.ನಗರ ಸೇರಿದಂತೆ ಹಲವಾರು ಕಡೆಗಳಲ್ಲಿ ವರುಣನ ನರ್ತನ ಹೆಚ್ಚಾಗಿದೆ.
ಹಳೆಬಸ್ತಿಯಲ್ಲಿ ಭಾರಿ ಮಳೆಯ ಕಾರಣ ಮೀರ ಆಲಂ ಕೆರೆ ತುಂಬಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಜನರನ್ನು ಈ ಪ್ರದೇಶದಿಂದ ತೆರವು ಮಾಡಿ ಸುರಕ್ಷಿತ ಸ್ಥಳಕ್ಕೆ ಹೋಗಲು ಸೂಚಿಸಿದ್ದಾರೆ. ಕಿಷನ್ ಭಾಗ್ ಪ್ರದೇಶ ಮೂಸಿ ನದಿಯಲ್ಲಿ ಕಿಚ್ಚಿಕೊಂಡು ಹೋಗುವ ಭೀತಿ ಶುರುವಾಗಿದೆ. ಜನರನ್ನು ಎಚ್ಚರಿಕೆಯಿಂದಿರಲು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ಮೂರು ದಿನಗಳ ಕಾಲ ಮಳೆ ಸುರಿಯೋ ಬಗ್ಗೆ ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಮುತ್ತಿನ ನಗರಿಯ ಜನತೆ ಜೀವ ಕೈಯಲ್ಲಿ ಹಿಡಿದು ಬದುಕುವಂತಾಗಿದೆ.
ಜನರ ನೆರವಿಗೆ ಧಾವಿಸಿದ ನಟರು:
ಹೈದರಾಬಾದ್ನಲ್ಲಿ ಭಾರಿ ಮಳೆಯಿಂದಾಗಿ ಪರಿಸ್ಥಿತಿ ತೀರ ಅದಗೆಡ್ಡಿದೆ. ಹೀಗಾಗಿ ಜನರ ನೆರವಿಗೆ ನಟರು ಧಾವಿಸಿದ್ದಾರೆ. ನಟ, ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ತೆಲಂಗಾಣ ಜನರ ಕಷ್ಟಕ್ಕೆ ಸ್ಪಂಧಿಸಿ 1ಕೋಟಿ ನೆರವು ನೀಡಿದ್ದಾರೆ. ಹಾಗೂ ನಟ ಚಿರಂಜೀವಿ, ಪ್ರಭಾಸ್ ಸಿಎಂ ಪರಿಹಾರ ನಿಧಿಗೆ ₹1 ಕೋಟಿ ನೀಡಿದ್ದಾರೆ.
Published On - 8:51 am, Wed, 21 October 20