PM Modi Birthday: ವೈಮಾನಿಕ ದಾಳಿಯಿಂದ ಹಿಡಿದು 370ನೇ ವಿಧಿಯನ್ನು ತೆಗೆದುಹಾಕುವವರೆಗೆ ಪ್ರಧಾನಿ ಮೋದಿಯವರ ಮಹತ್ವದ ನಿರ್ಧಾರಗಳು ಇಲ್ಲಿವೆ

|

Updated on: Sep 17, 2023 | 9:01 AM

ಪ್ರಧಾನಿ ನರೇಂದ್ರ ಮೋದಿ(Narendra Modi)ಯವರ 73ನೇ ಜನ್ಮದಿನ(Birthday) ಇಂದು. ಕಳೆದ 9 ವರ್ಷಗಳಿಂದ ನರೇಂದ್ರ ಮೋದಿಯವರು ನಮ್ಮ ದೇಶದ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದಾರೆ. 2014 ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಐತಿಹಾಸಿಕ ಜಯ ಸಾಧಿಸಿತು ಮತ್ತು ನರೇಂದ್ರ ಮೋದಿ ಅವರು ದೇಶದ 15 ನೇ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು.

PM Modi Birthday: ವೈಮಾನಿಕ ದಾಳಿಯಿಂದ ಹಿಡಿದು 370ನೇ ವಿಧಿಯನ್ನು ತೆಗೆದುಹಾಕುವವರೆಗೆ ಪ್ರಧಾನಿ ಮೋದಿಯವರ ಮಹತ್ವದ ನಿರ್ಧಾರಗಳು ಇಲ್ಲಿವೆ
ನರೇಂದ್ರ ಮೋದಿ
Follow us on

ಪ್ರಧಾನಿ ನರೇಂದ್ರ ಮೋದಿ(Narendra Modi)ಯವರ 73ನೇ ಜನ್ಮದಿನ(Birthday) ಇಂದು. ಕಳೆದ 9 ವರ್ಷಗಳಿಂದ ನರೇಂದ್ರ ಮೋದಿಯವರು ನಮ್ಮ ದೇಶದ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದಾರೆ. 2014 ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಐತಿಹಾಸಿಕ ಜಯ ಸಾಧಿಸಿತು ಮತ್ತು ನರೇಂದ್ರ ಮೋದಿ ಅವರು ದೇಶದ 15 ನೇ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು. ಮತ್ತೆ 2019 ರಲ್ಲಿ ಅವರು ಇನ್ನೂ ಹೆಚ್ಚಿನ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿದರು ಮತ್ತೆ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದರು. ಅವರು ಪ್ರಧಾನಿಯಾದಾಗಿನಿಂದ ದೇಶದ ಒಳಿತಿಗಾಗಿ ತೆಗೆದುಕೊಂಡು 10 ನಿರ್ಧಾರಗಳ ಬಗ್ಗೆ ಇಂದು ನಾವು ಮಾಹಿತಿ ನೀಡಲಿದ್ದೇವೆ.

ನೋಟು ಅಮಾನ್ಯೀಕರಣ:

ಪ್ರಧಾನಿ ಹುದ್ದೆಯ ಆಕಾಂಕ್ಷಿಯಾಗಿದ್ದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು 2014ರ ಲೋಕಸಭೆ ಚುನಾವಣೆಯ ವೇಳೆ ಕಪ್ಪುಹಣದ ವಿಷಯವನ್ನು ಬಲವಾಗಿ ಪ್ರಸ್ತಾಪಿಸಿದ್ದರು. ಸರ್ಕಾರ ರಚನೆ ನಂತರ 2016ರ ನವೆಂಬರ್ 8 ರಂದು ರಾತ್ರಿ 8 ಗಂಟೆಗೆ 500 ಹಾಗೂ ಸಾವಿರ ರೂ.ಗಳ ನೋಟುಗಳ ಅಮಾನ್ಯೀಕರಣವನ್ನು ಇದ್ದಕ್ಕಿದ್ದಂತೆ ಘೋಷಿಸಿದರು. ಪ್ರಧಾನಿಯವರ ಈ ನಡೆ ವಿಶ್ವದೆಲ್ಲೆಡೆ ಚರ್ಚೆಗೆ ಗ್ರಾಸವಾಗಿತ್ತು.
ಈ ಮೊದಲು 1946 ಮತ್ತು 1978ರಲ್ಲಿಯೂ ನೋಟುಗಳನ್ನು ನಿಷೇಧಿಸಲಾಗಿತ್ತು. ಆದರೆ ನಂತರ ಸರ್ಕಾರ ಅಧಿಸೂಚನೆ ಹೊರಡಿಸಿ ಜನರ ಬಳಿ ಇದ್ದ ಸಾವಿರ, ಐದು ಸಾವಿರ, 10 ಸಾವಿರ ರೂ.ಗಳ ಎಲ್ಲಾ ನೋಟುಗಳನ್ನು ಹಿಂಪಡೆದಿತ್ತು.

2016ರ ಸೆಪ್ಟೆಂಬರ್ 18ರಂದು ವೈಮಾನಿಕ ದಾಳಿ

ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿರುವ ಭಾರತೀಯ ಸೇನಾ ಪ್ರಧಾನ ಕಚೇರಿ ಮೇಲೆ ಬೆಳಗ್ಗೆ 5.30ರ ಸುಮಾರಿಗೆ ಉಗ್ರರು ದಾಳಿ ನಡೆಸಿದ್ದರು. ಇದರಲ್ಲಿ 19 ಯೋಧರು ಹುತಾತ್ಮರಾಗಿದ್ದರೆ, 30ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದರು.
ಪ್ರತೀಕಾರದ ಗುಂಡಿನ ದಾಳಿಯಲ್ಲಿ ನಾಲ್ವರು ಭಯೋತ್ಪಾದಕರು ಕೂಡ ಹತರಾಗಿದ್ದಾರೆ. ಇದಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಉನ್ನತ ಮಟ್ಟದ ಸಮಿತಿ ಸಭೆ ನಡೆಸಿ ಈ ದಾಳಿಗೆ ಪ್ರತಿಕ್ರಿಯೆ ನೀಡಲು ನಿರ್ಧರಿಸಿದ್ದರು.
28 ಸೆಪ್ಟೆಂಬರ್ 2016 ರಂದು, ಭಾರತೀಯ ಸೇನೆಯು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕರ ಅಡಗುತಾಣಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿತು.

ಮತ್ತಷ್ಟು ಓದಿ: ವಿಶ್ವಕರ್ಮ ಬ್ರಹ್ಮಾಂಡ ಶಿಲ್ಪಿ, ಪ್ರಧಾನಿ ಮೋದಿ ನವ ಭಾರತದ ಶಿಲ್ಪಿ: ಯೋಗಿ ಆದಿತ್ಯನಾಥ್

ಮಧ್ಯರಾತ್ರಿ ಅಂದರೆ 12 ಗಂಟೆಗೆ 150 ಕಮಾಂಡೋಗಳು MI 17 ಹೆಲಿಕಾಪ್ಟರ್‌ಗಳ ಮೂಲಕ LOC ಬಳಿ ಬಂದಿಳಿದರು. ಇಲ್ಲಿಂದ, ಪ್ಯಾರಾ 25 ಕಮಾಂಡೋಗಳು ಎಲ್ಒಸಿ ದಾಟಿ ಮೂರು ಕಿಲೋಮೀಟರ್ ನಡೆದ ನಂತರ ಭಯೋತ್ಪಾದಕರ ಅಡಗುತಾಣಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದರು.

ಕಾಶ್ಮೀರದಲ್ಲಿ 370ನೇ ವಿಧಿ ರದ್ದು

2019ರ ಆಗಸ್ಟ್​ 15ರಂದು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಲಾಯಿತು. ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿಯನ್ನು ರದ್ದುಗೊಳಿಸಿದ್ದಾರೆ ಎಂದು ಮಾಹಿತಿ ನೀಡಿದ್ದರು. ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನ ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳ ರಚನೆಯನ್ನು ಸಹ ಘೋಷಿಸಲಾಯಿತು.

ಈ ಸಂಪೂರ್ಣ ಪ್ರಕ್ರಿಯೆಯು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆಯಿತು. ಹಿಂಸಾಚಾರ ಮತ್ತು ಗಲಭೆಯ ಭಯದ ದೃಷ್ಟಿಯಿಂದ, ಜಮ್ಮು ಮತ್ತು ಕಾಶ್ಮೀರದ ಅನೇಕ ನಾಯಕರು ಮತ್ತು ಪ್ರತ್ಯೇಕತಾವಾದಿಗಳನ್ನು ಬಂಧಿಸಲಾಯಿತು. ಇಡೀ ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ಕರ್ಫ್ಯೂ ವಿಧಿಸಿತ್ತು. ಪ್ರಧಾನಿ ಮೋದಿಯವರ ಈ ನಿರ್ಧಾರ ವಿಶ್ವದೆಲ್ಲೆಡೆ ಚರ್ಚೆಗೆ ಗ್ರಾಸವಾಗಿತ್ತು.

ತ್ರಿವಳಿ ತಲಾಖ್

ಆಗಸ್ಟ್ 22, 2017 ರಂದು ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್ ಕಾನೂನುಬಾಹಿರ ಎಂದು ಘೋಷಿಸಿತು.
ಇದರ ನಂತರ, ಸರ್ಕಾರವು 28 ಡಿಸೆಂಬರ್ 2017 ರಂದು ಲೋಕಸಭೆಯಲ್ಲಿ ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಮಸೂದೆ 2017 ಅನ್ನು ಮಂಡಿಸಿತು. ಅದನ್ನು ಅಂಗೀಕರಿಸಿದ ನಂತರ ರಾಜ್ಯಸಭೆಗೆ ಕಳುಹಿಸಲಾಗಲಿಲ್ಲ. 2018ರಲ್ಲಿ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿತು.

2019 ರಲ್ಲಿ ಎರಡನೇ ಬಾರಿಗೆ ಸುಗ್ರೀವಾಜ್ಞೆಯನ್ನು ತರಲಾಯಿತು. ಈ ವರ್ಷ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೊಮ್ಮೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಸೂದೆಯನ್ನು ಮಂಡಿಸಿತು. ಎರಡೂ ಸ್ಥಳಗಳಿಂದ ಅನುಮೋದನೆ ದೊರೆತ ತಕ್ಷಣ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಹೊಸ ಕಾನೂನನ್ನು ಜಾರಿಗೆ ತರಲು ಅಧಿಸೂಚನೆ ಹೊರಡಿಸಿದರು.

ಸಿಎಎ ರಚನೆ

ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಸಂಸತ್ತಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಂದರೆ CAA ಅನ್ನು ಪರಿಚಯಿಸಿತು. ಪೌರತ್ವ ತಿದ್ದುಪಡಿ ಕಾಯ್ದೆಯಡಿ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಅಲ್ಪಸಂಖ್ಯಾತರು ಭಾರತದಲ್ಲಿ ಪೌರತ್ವದ ಹಕ್ಕನ್ನು ಪಡೆದರು.

ಸ್ವಚ್ಛ ಭಾರತ ಅಭಿಯಾನ

2014ರಲ್ಲಿ ಮೊದಲ ಬಾರಿಗೆ ಸರ್ಕಾರ ರಚಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಗಾಂಧಿ ಜಯಂತಿಯಂದು ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದರು. ಇದನ್ನು ಆರಂಭಿಸಿದ ಪ್ರಧಾನಿ ಮೋದಿ, ಜನರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ವಿನಂತಿಸಿದರು. ನಂತರ ಸರ್ಕಾರವೂ ಸ್ವಚ್ಛತೆ ತೆರಿಗೆ ಅಂದರೆ ಸೆಸ್ ಅನ್ನು ಜಾರಿಗೆ ತಂದಿತು. ಪ್ರಧಾನಿ ಮೋದಿಯವರ ಈ ಪ್ರಚಾರದ ವ್ಯಾಪಕ ಪರಿಣಾಮವೂ ಗೋಚರಿಸಿತು. ಸರ್ಕಾರವೂ ಸ್ವಚ್ಛತೆಗಾಗಿ ಜಿಲ್ಲಾ ಮಟ್ಟದಲ್ಲಿ ಸ್ಪರ್ಧೆಗಳನ್ನು ಆರಂಭಿಸಿತು.

ಅಂತಾರಾಷ್ಟ್ರೀಯ ಯೋಗ ದಿನ

27 ಸೆಪ್ಟೆಂಬರ್ 2014 ರಂದು, ಪ್ರಧಾನಿ ನರೇಂದ್ರ ಮೋದಿಯವರು ಮೊದಲ ಬಾರಿಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಜಾಗತಿಕ ವೇದಿಕೆಯಿಂದ, ಅವರು ಪ್ರಪಂಚದಾದ್ಯಂತದ ಜನರ ಉತ್ತಮ ಆರೋಗ್ಯಕ್ಕಾಗಿ ಯೋಗ ಅತ್ಯಗತ್ಯ ಎಂದು ಘೋಷಿಸಿದರು ಮತ್ತು ಅಂತರರಾಷ್ಟ್ರೀಯ ಯೋಗ ದಿನವನ್ನು ಒತ್ತಾಯಿಸಿದರು. ಇದರ ನಂತರ, ಪ್ರತಿ ವರ್ಷ ಜೂನ್ 21 ಅನ್ನು ಪ್ರಪಂಚದಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲಾಗುತ್ತದೆ.

ಪ್ರಧಾನಮಂತ್ರಿ ಉಜ್ವಲ ಯೋಜನೆ

ಪ್ರಧಾನಮಂತ್ರಿ ಮೋದಿಯವರು ಮೇ 1, 2016 ರಂದು ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಚಾಲನೆ ನೀಡಿದರು. ಇದು ಪ್ರಧಾನಿಯವರ ಮಹತ್ವಾಕಾಂಕ್ಷೆಯ ಯೋಜನೆಯಾಗಿತ್ತು. ಇದರ ಅಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಉಚಿತ ಗೃಹಬಳಕೆಯ ಗ್ಯಾಸ್ ಸಂಪರ್ಕಗಳನ್ನು ನೀಡಲಾಯಿತು. ಈ ಯೋಜನೆಯಡಿ, ಮಾರ್ಚ್ 2020 ರೊಳಗೆ ವಂಚಿತ ಕುಟುಂಬಗಳಿಗೆ ಎಂಟು ಕೋಟಿ ಎಲ್‌ಪಿಜಿ ಸಂಪರ್ಕಗಳನ್ನು ವಿತರಿಸುವ ಗುರಿಯನ್ನು ನಿಗದಿಪಡಿಸಲಾಗಿದೆ. 7 ಸೆಪ್ಟೆಂಬರ್ 2019 ರಂದು ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಎಂಟು ಕೋಟಿಯ ಎಲ್‌ಪಿಜಿ ಸಂಪರ್ಕವನ್ನು ಪ್ರಧಾನಿ ಹಸ್ತಾಂತರಿಸಿದರು. ಈ ಯೋಜನೆಯೊಂದಿಗೆ, LPG ಕವರೇಜ್ ಮೇ 1, 2016 ರಂದು 62% ರಿಂದ ಏಪ್ರಿಲ್ 1, 2021 ರ ವೇಳೆಗೆ 99.8% ಕ್ಕೆ ಏರಿತು.

ಆಯುಷ್ಮಾನ್ ಭಾರತ್

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಬಡ ನಾಗರಿಕರಿಗೆ ಉತ್ತಮ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು 23 ಸೆಪ್ಟೆಂಬರ್ 2018 ರಂದು ಆಯುಷ್ಮಾನ್ ಭಾರತ್ ಯೋಜನೆಯನ್ನು ಘೋಷಿಸಿದ್ದರು. ಇದರ ಅಡಿಯಲ್ಲಿ ಬಡ ಕುಟುಂಬಗಳಿಗೆ ಸರ್ಕಾರದಿಂದ 5 ಲಕ್ಷದವರೆಗೆ ಆರೋಗ್ಯ ವಿಮೆಯನ್ನು ನೀಡಲಾಗುತ್ತದೆ. ಎಲ್ಲಾ ಫಲಾನುಭವಿಗಳಿಗೆ ಕಾರ್ಡ್ ಮಾಡಲಾಗಿದ್ದು, ಇದರ ಮೂಲಕ ಯಾವುದೇ ಆಸ್ಪತ್ರೆಯಲ್ಲಿ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಪಡೆಯಬಹುದು. ಸರ್ಕಾರವು ಅನೇಕ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳನ್ನು ಈ ಯೋಜನೆಯಡಿ ಸೇರಿಸಿದೆ. ಅಲ್ಲಿ ಫಲಾನುಭವಿಗಳು ಉಚಿತ ಚಿಕಿತ್ಸೆ ಪಡೆಯಬಹುದು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ