Uttarakhand: ಹೋಟೆಲ್​ನಲ್ಲಿ ಅಗ್ನಿ ಅವಘಡ, ಸುಟ್ಟು ಕರಕಲಾದ ವಾಹನಗಳು

|

Updated on: Sep 17, 2023 | 9:42 AM

ಉತ್ತರಾಖಂಡದ ಮಸೂರಿಯಲ್ಲಿರುವ ಕ್ಯಾಮೆಲ್ ಬ್ಯಾಕ್​ ರೋಡ್​ನಲ್ಲಿರುವ ಹೋಟೆಲ್​ನಲ್ಲಿ ಭಾನುವಾರ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿ ಅವಘಡದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಹಲವು ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟವು. ಬೆಂಕಿಯಲ್ಲಿ ಎರಡು ವಾಹನಗಳು ಸುಟ್ಟು ಕರಕಲಾಗಿವೆ. ಈ ಘಟನೆಯಲ್ಲಿ ಪ್ರಾಣಹಾನಿಯಾಗಿರುವ ಬಗ್ಗೆ ಇದುವರೆಗೆ ಮಾಹಿತಿ ಲಭ್ಯವಾಗಿಲ್ಲ.

Uttarakhand: ಹೋಟೆಲ್​ನಲ್ಲಿ ಅಗ್ನಿ ಅವಘಡ, ಸುಟ್ಟು ಕರಕಲಾದ ವಾಹನಗಳು
ಹೋಟೆಲ್​ ಬೆಂಕಿ
Follow us on

ಉತ್ತರಾಖಂಡದ ಮಸೂರಿಯಲ್ಲಿರುವ ಕ್ಯಾಮೆಲ್ ಬ್ಯಾಕ್​ ರೋಡ್​ನಲ್ಲಿರುವ ಹೋಟೆಲ್​ನಲ್ಲಿ ಭಾನುವಾರ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿ ಅವಘಡದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಹಲವು ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟವು. ಬೆಂಕಿಯಲ್ಲಿ ಎರಡು ವಾಹನಗಳು ಸುಟ್ಟು ಕರಕಲಾಗಿವೆ. ಈ ಘಟನೆಯಲ್ಲಿ ಪ್ರಾಣಹಾನಿಯಾಗಿರುವ ಬಗ್ಗೆ ಇದುವರೆಗೆ ಮಾಹಿತಿ ಲಭ್ಯವಾಗಿಲ್ಲ.

ಮಾಹಿತಿ ಪ್ರಕಾರ ಮಸೂರಿಯ ದಿ ರಿಂಗ್ ಪೆವಿಲಿಯನ್ ಹೋಟೆಲ್​ನಲ್ಲಿ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಶಾರ್ಟ್​ ಸರ್ಕ್ಯೂಟ್​ನಿಂದ ಬೆಂಕಿ ಕಾಣಿಸಿಕೊಂಡಿದೆ. ಹೋಟೆಲ್​ನಲ್ಲಿದ್ದ ಸಿಬ್ಬಂದಿಯನ್ನು ಹೊರಗೆ ಕರೆದೊಯ್ಯಲು ಸಾಧ್ಯವಾಗಿರಲಿಲ್ಲ, ಸುತ್ತಲೂ ಬೆಂಕಿ ಆವರಿಸಿತ್ತು.

ಹೋಟೆಲ್​​ನಲ್ಲಿ ಸಿಬ್ಬಂದಿ ಕುಲದೀಪ್ ಸಿಂಗ್ ಹಾಗೂ ಸಹೋದ್ಯೋಗಿಗಳು ಮಲಗಿದ್ದಾಗ ಬೆಂಕಿಯ ಶಬ್ದ ಕೇಳಿಸಿತ್ತು, ದಟ್ಟ ಹೊಗೆ ಆವರಿಸುತ್ತಿತ್ತು. ಸಾಕಷ್ಟು ಮಂದಿ ಹೋಟೆಲ್​ನಿಂದ ಹೊರಗೆ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ.

ಮತ್ತಷ್ಟು ಓದಿ:ಬೆಂಗಳೂರು: ಶೂ, ಚಪ್ಪಲಿ ಗೋಡೌನ್​ನಲ್ಲಿ ಅಗ್ನಿ ಅವಘಡ, ಐದು ಕೋಟಿಗೂ ಅಧಿಕ ಮೌಲ್ಯದ ವಸ್ತುಗಳು ಭಸ್ಮ

ಒಟ್ಟು 11 ಮಂದಿ ಸಿಬ್ಬಂದಿ ಹೋಟೆಲ್​ನಲ್ಲಿದ್ದರು. ಬೆಳಗ್ಗೆ 6.30ರ ಸುಮಾರಿಗೆ ಬೆಂಕಿಯನ್ನು ಹತೋಟಿಗೆ ತರಲಾಯಿತು. ನಂತರ ಹೋಟೆಲ್​ನ ಕಿಟಕಿ ಗಾಜು ಒಡೆದು ಕೆಲವು ಸಿಬ್ಬಂದಿಯನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಯಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ