ಸಂವಿಧಾನ ಶಿಲ್ಪಿ ಬಿಆರ್​ ಅಂಬೇಡ್ಕರ್​ ಕನಸು ನನಸು ಮಾಡುತ್ತಿರುವ ಪ್ರಧಾನಿ ಮೋದಿ

ಭಾರತದ ಸಂವಿಧಾನಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರ ಕನಸನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಅಧಿಕಾರಾವಧಿ ಹಾಗೂ ರಾಜಕೀಯ ಜೀವನದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಗುಜರಾತ್ ಹಾಗೂ ಭಾರತದಲ್ಲಿನ ಹಿಂದುಳಿದ ಹಾಗೂ ದೀನದಲಿತರ ಅಭಿವೃದ್ಧಿಗೆ ಪ್ರಧಾನಿ ಮೋದಿ ಶ್ರಮಿಸಿದ ಸಾಕಷ್ಟು ಉದಾಹರಣೆಗಳನ್ನು ಕಾಣಬಹುದು. ಈ ಮೂಲಕ ತಮ್ಮ ರಾಜಕೀಯ ಹಾಗೂ ತಮ್ಮ ಆಡಳಿತ ಜೀವನದಲ್ಲಿ ಅಂಬೇಡ್ಕರ್ ಅವರ ಚಿಂತನೆಗಳನ್ನು ಹೇಗೆ ಅಳವಡಿಸಿಕೊಂಡಿದ್ದರು ಹಾಗೂ ಹೇಗೆ ಅನುಷ್ಠಾನಕ್ಕೆ ತರುವಲ್ಲಿ ಹೇಗೆ ಯಶಸ್ವಿಯಾದರು ಎಂಬುದನ್ನು ಇಲ್ಲಿ ನೋಡಬಹುದು.

ಸಂವಿಧಾನ ಶಿಲ್ಪಿ ಬಿಆರ್​ ಅಂಬೇಡ್ಕರ್​ ಕನಸು ನನಸು ಮಾಡುತ್ತಿರುವ ಪ್ರಧಾನಿ ಮೋದಿ
ನರೇಂದ್ರ ಮೋದಿ
Follow us
ನಯನಾ ರಾಜೀವ್
|

Updated on:Sep 17, 2023 | 11:17 AM

ಭಾರತದ ಸಂವಿಧಾನಶಿಲ್ಪಿ ಡಾ. ಬಿಆರ್ ಅಂಬೇಡ್ಕರ್(BR Ambedkar) ಅವರ ಕನಸನ್ನು ಪ್ರಧಾನಿ ನರೇಂದ್ರ ಮೋದಿ(Narendra Modi) ತಮ್ಮ ಅಧಿಕಾರಾವಧಿ ಹಾಗೂ ರಾಜಕೀಯ ಜೀವನದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಗುಜರಾತ್ ಹಾಗೂ ಭಾರತದಲ್ಲಿನ ಹಿಂದುಳಿದ ಹಾಗೂ ದೀನದಲಿತರ ಅಭಿವೃದ್ಧಿಗೆ ಪ್ರಧಾನಿ ಮೋದಿ ಶ್ರಮಿಸಿದ ಸಾಕಷ್ಟು ಉದಾಹರಣೆಗಳನ್ನು ಕಾಣಬಹುದು. ಈ ಮೂಲಕ ತಮ್ಮ ರಾಜಕೀಯ ಹಾಗೂ ತಮ್ಮ ಆಡಳಿತ ಜೀವನದಲ್ಲಿ ಅಂಬೇಡ್ಕರ್ ಅವರ ಚಿಂತನೆಗಳನ್ನು ಹೇಗೆ ಅಳವಡಿಸಿಕೊಂಡಿದ್ದರು ಹಾಗೂ ಹೇಗೆ ಅನುಷ್ಠಾನಕ್ಕೆ ತರುವಲ್ಲಿ ಹೇಗೆ ಯಶಸ್ವಿಯಾದರು ಎಂಬುದನ್ನು ಇಲ್ಲಿ ನೋಡಬಹುದು.

ಆರ್​ಎಸ್​ಎಸ್​ ಸ್ವಯಣಸೇವಕರಾಗಿರುವಾಗಲೇ ವಿಶೇಷ ಆಸಕ್ತಿ

ಆರ್​ಎಸ್​ಎಸ್​ ಸ್ವಯಂಸೇವಕರಾಗಿರುವ ಅವಧಿಯಿಂದಲೇ ಅಂಬೇಡ್ಕರ್ ಜೀವನದ ಬಗ್ಗೆ ಪ್ರಧಾನಿ ಮೋದಿ ವಿಶೇಷ ಆಸಕ್ತಿಯನ್ನು ಹೊಂದಿದ್ದರು. ಅಂಬೇಡ್ಕರ್ ಚಿಂತನೆಯ ದೊಡ್ಡ ಬೆಂಬಲಿಗರಾಗಿ ನಿಂತಿದ್ದರು. 1981ರಲ್ಲಿ ಮೀನಾಕ್ಷಿಪುರಂನಲ್ಲಿ ನಡೆದ ಒಂದು ದುರ್ಘಟನೆಯಲ್ಲಿ ಸಂಘವು ಹೇಗ ಕ್ರಿಯಾತ್ಮಕವಾಗಿ ಭಾಗವಹಿಸಿ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿಯವರ ಪಾತ್ರ ದೊಡ್ಡದಿತ್ತು ಎನ್ನಲಾಗಿದೆ. ಸಮಾಜದಲ್ಲಿ ಪರಿಶಿಷ್ಟ ವರ್ಗ ಹಾಗೂ ಪಂಗಡದ ಕಷ್ಟಗಳನ್ನು ಅರಿತುಕೊಂಡು ಸಂಘದ ಅವಧಿಯಿಂದಲೇ ಈ ನಿಟ್ಟಿನಲ್ಲಿ ಕೆಲಸ ಮಾಡುವಲ್ಲಿ ಮೋದಿ ಮುಂಚೂಣಿಯಲ್ಲಿದ್ದರು.

ಸಮಾನತೆಯ ಹಾದಿ

ಅಂಬೇಡ್ಕರ್ ಅವರ ಸಮಾನತೆಯ ಹಾದಿಯಲ್ಲೇ ಹೆಜ್ಜೆ ಇಟ್ಟಿರುವ ಪ್ರಧಾನಿ ಮೋದಿ ತಮ್ಮ ಆಡಳಿತ ಅವಧಿಯಲ್ಲಿ ಸಮಾಜದಲ್ಲಿ ಹಿಂದುಳಿತಂಥಾ ವರ್ಗವನ್ನು ಮುನ್ನೆಲೆಗೆ ತರುವಂತಹ ಯೋಜನೆಗಳನ್ನು ಘೋಷಿಸುತ್ತಲೇ ಬಂದಿದ್ದಾರೆ. ಜನಧನದಿಂದ ಹಿಡಿದು ಮುದ್ರಾದವರೆಗೂ ಸಮಾಜದಲ್ಲಿ ಇಷ್ಟು ವರ್ಷಗಳ ಕಾಲ ಕಡೆಗಣಿಸಲ್ಪಟ್ಟಂತಹ ವರ್ಗಕ್ಕೆ ಹೆಚ್ಚಿನ ಆಧ್ಯತೆ ನೀಡಿ ಅವರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆಯನ್ನು ಮೋದಿ ಇರಿಸಿದ್ದಾರೆ. ಜನಧನ್ ಹಾಗೂ ಮುದ್ರಾದ ಕಾರಣದಿಂದ ನಗರೀಕರಣ ಹಾಗೂ ಕೈಗಾರೀಕರಣದಲ್ಲಿ ಸಮಾಜದಲ್ಲಿ ಹಿಂದುಳಿದ ವರ್ಗಕ್ಕೆ ಆಧ್ಯತೆ ದೊರೆಯಲು ಸಾಧ್ಯವಾಗಿದೆ.

ಕೈಗಾರೀಕರಣ

ಭಾರತದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಕೈಗಾರೀಕರಣವಾಗಬೇಕು ಎಂಬುದು ಡಾ.ಬಿಆರ್ ಅಂಬೇಡ್ಕರ್ ಅವರ ಕನಸಾಗಿತ್ತು. ಆ ನಿಟ್ಟಿನಲ್ಲಿ ಪ್ರಧಾನಿ ಮೋದಿ ಮೇಕ್ ಇನ್ ಇಂಡಿಯಾ ಯೋಜನೆಗೆ ಸಾಕಷ್ಟು ಒತ್ತು ನೀಡಿದ್ದಾರೆ. ತೆರಿಗೆ ಇಳಿಕೆ, ಹಾಗೂ ಕಾರ್ಮಿಕ ನೀತಿಯಲ್ಲಿನ ಸರಳೀಕರವು ಭಾರತವು ಜಗತ್ತಿನ ಕೈಗಾರಿಕ ಹಬ್ ಆಗುವತ್ತ ಹಾಗೂ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಲು ಪ್ರಮುಖ ಕಾರಣ ಎಂದೇ ಹೇಳಬಹುದು. ಭಾರತದ ಬಗ್ಗೆ ಅಂಬೇಡ್ಕರ್ ಹೊಂದಿದ್ದ ಕನಸು ಹಾಗೂ ಭವಿಷ್ಯದ ಬಗ್ಗೆ ಹೊಂದಿದ್ದ ಉತ್ಸುಕತೆಯನ್ನು ಮೋದಿ ತಮ್ಮ ಆಡಳಿತಾವಧಿಯಲ್ಲಿ ತೋರಿಸುತ್ತಿದ್ದಾರೆ. 42ನೇ ಮನ್​ಕಿ ಬಾತ್​ನಲ್ಲಿ ಈ ಬಗ್ಗೆ ವಿವರಿಸಿದ್ದರು, ನಮ್ಮ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆಯು ಭಾರತದ ಬಗ್ಗೆ ಅಂಬೇಡ್ಕರ್ ಹೊಂದಿದ್ದ ದೂರದೃಷ್ಟಿಯನ್ನು ಹೋಲುತ್ತದೆ.

ಕೈಗಾರೀಕರಣ ಹಬ್

ಭಾರತವು ಜಗತ್ತಿನ ಕೈಗಾರೀಕರಣ ಹಬ್ ಆಗಬೇಕೆಂಬುದು ಅಂಬೇಡ್ಕರ್ ಅವರ ಕನಸಾಗಿತ್ತು. ಈ ನಿಟ್ಟಿನಲ್ಲಿ ಸ್ಟಾರ್ಟ್​ಅಪ್ ಇಂಡಿಯಾ, ಸ್ಟ್ಯಾಂಡ್​ಅಪ್ ಇಂಡಿಯಾ ಎನ್ನುವ ಕಾರ್ಯಕ್ರಮಗಳು ಅವರ ಕನಸಿಗೆ ಪೂರಕವಾಗಿವೆ. ಭಾರತವು ಬಡತನ ರೇಖೆಗಿಂತ ಮೇಲಿರಬೇಕೆಂದಾದರೆ ಕೈಗಾರೀಕರಣದಲ್ಲಿ ಕ್ರಾಂತಿಯನ್ನು ಮಾಡಬೇಕೆಂಬುದು ಅಂಬೇಡ್ಕರ್ ಅವರ ವಾದವಾಗಿತ್ತು.

ಅದೇ ನಿಟ್ಟಿನಲ್ಲಿ ಮೋದಿ ತಮ್ಮ ಹೆಜ್ಜೆಯನ್ನು ಇರಿಸಿದ್ದಾರೆ, ಇದಲ್ಲದೇ ದೇಶದ ಪ್ರತಿಯೊಬ್ಬ ಜನರಿಗೂ ಅಭಿವೃದ್ಧಿಯ ಲಾಭ ದೊರೆಯಬೇಕೆನ್ನುವ ಕಾರಣದಿಂದ ಪ್ರತಿಯೊಂದು ಮನೆಗೂ ವಿದ್ಯುತ್ ಸಂಪರ್ಕ, ರಸ್ತೆ ಸಂಪರ್ಕ, ರೈಲ್ವೆ, ವಿಮಾನ ಸಂಪರ್ಕವನ್ನು ನೀಡುವ ನಿಟ್ಟಿನಲ್ಲಿ ಕಳೆದ 9 ವರ್ಷಗಳಲ್ಲಿ ಸಾಕಷ್ಟು ಮೂಲ ಸೌಕರ್ಯ ಯೋಜನೆಗಳನ್ನು ಹಾಕಿಕೊಂಡಿದ್ದಾರೆ.

ಮತ್ತಷ್ಟು ಓದಿ: PM Modi Birthday: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ, ರಾಷ್ಟ್ರಪತಿ ಮುರ್ಮು ಹಾಗೂ ಕೇಂದ್ರ ಸಚಿವರಿಂದ ಶುಭಾಶಯ

ವಿಶೇಷವಾಗಿ ಸೌಭಾಗ್ಯ ಯೋಜನೆ ಮೂಲಕ ದೇಶದ ಪ್ರತಿಯೊಬ್ಬ ನಾಗರಿಕರ ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸುವಂತಹ ಯೋಜನೆಯನ್ನು ಸಾಕಾರಗೊಳಿಸಲಾಗಿದೆ. ದೇಶದ ಪ್ರತಿಯೊಬ್ಬರ ಜನರಿಗೂ ಶುದ್ಧ ಕುಡಿಯುವ ನೀರನ್ನು ಕೊಡಬೇಕೆನ್ನುವುದು ಅಂಬೇಡ್ಕರ್ ಅವರ ಕನಸಾಗಿತ್ತು, ಈ ನಿಟ್ಟಿನಲ್ಲಿ ಜಲಜೀವನ್ ಮಿಷನ್ ಯೋಜನೆಯ ಅಂಗವಾಗಿ ಸುಮಾರು 13 ಕೋಟಿ ಗ್ರಾಮೀಣ ಕುಟುಂಬಗಳಿಗೆ ಕುಡಿಯುವ ನೀರಿನ ಸಂಪರ್ಕ ಕೊಡುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮಾಡಿದೆ.

ದೇಶದ ಪ್ರತಿಯೊಬ್ಬ ನಾಗರಿಕರಿಗೂ ಪ್ರತಿ ಬಡವನ ಮಕ್ಕಳಿಗೂ ಶಿಕ್ಷಣ ದೊರೆಯಬೇಕೆಂಬುದು ಅಂಬೇಡ್ಕರ್ ಕನಸಾಗಿತ್ತು ಹೀಗಾಗಿ 2020ರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ ಜಾರಿ ಮಾಡಿದೆ, ಇದು 21ನೇ ಶತಮಾನದ ಭಾರತಕ್ಕೆ ಪೂರಕವಾದ ಶಿಕ್ಷಣ ನೀತಿ ಆಗಿದೆ.

ಅಂಬೇಡ್ಕರ್ ಅವರ ಚಿಂತನೆಯಲ್ಲಿ ಬಹುದೊಡ್ಡ ಸ್ಥಾನವನ್ನು ಹೊಂದಿದ್ದು ಸಮಾನತೆ, ಅದರಲ್ಲೂ ಮಹಿಳೆಯರಿಗೆ ವಿಶೇಷ ಸ್ಥಾನ ಮಾನ ನೀಡುವುದು ಅವರ ಕನಸಾಗಿತ್ತು ಹೀಗಾಗಿ ತ್ರಿವಳಿ ತಲಾಖ್ ವ್ಯವಸ್ಥೆಗೆ ನರೇಂದ್ರ ಮೋದಿ ಸರ್ಕಾರ ತೆರೆ ಎಳೆದಿದೆ. ಹಾಗೆಯೇ ಮಹಿಳೆಯರ ಮದುವೆಯ ವಯಸ್ಸನ್ನು 18ರಿಂದ 21ವರ್ಷಕ್ಕೆ ಏರಿಸಿದೆ.

ಅಂಬೇಡ್ಕರ್ ಭವನ

ಅಂಬೇಡ್ಕರ್ ಕನಸ್ಸನ್ನು ನನಸು ಮಾಡುವಂತ ಅವರನ್ನು ಅಮರರನ್ನಾಗಿಸುವ ಕೆಲಸವು ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಆರಂಭವಾಗಿದ್ದಲ್ಲ ಅವರು ಗುಜರಾತ್​ನಲ್ಲಿ ಬಿಜೆಪಿಯ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದಾಗಲೇ ಆರಂಭಿಸಿದ್ದರು. ಗುಜರಾತ್​ನಾದ್ಯಂತ ಅಂಬೇಡ್ಕರ್ ಅವರ ಪ್ರತಿಮೆಯನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ದೊಡ್ಡ ಕೆಲಸವನ್ನು 1997ರ ಸಮಯದಲ್ಲಿ ಮಾಡಿದ್ದರು. ಮುಖ್ಯಮಂತ್ರಿಯಾದ ಬಳಿಕ ರಾಜ್ಯಾದ್ಯಂತ ಅಂಬೇಡ್ಕರ್ ಭವನವನ್ನು ಸ್ಥಾಪಿಸಿದರು.

ಹಾಗೆಯೇ ಸಂವಿಧಾನವನ್ನು ಅನುಷ್ಠಾನಗೊಳಿಸಿದ 60ನೇ ವರ್ಷದ ನೆನಪಿಗಾಗಿ ರಾಜ್ಯಾದ್ಯಂತ ಸಂವಿಧಾನ ಯಾತ್ರೆಯನ್ನು ಮೋದಿ ಮಾಡಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:15 am, Sun, 17 September 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್