PM Narendra Modi Horoscope: ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಹಿನ್ನೆಲೆಯಲ್ಲಿ ಜಾತಕ ವಿಶ್ಲೇಷಣೆ

2028ರ ಜೂನ್ ವೇಳೆಗೆ ನರೇಂದ್ರ ಮೋದಿ ಅವರ ಜನ್ಮ ಜಾತಕದ ಪ್ರಕಾರ ಕುಜ-ರಾಹು ಸಂಧಿ ಕಾಲ (ಅಂದರೆ ಕುಜ ದಶೆ ಮುಗಿದು ರಾಹು ದಶೆ ಆರಂಭ ಆಗುವ ಕಾಲ). ಇದು ಮೋದಿಯವರು ಪ್ರಧಾನ ಮಂತ್ರಿ ಹುದ್ದೆಯನ್ನು ಬಿಟ್ಟು ಕೆಳಗೆ ಇಳಿಯಬಹುದಾದ ಕಾಲವಾಗಿರಲಿಕ್ಕೂ ಸಾಕು ಎಂದು ವಿಶ್ಲೇಷಿಸಿದ್ದಾರೆ ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ.

PM Narendra Modi Horoscope: ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಹಿನ್ನೆಲೆಯಲ್ಲಿ ಜಾತಕ ವಿಶ್ಲೇಷಣೆ
ನರೇಂದ್ರ ಮೋದಿ (ಒಳ ಚಿತ್ರದಲ್ಲಿ ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿ)
Follow us
TV9 Web
| Updated By: Ganapathi Sharma

Updated on: Sep 16, 2023 | 2:37 PM

ಇದೇ ತಿಂಗಳು, ಅಂದರೆ ಸೆಪ್ಟೆಂಬರ್ 17ನೇ ತಾರೀಕಿನಂದು ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರ ಜನ್ಮದಿನ. 73 ವರ್ಷ ಪೂರ್ತಿ ಆಗುತ್ತದೆ. ಜನ್ಮದಿನದ ಹಿನ್ನೆಲೆಯಲ್ಲಿ ಅವರ ಜನ್ಮ ಜಾತಕವನ್ನು ವಿಶ್ಲೇಷಣೆ (Horoscope analysis) ಮಾಡಿ, ಮುಂದಿನ ಕೆಲವು ವರ್ಷಗಳು ಹೇಗಿರುತ್ತವೆ ಎಂಬುದನ್ನು ಇಲ್ಲಿ ವಿಶ್ಲೇಷಿಸಿದ್ದೇನೆ. ಇದು ಈ ವರೆಗಿನ ವಿಶ್ಲೇಷಣೆಗಿಂತ ಭಿನ್ನ ಮತ್ತು ನಿರ್ಣಾಯಕವಾದಂಥದ್ದು. ಏಕೆಂದರೆ, ಸ್ವತಃ ನಾನೇ ಹಲವು ಸಲ ಹೇಳಿದ್ದ ಭವಿಷ್ಯ ಹೆಚ್ಚು- ಕಡಿಮೆ 2026ನೇ ಇಸವಿಯ ತನಕ ಮಾತ್ರ ಇದೆ. ಆದರೆ ಈಗ ಹೇಳಲು ಹೊರಟಿರುವುದು ಅದರ ಆಚೆಗೆ ಹಾಗೂ ಇನ್ನು ಮುಂದೆ ಹೇಗೆಲ್ಲ ಇರಲಿದೆ ಎಂಬುದರ ಭವಿಷ್ಯ ವಿಶ್ಲೇಷಣೆ.

ನರೇಂದ್ರ ದಾಮೋದರ್ ದಾಸ್ ಮೋದಿ ಅವರ ಜನ್ಮದಿನ 1950ನೇ ಇಸವಿ ಸೆಪ್ಟೆಂಬರ್ 17ನೇ ತಾರೀಕು. ಅಂದು ಭಾದ್ರಪದ ಶುದ್ಧ ಷಷ್ಠಿ ತಿಥಿ, ಭಾನುವಾರ. ಅಂದಿನ ನಕ್ಷತ್ರ ಅನೂರಾಧಾ, ರಾಶಿ ವೃಶ್ಚಿಕ. ಜನ್ಮ ಸಮಯದ ಪ್ರಾಥಮಿಕ ಮಾಹಿತಿ ಇದು. ಈ ತಿಂಗಳ ಹದಿನೇಳನೇ ತಾರೀಕು ಅವರ ಜನ್ಮದಿನ. ಸದ್ಯಕ್ಕೆ ಅವರಿಗೆ ಕುಜ ದಶೆ ಹಾಗೂ ಗುರು ಭುಕ್ತಿ. ವೃಶ್ಚಿಕ ಲಗ್ನದವರೂ ಆದ ಮೋದಿ ಅವರಿಗೆ ಈಗ ನಡೆಯುತ್ತಿರುವುದು ಲಗ್ನಾಧಿಪತಿಯ ದಶೆ. ಹಾಗೂ ದ್ವಿತೀಯ ಹಾಗೂ ಪಂಚಮಾಧಿಪತಿಯಾದ ಗುರುವಿನ ಭುಕ್ತಿ. ಈ ಭುಕ್ತಿ 2024ರ ಮಾರ್ಚ್ ತನಕ ಇದೆ.

ನರೇಂದ್ರ ಮೋದಿ ಅವರು ಈ ಅವಧಿಯಲ್ಲಿ ಮಾಡುವ ಸಾಧನೆ ಅಮೋಘವಾಗಿ ಇರುತ್ತದೆ. ಆದರೆ ಅದೇ ಸಮಯದಲ್ಲಿ ನಿಂದೆಗಳನ್ನೂ ಕೇಳಬೇಕಾಗುತ್ತದೆ. ‘ಶ್ರೇಯಾಂಸಿ ಬಹು ವಿಘ್ನಾನಿ’ ಎಂಬುದು ನಿಂದನೆ ಎಂದು ಮೋದಿಯವರನ್ನು ಇಷ್ಟಪಡುವವರು ತಿಳಿದುಕೊಳ್ಳಲಿ. ಈ ಅವಧಿಯಲ್ಲಿ ಕೋಪ-ತಾಪ ಕೂಡದು.

2025ನೇ ಇಸವಿಯ ಮಾರ್ಚ್ ನಂತರ 2027ನೇ ಇಸವಿಯ ಜೂನ್ ತನಕ ಮೋದಿಯವರಿಗೆ ಅಪವಾದ ಭಯ, ಮಾನಸಿಕ ಹಿಂಸೆ, ಕೆಲ ಅಪಾಯಗಳು ಎದುರಾಗಬಹುದು. ಇದೂ ಸಾಲದು ಎಂಬಂತೆ 2025ನೇ ಇಸವಿಯ ಏಪ್ರಿಲ್ ನಿಂದ 2026ನೇ ಇಸವಿಯ ಏಪ್ರಿಲ್ ತನಕ ಕುಜ ದಶೆಯಲ್ಲಿ ಬುಧ ಭುಕ್ತಿಯೂ ನಡೆಯುವುದರಿಂದ ಒಂದೆಡೆ ವಿದೇಶದಲ್ಲಿ ಉನ್ನತ ಗೌರವಾದರ, ಸ್ಥಾನ- ಮಾನಗಳೂ ದೇಶದ ಒಳಗೆ ಶತ್ರುಗಳ ಪೀಡೆಯೂ ಹೆಚ್ಚಾಗಲಿದೆ. ಖರದ್ರೇಕ್ಕಾಣಾಧಿಪತಿ ಬುಧನ ಭುಕ್ತಿಯೂ ಕುಜನ ಶತ್ರುವೂ ಆಗಿರೋದು ಉತ್ತಮವಲ್ಲ. ಈ ಸನ್ನಿವೇಶದಲ್ಲಿ ಮೋದಿಯವರು ಅಭಿಮಾನದಿಂದ ನೋಡುವವರಿಗೆ ಸಹಜವಾಗಿ ನೋವಾಗುತ್ತದೆ. ಆದರೆ ಮೋದಿಯವರ ಜಾತಕ ವಿಶ್ಲೇಷಣೆ ಮಾಡಿದರೆ ಈ ಜೀವಕ್ಕೆ ನೋವು- ನಲಿವುಗಳು ಅಂಟಿಕೊಳ್ಳುವುದಿಲ್ಲ. ಆ ವ್ಯಕ್ತಿ ಸ್ಥಿತಪ್ರಜ್ಞ. ಆದ್ದರಿಂದ ಅವರಲ್ಲೇನೂ ಆತಂಕ ಇರುವುದಿಲ್ಲ.

ಆದರೂ ಬುಧ ಭುಕ್ತಿ ಕಾಲದಲ್ಲಿ ಅವರ ದೇಹದಲ್ಲಿ ಕ್ಯಾಲ್ಷಿಯಂ ಪ್ರಮಾಣ ಕಡಿಮೆಯಾಗಿ ನರಗಳ ದುರ್ಬಲತೆ ಕಾಣಿಸಬಹುದು. ಆದರೆ ಇದೆಲ್ಲ ದೊಡ್ಡ ವಿಚಾರವೇನಲ್ಲ. ವೈದ್ಯಕೀಯ ಚಿಕಿತ್ಸೆಗಳಿವೆ. ಗಟ್ಟಿಯಾಗಿ ಹೇಳಬಹುದಾದ್ದು ಏನೆಂದರೆ, ಆಯಸ್ಸಿಗೆ ಯಾವ ತೊಂದರೆಯೂ ಇಲ್ಲ. 2028ರ ಜೂನ್ ವೇಳೆಗೆ ನರೇಂದ್ರ ಮೋದಿ ಅವರ ಜನ್ಮ ಜಾತಕದ ಪ್ರಕಾರ ಕುಜ-ರಾಹು ಸಂಧಿ ಕಾಲ (ಅಂದರೆ ಕುಜ ದಶೆ ಮುಗಿದು ರಾಹು ದಶೆ ಆರಂಭ ಆಗುವ ಕಾಲ). ಇದು ಮೋದಿಯವರು ಪ್ರಧಾನ ಮಂತ್ರಿ ಹುದ್ದೆಯನ್ನು ಬಿಟ್ಟು ಕೆಳಗೆ ಇಳಿಯಬಹುದಾದ ಕಾಲವಾಗಿರಲಿಕ್ಕೂ ಸಾಕು.

ಆ ನಂತರದ ರಾಜಕಾರಣವೇ ಬೇರೆ ಆಗುತ್ತದೆ. ಗೋಚಾರ ರೀತಿಯಾಗಿ ನೋಡಿದರೂ ಇಡೀ ಜಗತ್ತೇ ಕಲಹಗಳನ್ನು ಎದುರಿಸಲಿದೆ ಎಂಬುದು ಕಂಡುಬರುತ್ತದೆ. ಮ್ಲೇಂಚ್ಛಾಂತಕರಿಗೆ ಅಂತ್ಯವಾಗುವ ಕಾಲ. ಮ್ಲೇಂಚ್ಛರಿಗೆ ಅವರ ತತ್ವ ಮತಕ್ಕೆ ವಿರುದ್ಧವಾದವರು ಅಂತ್ಯ ಮಾಡಲು ಎದುರಾದಾರು. ಇದು ಭಾರತದಲ್ಲೂ ನಡೆಯಬಹುದು. ಆಗಲೇ ಯೋಗಿ ಆದಿತ್ಯನಾಥ್ ರಂಥ ವ್ಯಕ್ತಿ ಪ್ರಧಾನಿಯಾಗಿ ಅಂಥವರನ್ನು ಹತೋಟಿಗೆ ತರುವರು. ನರೇಂದ್ರ ಮೋದಿಯವರು ಇಡೀ ವಿಶ್ವಕ್ಕೆ ಅತ್ಯಂತ ಬೇಕಾದ ವ್ಯಕ್ತಿಯಾಗಿ, ರಾಜ ಸನ್ಯಾಸಿಯಂತೆ ಬಹುದೊಡ್ಡ ಜವಾಬ್ದಾರಿಯ ಸ್ಥಾನಕ್ಕೆ ಏರಬಹುದು.

ಇನ್ನು ಈ ಬಾರಿ ಪ್ರಧಾನಿ ಮೋದಿಯವರ ಹುಟ್ಟುಹಬ್ಬದ ವಿಶೇಷ ಏನೆಂದರೆ, ಅವರ ಜನ್ಮ ನಕ್ಷತ್ರದ ತಿಕೋಣ ನಕ್ಷತ್ರದಲ್ಲೇ ಬರುತ್ತದೆ. ರಾಶಿಯೂ ತ್ರಿಕೋಣ ಕರ್ಕ ವೃಶ್ಚಿಕ ಕರ್ಕ ಮೀನ ತ್ರಿಕೋಣ ರಾಶಿಯೂ ಪುಷ್ಯಾ ಅನೂರಾಧಾ, ಉತ್ತರಾಭಾದ್ರಾ ಶನಿಯ ತಿಕೋಣ ನಕ್ಷತ್ರ. ಸೆಪ್ಟೆಂಬರ್ 17ನೇ ತಾರೀಕಿನಂದು ಪುಷ್ಯಾ ನಕ್ಷತ್ರ ಇದೆ.

ಇದನ್ನೂ ಓದಿ: ತಂಡವನ್ನು ಮುನ್ನಡೆಸುವ ಸ್ವಾಭಾವಿಕ ಸಾಮರ್ಥ್ಯವನ್ನು ಹೊಂದಿರುವ 5 ರಾಶಿಯವರು

ಒಟ್ಟಿನಲ್ಲಿ ಮೋದಿಯವ ಅಖಂಡ ಸಾಮ್ರಾಜ್ಯ ಯೋಗವು ಜಗತ್ತನ್ನೇ ಆಳಲಿದೆ. ಆದರೆ ಇದು ಹೆದರಿಸಿ, ಬೆದರಿಸಿ ಅಥವಾ ಕ್ರೌರ್ಯದಿಂದಲ್ಲ. ಪ್ರಜಾಪ್ರೀತಿ ಸಂಪಾದಿಸಿಯೇ ಆಯ್ಕೆಯಾಗೋದು. ಮುಂದಿನ ಸಲದ ಲೋಕಸಭೆಯಲ್ಲಿ ಬಿಜೆಪಿ ಯಾರ ಹಂಗೂ ಇಲ್ಲದೆ ಅಧಿಕಾರಕ್ಕೆ ಬರುತ್ತದೆ. ಜತೆಗೆ ದೇಶದ ಕೀರ್ತಿಯು ವಿಶ್ವದಾದ್ಯಂತ ಹರಡಲಿದೆ.

ಜ್ಯೋತಿಷ್ಯ ರೀತಿಯಲ್ಲೇ ಖಾತ್ರಿಯಾಗಿ ಹೇಳಬಹುದಾದ್ದು ಏನೆಂದರೆ, ನರೇಂದ್ರ ಮೋದಿ ಅವರ ಹೆಸರು ಇತಿಹಾಸದಲ್ಲಿ ತುಂಬ ಎತ್ತರದ ವ್ಯಕ್ತಿತ್ವವಾಗಿ ದಾಖಲಾಗುತ್ತದೆ. ಈ ಮುನಷ್ಯ ಶತ್ರುಗಳು ಸಹ ಮೆಚ್ಚುವಂಥ, ಒಪ್ಪುವಂಥ ಕೆಲಸ ಮಾಡಿಯೇ ಮಾಡುತ್ತಾರೆ. ರಾಜಕೀಯ ದ್ವೇಷಗಳು ಹಾಗೂ ಅಸೂಯೆಯ ಆಚೆಗೆ ಎಲ್ಲರೂ ಒಪ್ಪುವಂಥ ಕೆಲಸಗಳು ಆಗುತ್ತವೆ. ನಮ್ಮ ಮುಂದಿನ ತಲೆಮಾರುಗಳು ಸ್ಮರಣೆ ಮಾಡುವಂಥ ವ್ಯಕ್ತಿ ನರೇಂದ್ರ ಮೋದಿ ಆಗುತ್ತಾರೆ.

ಲೇಖಕರು: ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿ, ಕಾಪು (ಉಡುಪಿ)

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ