Uttarakhand: ಹೋಟೆಲ್ನಲ್ಲಿ ಅಗ್ನಿ ಅವಘಡ, ಸುಟ್ಟು ಕರಕಲಾದ ವಾಹನಗಳು
ಉತ್ತರಾಖಂಡದ ಮಸೂರಿಯಲ್ಲಿರುವ ಕ್ಯಾಮೆಲ್ ಬ್ಯಾಕ್ ರೋಡ್ನಲ್ಲಿರುವ ಹೋಟೆಲ್ನಲ್ಲಿ ಭಾನುವಾರ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿ ಅವಘಡದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಹಲವು ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟವು. ಬೆಂಕಿಯಲ್ಲಿ ಎರಡು ವಾಹನಗಳು ಸುಟ್ಟು ಕರಕಲಾಗಿವೆ. ಈ ಘಟನೆಯಲ್ಲಿ ಪ್ರಾಣಹಾನಿಯಾಗಿರುವ ಬಗ್ಗೆ ಇದುವರೆಗೆ ಮಾಹಿತಿ ಲಭ್ಯವಾಗಿಲ್ಲ.

ಮಾಹಿತಿ ಪ್ರಕಾರ ಮಸೂರಿಯ ದಿ ರಿಂಗ್ ಪೆವಿಲಿಯನ್ ಹೋಟೆಲ್ನಲ್ಲಿ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿದೆ. ಹೋಟೆಲ್ನಲ್ಲಿದ್ದ ಸಿಬ್ಬಂದಿಯನ್ನು ಹೊರಗೆ ಕರೆದೊಯ್ಯಲು ಸಾಧ್ಯವಾಗಿರಲಿಲ್ಲ, ಸುತ್ತಲೂ ಬೆಂಕಿ ಆವರಿಸಿತ್ತು.
#WATCH | Mussoorie, Uttarakhand | Fire broke out in a hotel located on Mussoorie Camel Back Road. Two vehicles were burnt to ashes in the fire. Several fire tenders reached the spot and are trying to control the fire.
Mussoorie Police Station SHO Shankar Singh Bisht says… pic.twitter.com/AoUMlhTiVN
— ANI UP/Uttarakhand (@ANINewsUP) September 17, 2023
ಹೋಟೆಲ್ನಲ್ಲಿ ಸಿಬ್ಬಂದಿ ಕುಲದೀಪ್ ಸಿಂಗ್ ಹಾಗೂ ಸಹೋದ್ಯೋಗಿಗಳು ಮಲಗಿದ್ದಾಗ ಬೆಂಕಿಯ ಶಬ್ದ ಕೇಳಿಸಿತ್ತು, ದಟ್ಟ ಹೊಗೆ ಆವರಿಸುತ್ತಿತ್ತು. ಸಾಕಷ್ಟು ಮಂದಿ ಹೋಟೆಲ್ನಿಂದ ಹೊರಗೆ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ.
ಮತ್ತಷ್ಟು ಓದಿ:ಬೆಂಗಳೂರು: ಶೂ, ಚಪ್ಪಲಿ ಗೋಡೌನ್ನಲ್ಲಿ ಅಗ್ನಿ ಅವಘಡ, ಐದು ಕೋಟಿಗೂ ಅಧಿಕ ಮೌಲ್ಯದ ವಸ್ತುಗಳು ಭಸ್ಮ
ಒಟ್ಟು 11 ಮಂದಿ ಸಿಬ್ಬಂದಿ ಹೋಟೆಲ್ನಲ್ಲಿದ್ದರು. ಬೆಳಗ್ಗೆ 6.30ರ ಸುಮಾರಿಗೆ ಬೆಂಕಿಯನ್ನು ಹತೋಟಿಗೆ ತರಲಾಯಿತು. ನಂತರ ಹೋಟೆಲ್ನ ಕಿಟಕಿ ಗಾಜು ಒಡೆದು ಕೆಲವು ಸಿಬ್ಬಂದಿಯನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಯಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ