AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ: ಪಾರ್ಕಿಂಗ್ ವಿಚಾರಕ್ಕೆ ಶುರುವಾದ ಗಲಾಟೆ, ಕೊಲೆಯಲ್ಲಿ ಅಂತ್ಯ

ಪಾರ್ಕಿಂಗ್ ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿದೆ. ಶನಿವಾರ ಸಂಜೆ ದೆಹಲಿಯ ಮನೆಯೊಂದಕ್ಕೆ ನುಗ್ಗಿದ ಆರು ದುಷ್ಕರ್ಮಿಗಳು ಪತ್ನಿ ಹಾಗೂ ಮಗನ ಎದುರೇ ವ್ಯಕ್ತಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ, ತಪ್ಪಿಸಲು ಹೋದ ಪತ್ನಿಗೂ ಗಂಭೀರ ಗಾಯಗಳಾಗಿವೆ. ಆಗ್ನೇಯ ದೆಹಲಿಯ ಸರಿತಾ ವಿಹಾರ್ ನಿವಾಸಿಯಾಗಿರುವ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾರೆ.

ದೆಹಲಿ: ಪಾರ್ಕಿಂಗ್ ವಿಚಾರಕ್ಕೆ ಶುರುವಾದ ಗಲಾಟೆ, ಕೊಲೆಯಲ್ಲಿ ಅಂತ್ಯ
ದೆಹಲಿ ಪೊಲೀಸ್
ನಯನಾ ರಾಜೀವ್
|

Updated on: Sep 17, 2023 | 12:03 PM

Share

ಪಾರ್ಕಿಂಗ್ ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿದೆ. ಶನಿವಾರ ಸಂಜೆ ದೆಹಲಿಯ ಮನೆಯೊಂದಕ್ಕೆ ನುಗ್ಗಿದ ಆರು ದುಷ್ಕರ್ಮಿಗಳು ಪತ್ನಿ ಹಾಗೂ ಮಗನ ಎದುರೇ ವ್ಯಕ್ತಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ, ತಪ್ಪಿಸಲು ಹೋದ ಪತ್ನಿಗೂ ಗಂಭೀರ ಗಾಯಗಳಾಗಿವೆ. ಆಗ್ನೇಯ ದೆಹಲಿಯ ಸರಿತಾ ವಿಹಾರ್ ನಿವಾಸಿಯಾಗಿರುವ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾರೆ.

ಪೊಲೀಸರ ಪ್ರಕಾರ, ನಿನ್ನೆ ರಾತ್ರಿ 9.45 ರ ಸುಮಾರಿಗೆ ಅವರಿಗೆ ಪಿಸಿಆರ್ ಕರೆ ಬಂದಿದ್ದು, ಐದರಿಂದ ಆರು ಮಂದಿ ಬೈಕ್‌ನಲ್ಲಿ ಬಂದು ಸಂತ್ರಸ್ತೆಯ ಮನೆಗೆ ನುಗ್ಗಿ, ಅರವಿಂದ್ ಮಂಡಲ್ ಎಂಬುವವರಿಗೆ ಚೂರಿಯಿಂದ ಇರಿದಿದ್ದಾರೆ ಎಂದು ತಿಳಿಸಿದ್ದಾರೆ. ಅರವಿಂದ್ ಮಂಡಲ್ ಸಂಜೆ ತನ್ನ ಮಗ ಆಕಾಶ್‌ನೊಂದಿಗೆ ಶಾಲೆಯಿಂದ ಹಿಂತಿರುಗಿದ್ದಾಗ ಮನೋಜ್ ಹಲ್ದರ್ ಎಂಬ ವ್ಯಕ್ತಿಯೊಂದಿಗೆ ಜಗಳವಾಡಿದ್ದರು.

ದ್ವಿಚಕ್ರ ವಾಹನ ನಿಲುಗಡೆಗೆ ಸಂಬಂಧಿಸಿದಂತೆ ಇಬ್ಬರ ನಡುವೆ ಹಳೆ ಜಗಳವಿತ್ತು. ಆದರೆ, ನಿನ್ನೆ ಸಂಜೆ ವಿಷಯ ಬಗೆಹರಿದಿದ್ದು, ಅರವಿಂದ್ ಮನೆಗೆ ತೆರಳಿದ್ದರು. ರಾತ್ರಿ 9:30ರ ಸುಮಾರಿಗೆ ಆರು ಮಂದಿ ಅರವಿಂದ್ ಅವರ ಮನೆಗೆ ಮೋಟಾರ್ ಸೈಕಲ್‌ನಲ್ಲಿ ಆಗಮಿಸಿ ಅವರ ಮೇಲೆ ಮತ್ತು ಅವರ ಪತ್ನಿ ರೇಖಾ ಮಂಡಲ್ ಮೇಲೆ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಅರವಿಂದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮತ್ತಷ್ಟು ಓದಿ: ದೊಡ್ಡಬಳ್ಳಾಪುರ: ಕೆಲಸ ಅರಸಿ ಬಂದ ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದವಾಗಿ ಸಾವು

ಪೊಲೀಸರು ಕಾನೂನಿನ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸಿದ ಪೊಲೀಸರು ಈ ಪ್ರಕರಣದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಅವರನ್ನು ರಾಜು ಪತ್ರ, ರವಿ ಅಲಿಯಾಸ್ ಗೋಳು ಮತ್ತು ಶಂಭು ಎಂದು ಗುರುತಿಸಲಾಗಿದೆ. ಇನ್ನಿಬ್ಬರು ಆರೋಪಿಗಳಾದ ವಿಜಯ್ ಮತ್ತು ಮನೋಜ್ ಪರಾರಿಯಾಗಿದ್ದಾರೆ. ಇವರೆಲ್ಲರೂ ಸರಿತಾ ವಿಹಾರದಲ್ಲಿರುವ ಪ್ರಿಯಾಂಕಾ ಕ್ಯಾಂಪ್ ನಿವಾಸಿಗಳಾಗಿದ್ದಾರೆ.

ಕುಟುಂಬವು ತಂದೆ ಗೌರಚಂದ್ ಮಂಡಲ್, ಪತ್ನಿ ರೇಖಾ ಮಂಡಲ್, 15 ವರ್ಷದ ಮಗ ಮತ್ತು ಇತರ ಸದಸ್ಯರನ್ನು ಒಳಗೊಂಡಿದೆ. ಆರೋಪಿಗಳು ಅರವಿಂದ್​ ಅವರ ಎದೆ ಹಾಗೂ ಕೈಗೆ ಹಲವು ಬಾರಿ ಚಾಕುವಿನಿಂದ ಇರಿದಿದ್ದರು. ಮಗ ಹೇಗೋ ಬಚ್ಚಿಟ್ಟುಕೊಂಡು ಪ್ರಾಣ ಉಳಿಸಿಕೊಂಡಿದ್ದಾನೆ. ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಅಮಿತ್ ಶಾ ಅವರನ್ನು ಸದನಕ್ಕೆ ಕರೆಸಿ; ಸರ್ಕಾರಕ್ಕೆ ರಾಜ್ಯಸಭಾ ಸಭಾಪತಿ ಸೂಚನೆ
ಅಮಿತ್ ಶಾ ಅವರನ್ನು ಸದನಕ್ಕೆ ಕರೆಸಿ; ಸರ್ಕಾರಕ್ಕೆ ರಾಜ್ಯಸಭಾ ಸಭಾಪತಿ ಸೂಚನೆ
ಮೀಸಲಾತಿ ವ್ಯವಸ್ಥೆ ಬಗ್ಗೆ RSS​ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?
ಮೀಸಲಾತಿ ವ್ಯವಸ್ಥೆ ಬಗ್ಗೆ RSS​ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?
‘ಸಿಟಿ ಲೈಟ್ಸ್’ ಸಿನಿಮಾದಲ್ಲಿ ಅನಾವರಣ ಆಗಲಿದೆ ಬೆಂಗಳೂರಿನ ಮೆಜೆಸ್ಟಿಕ್ ಲೋಕ
‘ಸಿಟಿ ಲೈಟ್ಸ್’ ಸಿನಿಮಾದಲ್ಲಿ ಅನಾವರಣ ಆಗಲಿದೆ ಬೆಂಗಳೂರಿನ ಮೆಜೆಸ್ಟಿಕ್ ಲೋಕ
‘ಸಿಟಿ ಲೈಟ್ಸ್’ ಸಿನಿಮಾ ಚಿತ್ರೀಕರಣದ ಅನುಭವ ಹಂಚಿಕೊಂಡ ಮೋನಿಷಾ: ವಿಡಿಯೋ
‘ಸಿಟಿ ಲೈಟ್ಸ್’ ಸಿನಿಮಾ ಚಿತ್ರೀಕರಣದ ಅನುಭವ ಹಂಚಿಕೊಂಡ ಮೋನಿಷಾ: ವಿಡಿಯೋ
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭೀಮಾ: ನದಿ ತೀರಕ್ಕೆ ತೆರಳದಂತೆ ಕಟ್ಟೆಚ್ಚರ
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭೀಮಾ: ನದಿ ತೀರಕ್ಕೆ ತೆರಳದಂತೆ ಕಟ್ಟೆಚ್ಚರ
ಭೈರತಿ ಸುರೇಶ್ ವಿರುದ್ಧ ಅವಹೇಳನಕಾರಿ ಕಮೆಂಟ್: ಸಿದ್ದರಾಮಯ್ಯ ಅಭಿಮಾನಿ ಬಂಧನ
ಭೈರತಿ ಸುರೇಶ್ ವಿರುದ್ಧ ಅವಹೇಳನಕಾರಿ ಕಮೆಂಟ್: ಸಿದ್ದರಾಮಯ್ಯ ಅಭಿಮಾನಿ ಬಂಧನ
ಕಂಚಿನ ಪದಕ ವಿಜೇತೆ ಕನ್ನಡತಿ ಶಿಲ್ಪಾಗೆ ಅದ್ಧೂರಿ ಸ್ವಾಗತ
ಕಂಚಿನ ಪದಕ ವಿಜೇತೆ ಕನ್ನಡತಿ ಶಿಲ್ಪಾಗೆ ಅದ್ಧೂರಿ ಸ್ವಾಗತ
‘ಬಾಸ್’ ಸಿನಿಮಾ ನೋಡಿದ ದರ್ಶನ್ ವಕೀಲರು ಹೇಳಿದ್ದೇನು? ವಿಡಿಯೋ
‘ಬಾಸ್’ ಸಿನಿಮಾ ನೋಡಿದ ದರ್ಶನ್ ವಕೀಲರು ಹೇಳಿದ್ದೇನು? ವಿಡಿಯೋ
ನೂತನ 19 ಸಚಿವರಿಗೆ ಇಂದೇ ಖಾತೆ ಹಂಚಿಕೆ?
ನೂತನ 19 ಸಚಿವರಿಗೆ ಇಂದೇ ಖಾತೆ ಹಂಚಿಕೆ?
ಸಿದ್ದರಾಮಯ್ಯ ಮೇಲೆ ಅಹಿಂದ ಶಾಸಕರ ಅಸಮಾಧಾನ
ಸಿದ್ದರಾಮಯ್ಯ ಮೇಲೆ ಅಹಿಂದ ಶಾಸಕರ ಅಸಮಾಧಾನ