AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಪ್ರೀತಿಸಿ ಮದುವೆಯಾದ ನಂತರ ವಂಚಿಸಿ ಪರಾರಿಯಾದ ಮಹಿಳೆ, ಠಾಣೆ ಮೆಟ್ಟಿಲೇರಿದ ಪತಿ

ಮಹಿಳೆಯೊಬ್ಬಳು ಫೇಸ್​ಬುಕ್​ನಲ್ಲಿ ವ್ಯಕ್ತಿಯೊಬ್ಬರನ್ನು ಪರಿಚಯ ಮಾಡಿಕೊಂಡು ಪ್ರೀತಿಸಿ ಮದುವೆಯಾದ ನಂತರ ವಂಚನೆ ಎಸಗಿದ ಪ್ರಕರಣ ಬೆಂಗಳೂರಿನಲ್ಲಿ ನಡೆದೆ. ಮೊದಲ ಮದುವೆ ಮುಚ್ಚಿಟ್ಟು ವಂಚನೆ ಎಸಗಲೆಂದೇ ಆಕೆಯ ಸಂಬಂಧಿಕರು ತನ್ನೊಂದಿಗೆ ಮದುವೆ ಮಾಡಿದ್ದಾಗಿ ಆರೋಪಿಸಿ ಪತಿ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬೆಂಗಳೂರು: ಪ್ರೀತಿಸಿ ಮದುವೆಯಾದ ನಂತರ ವಂಚಿಸಿ ಪರಾರಿಯಾದ ಮಹಿಳೆ, ಠಾಣೆ ಮೆಟ್ಟಿಲೇರಿದ ಪತಿ
ವ್ಯಕ್ತಿಯೊಬ್ಬರನ್ನು ಪ್ರೀತಿಸಿ ಮದುವೆಯಾದ ಬಳಿಕ ಲಕ್ಷಾಂತರ ರೂಪಾಯಿ ವಂಚಿಸಿ ಮನೆ ಬಿಟ್ಟು ಹೋದ ಮಹಿಳೆ
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on: Sep 17, 2023 | 1:23 PM

Share

ಬೆಂಗಳೂರು, ಸೆ.17: ಮಹಿಳೆಯೊಬ್ಬಳು ಫೇಸ್​ಬುಕ್​ನಲ್ಲಿ ವ್ಯಕ್ತಿಯೊಬ್ಬರನ್ನು ಪರಿಚಯ ಮಾಡಿಕೊಂಡು ಪ್ರೀತಿಸಿ ಮದುವೆಯಾದ ನಂತರ ವಂಚನೆ ಎಸಗಿದ ಪ್ರಕರಣ ಬೆಂಗಳೂರಿನಲ್ಲಿ (Bangalore) ನಡೆದೆ. ಮೊದಲ ಮದುವೆ ಮುಚ್ಚಿಟ್ಟು ವಂಚನೆ ಎಸಗಲೆಂದೇ ಆಕೆಯ ಸಂಬಂಧಿಕರು ತನ್ನೊಂದಿಗೆ ಮದುವೆ ಮಾಡಿದ್ದಾಗಿ ಆರೋಪಿಸಿ ಪತಿ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪೇಸ್ ಬುಕ್​ನಲ್ಲಿ ಮಹಿಳೆ ಪರಿಚಯ ಮಾಡಿಕೊಂಡಿದ್ದ ಸಂತೋಷ್, 2018 ರಲ್ಲಿ ತಾನು ಕೆಲಸ ಮಾಡುವ ಕಂಪನಿಯಲ್ಲೇ ಆಕೆಗೆ ಕೆಲಸ ಕೊಡಿಸಿದ್ದ. ಇದೇ ಪರಿಚಯದ ಮೇಲೆ ಸಂತೋಷ್ ಮತ್ತು ಮಹಿಳೆ ನಡುವೆ ಪ್ರೇಮಾಂಕುರವಾಗಿದೆ. ಬಳಿಕ ಮದುವೆಯಾಗಲೂ ನಿರ್ಧರಿಸಿದ್ದಾರೆ. ಅದರಂತೆ ಮದುವೆ ಮಾಡಿಸಲು ಮಹಿಳೆಯ ಅಕ್ಕ-ಭಾವ ಮುಂದೆ ಬಂದಿದ್ದಾರೆ.

ಮದುವೆ ಮಾಡಿಸಲು ಚಿನ್ನದ ಆಭರಣ ಮಾಡಿಸುವಂತೆ ಮಹಿಳೆಯ ಅಕ್ಕ ಸಂತೋಷ್​ಗೆ ಹೇಳಿದ್ದಲ್ಲದೆ, ಮದುವೆಗೆ ಮುಂಚೆ ಐಫೋನ್ ನೀಡುವಂತೆಯೂ ಬೇಡಿಕೆ ಇಟ್ಟಿದ್ದಾಳೆ. ಹೀಗಾಗಿ ಸಂತೋಷ್ 2.60 ಲಕ್ಷ ಮೌಲ್ಯದ ಎರಡು ಐಫೋನ್‌ ಕೊಡಿಸಿದ್ದಾರೆ.

ಇದನ್ನೂ ಓದಿ: ಕ್ರೆಡಿಟ್​ ಕಾರ್ಡ್ ಲಿಮಿಟ್​ ಹೆಚ್ಚಿಸುವುದಾಗಿ ಕರೆ ಮಾಡಿ 1 ಲಕ್ಷ ರೂ. ವಂಚನೆ; ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಹಣ, ಆಭರಣ, ಮೊಬೈಲ್ ಫೋನ್ ಕೊಡಿಸುವುದರ ಜೊತೆಗೆ ಮದುವೆ ತಯಾರಿ ಕೂಡ ಶುರುವಾಗಿ 2022 ರಂದು ನವೆಂಬರ್ ತಿಂಗಳಲ್ಲಿ ಮದ್ದೂರಮ್ಮ ದೇವಾಲಯದಲ್ಲಿ ಮದುವೆಯೂ ನಡೆಯಿತು. ಆದರೆ ಈ ದಂಪತಿ ನಡುವೆ ನಡೆದ ದಾಂಪತ್ಯ ಜೀವನ ಕೇಲವ ಮೂರೇ ತಿಂಗಳು ಮಾತ್ರ. ಮದುವೆಗೂ ಮುನ್ನ ಸಂತೋಷ್​ ಬಳಿಯಿಂದ ಚಿನ್ನಾಭರಣ, ಮೊಬೈಲ್​ ಫೋನ್ ಪಡೆದಿರುವುದು ಸೇರಿದಂತೆ ಲಕ್ಷಾಂತರ ರೂಪಾಯಿ ವಂಚಿಸಿ ಮನೆ ಬಿಟ್ಟು ಹೋಗಿದ್ದಾಳೆ.

ಮದುವೆಯಾದರೂ ತನ್ನೊಂದಿಗೆ ದೈಹಿಕ ಸಂಪರ್ಕ ಮಾಡಿಲ್ಲ. ಆಕೆಗೆ ಮೊದಲು ಒಂದು ಮದುವೆಯಾಗಿದ್ದು, ಇದನ್ನು ಮುಚ್ಚಿಟ್ಟು ತನ್ನೊಂದಿಗೆ ಮದುವೆ ಮಾಡಿಸಿದ್ದಾರೆ. ಮೋಸ ಮಾಡುವ ಉದ್ದೇಶದಿಂದಲೇ ಮದುವೆಯಾಗಿದ್ದಾರೆ. ಎಂದು ಆರೋಪಿಸಿ ಮಹಿಳೆ ಮತ್ತು ಆಕೆಯ ಅಕ್ಕ-ಭಾವನ ವಿರುದ್ಧ ಸಂತೋಷ್ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಪೊಲೀಸರು ಮೂವರ ವಿರುದ್ಧ ಎಫ್​ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ನೌಕಾ ಡ್ರೋನ್​ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್
ನೌಕಾ ಡ್ರೋನ್​ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್
ಪುನೀತ್ ಇಲ್ಲದೇ ‘ಆಕಾಶ್’ ಸಿನಿಮಾ ನೋಡೋಕೆ ಕಷ್ಟ ಆಗುತ್ತದೆ: ರಾಘಣ್ಣ ಭಾವುಕ
ಪುನೀತ್ ಇಲ್ಲದೇ ‘ಆಕಾಶ್’ ಸಿನಿಮಾ ನೋಡೋಕೆ ಕಷ್ಟ ಆಗುತ್ತದೆ: ರಾಘಣ್ಣ ಭಾವುಕ
13 ವರ್ಷ ನಂತರ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆಯೇ ಕೈದಿ ಫುಲ್ ಖುಷ್
13 ವರ್ಷ ನಂತರ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆಯೇ ಕೈದಿ ಫುಲ್ ಖುಷ್
ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್
ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್
ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?
ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?
ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು
ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು
ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ
ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ
‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಹಾಲಿನ ಅಭಿಷೇಕ
‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಹಾಲಿನ ಅಭಿಷೇಕ
ಬಜೆಟ್​​ ಕುರಿತ ಹೇಳಿಕೆಗೆ ಇಕ್ಬಾಲ್ ಸಮರ್ಥನೆ: ರಾಮನಗರ MLA ಹೇಳಿದ್ದಿಷ್ಟು
ಬಜೆಟ್​​ ಕುರಿತ ಹೇಳಿಕೆಗೆ ಇಕ್ಬಾಲ್ ಸಮರ್ಥನೆ: ರಾಮನಗರ MLA ಹೇಳಿದ್ದಿಷ್ಟು