ಬೆಂಗಳೂರು: ರಕ್ತಪಾತ ತಡೆದ ಬಾಣಸವಾಡಿ ಪೊಲೀಸರು, ಗುಂಡು ಹಾರಿಸಿ ಹತ್ಯೆಗೆ ಸಂಚು ರೂಪಿಸಿದ್ದ ಇಬ್ಬರ ಬಂಧನ
ರೌಡಿಶೀಟರ್ ಗಳ ಮತ್ಸರಕ್ಕೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಗ್ಗಾಗೆ ಗುಂಡಿನ ಶಬ್ದ ಕೇಳಿಸುತ್ತಿರುತ್ತದೆ. ಅದರಂತೆ ಗುಂಡಿಕ್ಕಿ ಹತ್ಯೆಗೆ ಸಂಚು ರೂಪಿಸಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವ ಮೂಲಕ ಬಾಣಸವಡಿ ಠಾಣಾ ಪೊಲೀಸರು ಭೀಕರ ರಕ್ತಪಾತವನ್ನು ತಪ್ಪಿಸಿದ್ದಾರೆ. ಒಂದು ತಿಂಗಳಿಂದ ಹತ್ಯೆಗೆ ಸಂಚು ಮಾಡಿ ಆರೋಪಿಗಳು ಓಡಾಟ ನಡೆಸುತ್ತಿದ್ದರು ಎಂಬ ಮಾಹಿತಿ ತಿಳಿದುಬಂದಿದೆ.
ಬೆಂಗಳೂರು, ಸೆ.17: ರೌಡಿಶೀಟರ್ಗಳ ಮತ್ಸರಕ್ಕೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bangalore) ಅಗ್ಗಾಗೆ ಗುಂಡಿನ ಶಬ್ದ ಕೇಳಿಸುತ್ತಿರುತ್ತದೆ. ಅದರಂತೆ ಗುಂಡಿಕ್ಕಿ ಹತ್ಯೆಗೆ ಸಂಚು ರೂಪಿಸಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವ ಮೂಲಕ ಬಾಣಸವಡಿ ಠಾಣಾ ಪೊಲೀಸರು ಭೀಕರ ರಕ್ತಪಾತವನ್ನು ತಪ್ಪಿಸಿದ್ದಾರೆ. ರೌಡಿಶೀಟರ್ ಮಹಮದ್ ಜುಬೇರ್ (37) ಮತ್ತು ಫುರ್ಕನ್ ಅಲಿಖಾನ್ ಬಂಧಿತ ಆರೋಪಿಗಳು.
ರೌಡಿಶೀಟರ್ ಮಹಮದ್ ಜುಬೇರ್ ಮತ್ತೊಬ್ಬ ರೌಡಿಶೀಟರ್ ಅನೀಸ್ ಹತ್ಯೆಗೆ ಸಂಚು ರೂಪಿಸಿದ್ದನು. ಈತನ ಈ ಸಂಚಿನ ಜೊತೆಗೆ ಫುರ್ಕನ್ ಅಲಿಖಾನ್ ಕೂಡ ಇದ್ದನು. ಗುಂಡಿಕ್ಕಿ ಹತ್ಯೆ ಮಾಡಲು ಮಹಾರಾಷ್ಟ್ರದಿಂದ ಪಿಸ್ತೂಲ್ ಹಾಗೂ ಜೀವಂತ ಗುಂಡುಗಳನ್ನು ಜುಬೇರ್ ತರಿಸಿದ್ದನು.
ಅದರಂತೆ ಆರೋಪಿಗಳಿಬ್ಬರು ಕಳೆದ ಒಂದು ತಿಂಗಳಿಂದ ಹತ್ಯೆಗೆ ಸಂಚು ಮಾಡಿ ಓಡಾಟ ನಡೆಸುತ್ತಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಬಾಣಸವಾಡಿ ಠಾಣಾ ಪೊಲೀಸರು, ಕ್ಷಿಪ್ರ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿ ನಡೆಯುತ್ತಿದ್ದ ರಕ್ತಪಾತವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ಬಳಿ ಇದ್ದ ಒಂದು ಪಿಸ್ತೂಲ್ ಹಾಗೂ ಎರಡು ಜೀವಂತ ಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಚಾಮರಾಜನಗರದಲ್ಲಿ ಮಹಿಳೆ, ಮಕ್ಕಳ ಅನುಮಾನಾಸ್ಪದ ಸಾವು; ಕೊಲೆ ಮಾಡಿ ಆತ್ಮಹತ್ಯೆ ಕಥೆ ಕಟ್ಟಿದನೇ ಪತಿ?
ಈ ಹಿಂದೆ ಹಣಕಾಸಿನ ವಿಚಾರಕ್ಕೆ ಮೂವರು ಗೆಳೆಯರ ನಡೆವೆ ಗಲಾಟೆ ನಡೆದಿತ್ತು. ಮೂವರಲ್ಲೊಬ್ಬನ ಕೊಲೆ ಬಳಿಕ ಜೊತೆಯಲ್ಲಿದ್ದವರ ನಡುವೆ ಒಳಗೊಳಗೆ ಹತ್ಯೆಗೆ ಸಂಚು ನಡೆಸಲಾಗಿದೆ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ.
2021 ರಲ್ಲಿ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ಅನೀಸ್, ಜೈಲಿನಲ್ಲಿದ್ದಾಗಲೇ ತನ್ನ ಗೆಳೆಯ ಅಲಿ ಕೊಲೆ ಮಾಡಿಸಿದ್ದ. ಇದಾದ ಬಳಿಕ ಅನೀಸ್ ಮತ್ತೊಬ್ಬ ಗೆಳೆಯ ಜುಬೇರ್ಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದಕ್ಕೆ ಪ್ರತಿಯಾಗಿ ಜುಬೇರ್ ಹತ್ಯೆಗೆ ಸಂಚು ರೂಪಿಸಿದ್ದನು.
ಅದರಂತೆ ಮಹಾರಾಷ್ಟ್ರದಿಂದ ಪಿಸ್ತೂಲ್, ಬುಲೆಟ್ ತರಿಸಿಕೊಂಡಿದ್ದ ಜುಬೇರ್, ಮತ್ತಷ್ಟು ಗುಂಡುಗಳನ್ನು ತರಿಸಿಕೊಳ್ಳಲು ಸಿದ್ಧತೆ ಮಾಡಿಕೊಂಡಿದ್ದನು. ಈ ನಡುವೆ ಬಾಣಸವಾಡಿ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ