ನಿನ್ನೆ ಸಿಸಿಬಿ ವಿಚಾರಣೆ ವೇಳೆ ನಡೆದಿದ್ದು ಒಂದು ಡ್ರಾಮಾ, ಚೈತ್ರಾ ಕುಂದಾಪುರ ಆರೋಗ್ಯವಾಗಿದ್ದಾರೆ: ಜಿ ಪರಮೇಶ್ವರ, ಗೃಹ ಸಚಿವ
ಚೈತ್ರಾ ಪ್ರಕರಣ ಚುನಾವಣಾ ರಾಜಕೀಯಕ್ಕೆ ಸಂಬಂಧಪಟ್ಟಿದ್ದು ಮತ್ತು ಇದರಲ್ಲಿ ರಾಜಕೀಯ ಪಕ್ಷಗಳು ಹಾಗೂ ರಾಜಕೀಯ ನಾಯಕರು ಇನ್ವಾಲ್ವ್ ಆಗಿರುವ ಸಾಧ್ಯತೆ ಇರೋದ್ರಿಂದ ತನಿಖೆ ಮುಗಿಯದ ಹೊರತು ಮಾತಾಡುವುದು ತಪ್ಪಾಗುತ್ತದೆ ಎಂದು ಪರಮೇಶ್ವರ ಹೇಳಿದರು.
ಬೆಂಗಳೂರು: ನಗರದಲ್ಲಿಂದು ಚೈತ್ರಾ ಕುಂದಾಪರ (Chaitra Kundapura) ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತಾಡಿದ ಗೃಹ ಸಚಿವ ಜಿ ಪರಮೇಶ್ವರ (G Parameshwara), ಪ್ರಕರಣದಲ್ಲಿ ದಿನಕ್ಕೊಂದು ಬೆಳವಣಿಗೆಯಾಗುತ್ತಿರುವುದರಿಂದ ತನಿಖೆ (investigation) ಪೂರ್ಣಗೊಳ್ಳುವವರೆಗೆ ಯಾವುದೇ ವಿಚಾರವನ್ನು ಮಾತಾಡುವುದಿಲ್ಲ ಎಂದು ಹೇಳಿದರು. ನಿನ್ನೆ ವಿಚಾರಣೆ ಸಮಯದಲ್ಲಿ ಚೈತ್ರಾ ಪ್ರಜ್ಞೆ ತಪ್ಪಿ ಆಸ್ಪತ್ರೆ ಸೇರಿದ್ದು ಒಂದು ಡ್ರಾಮಾ ಅಂತ ಹೇಳಿದ ಸಚಿವರು ಆಕೆ ಚೆನ್ನಾಗಿದ್ದಾಳೆಮ ಆರೊಗ್ಯವಾಗಿದ್ದಾಳೆ ಅಂತ ಹೇಳಿದರು. ಚೈತ್ರಾ ಪ್ರಕರಣ ಚುನಾವಣಾ ರಾಜಕೀಯಕ್ಕೆ ಸಂಬಂಧಪಟ್ಟಿದ್ದು ಮತ್ತು ಇದರಲ್ಲಿ ರಾಜಕೀಯ ಪಕ್ಷಗಳು ಹಾಗೂ ರಾಜಕೀಯ ನಾಯಕರು ಇನ್ವಾಲ್ವ್ ಆಗಿರುವ ಸಾಧ್ಯತೆ ಇರೋದ್ರಿಂದ ತನಿಖೆ ಮುಗಿಯದ ಹೊರತು ಮಾತಾಡುವುದು ತಪ್ಪಾಗುತ್ತದೆ ಎಂದು ಪರಮೇಶ್ವರ ಹೇಳಿದರು. ಪ್ರಕರಣದಲ್ಲಿ ಆರೋಪಿಯಾಗಿರುವ ಮತ್ತು ತಲೆಮರೆಸಿಕೊಂಡಿರುವ ಹಿರೇಹಡಗಲಿ ಅಭಿನವ ಹಾಲಾಶ್ರೀ ಸ್ವಾಮಿ ಬಗ್ಗೆ ಕೇಳಿದ ಪ್ರಶ್ನೆಗೆ ಸಚಿವರು, ಅವರ ಹುಡುಕಾಟ ಜಾರಿಯಲ್ಲಿದೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ