ಬುದ್ಧ ಪೂರ್ಣಿಮೆ: ಭಾರತ ಸಂಕಷ್ಟದ ಸಮಯ ಎದುರಿಸುತ್ತಿದೆ, ದೇಶವನ್ನುದ್ದೇಶಿಸಿ ಮೋದಿ ಮಾತು

|

Updated on: May 07, 2020 | 9:46 AM

ದೆಹಲಿ: 3ನೇ ಹಂತದ ಲಾಕ್​​ಡೌನ್ ಜಾರಿ ಆದ ಬಳಿಕ ಇಂದು ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡುದ್ರು. ಇಂದು ಏಷ್ಯಾದ ಬೆಳಕಾಗಿರುವ ಬುದ್ಧನ ಜನ್ಮದಿನ. ಹೀಗಾಗಿ ಇಂದು ಆಯೋಜಿಸಿರುವ ವೇಸಾಕ್​ ಗ್ಲೋಬಲ್​ ಸೆಲಬ್ರೇಷನ್​ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಭಾಗಿಯಾದರು. ಮೊದಲಿಗೆ ಪ್ರಧಾನಿ ಬುದ್ಧನ ಅನುಯಾಯಿಗಳಿಗೆ ಶುಭಾಶಯ ಕೋರಿದ್ರು. 2015, 2018ರಲ್ಲಿ ದೆಹಲಿ ಕೊಲೊಂಬೊದ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ನನಗೆ ಸಿಕ್ಕಿತ್ತು. ಆದರೆ ಈಗ ಭಾರತ ಸಂಕಷ್ಟದ ಸಮಯ ಎದುರಿಸುತ್ತಿದೆ ನಿಮ್ಮನ್ನು ಭೇಟಿಯಾಗುವುದಕ್ಕೆ […]

ಬುದ್ಧ ಪೂರ್ಣಿಮೆ: ಭಾರತ ಸಂಕಷ್ಟದ ಸಮಯ ಎದುರಿಸುತ್ತಿದೆ, ದೇಶವನ್ನುದ್ದೇಶಿಸಿ ಮೋದಿ ಮಾತು
Follow us on

ದೆಹಲಿ: 3ನೇ ಹಂತದ ಲಾಕ್​​ಡೌನ್ ಜಾರಿ ಆದ ಬಳಿಕ ಇಂದು ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡುದ್ರು. ಇಂದು ಏಷ್ಯಾದ ಬೆಳಕಾಗಿರುವ ಬುದ್ಧನ ಜನ್ಮದಿನ. ಹೀಗಾಗಿ ಇಂದು ಆಯೋಜಿಸಿರುವ ವೇಸಾಕ್​ ಗ್ಲೋಬಲ್​ ಸೆಲಬ್ರೇಷನ್​ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಭಾಗಿಯಾದರು. ಮೊದಲಿಗೆ ಪ್ರಧಾನಿ ಬುದ್ಧನ ಅನುಯಾಯಿಗಳಿಗೆ ಶುಭಾಶಯ ಕೋರಿದ್ರು.

2015, 2018ರಲ್ಲಿ ದೆಹಲಿ ಕೊಲೊಂಬೊದ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ನನಗೆ ಸಿಕ್ಕಿತ್ತು. ಆದರೆ ಈಗ ಭಾರತ ಸಂಕಷ್ಟದ ಸಮಯ ಎದುರಿಸುತ್ತಿದೆ ನಿಮ್ಮನ್ನು ಭೇಟಿಯಾಗುವುದಕ್ಕೆ ಪರಿಸ್ಥಿತಿ ಅವಕಾಶ ನೀಡುತ್ತಿಲ್ಲ. ಹೀಗಾಗಿ ದೂರದಿಂದ ತಂತ್ರಜ್ಞಾನದ ಮೂಲಕ ನಿಮ್ಮ ಜತೆ ನನ್ನ ಅನಿಸಿಕೆ ಹಂಚಿಕೊಳ್ಳುತ್ತಿದ್ದೇನೆ ಎಂದು ಮಾತನ್ನು ಮುಂದುವರೆಸಿದ್ರು.

ಸಂಕಷ್ಟದ ಪರಿಸ್ಥಿತಿಯನ್ನು ಸಾಂಘಿಕವಾಗಿ ಎದುರಿಸುತ್ತೇವೆ. ಭಾರತದ ಸಂಸ್ಕೃತಿ ಯಾವಾಗಲೂ ಹೊಸ ದಿಕ್ಕು ತೋರಿದೆ. ಬುದ್ಧನ ಸಂದೇಶಗಳು ಸಂಸ್ಕೃತಿಯನ್ನು ಸಮೃದ್ಧ ಮಾಡಿವೆ.
ಬುದ್ಧ ಯಾವುದೋ ಒಂದು ಪರಿಸ್ಥಿತಿಗೆ ಸೀಮಿತವಾಗಿಲ್ಲ. ಸಮಯ, ಸ್ಥಿತಿ ಬದಲಾಯಿತು, ಆದರೆ ಬುದ್ಧನ ಸಂದೇಶ ನಿರಂತರವಾಗಿ ಜನರನ್ನು ಪ್ರಭಾವಗೊಳಿಸುತ್ತಿದೆ.

ಬುದ್ಧ ಕೇವಲ ಹೆಸರು ಮಾತ್ರವಲ್ಲ, ಪವಿತ್ರ ವಿಚಾರ. ಮಾನವನ ಮನಸ್ಸಿನಲ್ಲಿ ಬುದ್ಧನ ಸಂದೇಶಗಳು ಇವೆ. ಕಠಿಣ ಪರಿಸ್ಥಿತಿಯಿಂದ ಹೊರಬರಲು ಯತ್ನಿಸುತ್ತಿದ್ದೇವೆ. ದಯಾ, ಕರುಣ, ಸುಖ-ದುಃಖದ ಸಮಭಾವ. ಪರಿಸ್ಥಿತಿಯನ್ನು ಬಂದಂತೆ ಸ್ವೀಕರಿಸುವುದು. ಎಷ್ಟು ಸಾಧ್ಯವಾಗುತ್ತದೋ ಅಷ್ಟು ಸಹಾಯ ಮಾಡಿ ಎಂದು ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಭಗವಾನ್ ಬುದ್ಧನ ಒಂದೊಂದು ಸಂದೇಶವೂ, ಭಾರತದ ಪ್ರತಿಬದ್ಧತೆಯನ್ನು ಸದೃಢಗೊಳಿಸಿದೆ. ನಮ್ಮ ಕೆಲಸ ನಿರಂತರ ಸೇವಾಭಾವದಿಂದ ನಡೆಯುತ್ತಿದೆ. ಎಲ್ಲರ ನೆರವಿಗೂ ಭಾರತ ಸಿದ್ಧವಾಗಿದೆ. ಮಾನವ ಸೇವೆಯಲ್ಲಿ ತೊಡಗಿರುವವರು ಬುದ್ಧನ ನಿಜವಾದ ಅನುಯಾಯಿಗಳು. ಎಲ್ಲರ ಆರೋಗ್ಯ ಉತ್ತಮವಾಗಿರಲಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ, ಬೇರೆಯವರಿಗೂ ಸಹಾಯ ಮಾಡಿ ಎಂದು ಜನತೆಗೆ ಬುದ್ಧನ ಸಂದೇಶಗಳ ಬಗ್ಗೆ ಅರಿವು ಮೂಡಿಸಿ ದಾನ, ಧರ್ಮ, ಸಹಾಯ ಮಾಡಲು ಕರೆ ನೀಡಿದ್ದಾರೆ.