
ಅಮೆರಿಕ ಚುನಾಯಿತ ಅಧ್ಯಕ್ಷ ಜೋ ಬೈಡನ್ಗೆ ಕರೆ ಮಾಡಿದ ಪ್ರಧಾನಿ ಮೋದಿ ಬೈಡನ್ಗೆ ಶುಭಾಶಯ ತಿಳಿಸಿದ್ದಾರೆ. ಜೊತೆಗೆ ಬೈಡನ್ ಜತೆ ಹಲವು ವಿಚಾರಗಳ ಬಗ್ಗೆ ಪ್ರಧಾನಿ ಮೋದಿ ಚರ್ಚೆ ಸಹ ನೆಡೆಸಿದ್ದಾರೆ.
ಉಭಯ ದೇಶಗಳ ಸಂಬಂಧ ಗಟ್ಟಿಗೊಳಿಸಲು ನೆರವಿನ ಭರವಸೆ ನೀಡಿರುವ ಮೋದಿ ಕೊವಿಡ್-19, ಹವಾಮಾನ ವೈಪರೀತ್ಯ ಕುರಿತು ಮಾತುಕತೆ ನೆಡೆಸಿದ್ದಾರೆ. ಅಲ್ಲದೆ ಇಂಡೋ-ಫೆಸಿಪಿಕ್ ವಲಯದಲ್ಲಿ ಸಹಕಾರದ ಕುರಿತು ಚರ್ಚೆ ಮಾಡಿರುವ ಮೋದಿ ಕಮಲಾ ಹ್ಯಾರಿಸ್ಗೂ ಕೂಡ ಶುಭಾಶಯ ತಿಳಿಸಿದ್ದಾರೆ.
ಕಮಲಾ ಹ್ಯಾರಿಸ್ ಗೆಲುವು ಇಂಡೋ-ಅಮೆರಿಕನ್ನರ ಗೆಲುವು ಎಂದಿದ್ದಾರೆ. ಜೊತೆಗೆ ಕೊವಿಡ್ಗೆ ಲಸಿಕೆ ಕಂಡು ಹಿಡಿಯಲು ಜಂಟಿ ಪ್ರಯತ್ನಕ್ಕೆ ಒತ್ತು ನೀಡಬೇಕೆಂದು ಮನವಿ ಮಾಡಿದ್ದಾರೆ. ಜೋ ಬೈಡನ್ಗೆ ಕರೆ ಮಾಡಿದ ಬಳಿಕ ಈ ವಿಚಾರವನ್ನು ಪ್ರಧಾನಿ ಮೋದಿ ಟ್ವೀಟ್ ಮಾಡಿ ಟ್ವೀಟ್ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
Published On - 7:51 am, Wed, 18 November 20