ಜುಲೈ 26ಕ್ಕೆ 67ನೇ Mann Ki Baat, ಐಡಿಯಾ ಕೊಡಿ ಎಂದ ಪ್ರಧಾನಿ ಮೋದಿ

| Updated By:

Updated on: Jul 11, 2020 | 4:17 PM

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಬಾರಿಯ ತಮ್ಮ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮಕ್ಕಾಗಿ ಜನರಿಂದ ಐಡಿಯಾಗಳನ್ನ ಕೇಳಿದ್ದಾರೆ. ಜುಲೈ 26ರಂದು ರಾಷ್ಟ್ರವನ್ನುದ್ದೇಶಿಸಿ ಮಾಡಲಿರುವ 67ನೇ Mann Ki Baat ಭಾಷಣಕ್ಕೆ ಜನರ ಮೇಲೆ ಮತ್ತು ಜನಜೀವನದಲ್ಲಿ ಪ್ರಭಾವ ಬೀರಿರುವಂಥ ವ್ಯಕ್ತಿಗಳ, ಸಂಘಗಳ ಅಥವಾ ಘಟನೆಗಳ ಕುರಿತ ಮಾಹಿತಿಯನ್ನ ತಮಗೆ ಕಳುಹಿಸಿ ಎಂದು ದೇಶವಾಸಿಗಳನ್ನ ಕೇಳಿದ್ದಾರೆ. ಈ ಸಂಬಂಧ ಟ್ವಿಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ದೇಶ ಕೊರೊನಾದಂಥ ಸಂಕಷ್ಟದ ಸಮಯದಲ್ಲಿದೆ. ಇಂಥ ಸಂದರ್ಭದಲ್ಲಿ […]

ಜುಲೈ 26ಕ್ಕೆ 67ನೇ Mann Ki Baat, ಐಡಿಯಾ ಕೊಡಿ ಎಂದ ಪ್ರಧಾನಿ ಮೋದಿ
Follow us on

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಬಾರಿಯ ತಮ್ಮ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮಕ್ಕಾಗಿ ಜನರಿಂದ ಐಡಿಯಾಗಳನ್ನ ಕೇಳಿದ್ದಾರೆ. ಜುಲೈ 26ರಂದು ರಾಷ್ಟ್ರವನ್ನುದ್ದೇಶಿಸಿ ಮಾಡಲಿರುವ 67ನೇ Mann Ki Baat ಭಾಷಣಕ್ಕೆ ಜನರ ಮೇಲೆ ಮತ್ತು ಜನಜೀವನದಲ್ಲಿ ಪ್ರಭಾವ ಬೀರಿರುವಂಥ ವ್ಯಕ್ತಿಗಳ, ಸಂಘಗಳ ಅಥವಾ ಘಟನೆಗಳ ಕುರಿತ ಮಾಹಿತಿಯನ್ನ ತಮಗೆ ಕಳುಹಿಸಿ ಎಂದು ದೇಶವಾಸಿಗಳನ್ನ ಕೇಳಿದ್ದಾರೆ.

ಈ ಸಂಬಂಧ ಟ್ವಿಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ದೇಶ ಕೊರೊನಾದಂಥ ಸಂಕಷ್ಟದ ಸಮಯದಲ್ಲಿದೆ. ಇಂಥ ಸಂದರ್ಭದಲ್ಲಿ ಸಾಮಾನ್ಯ ಜನರ ಮೇಲೆ ಪ್ರಭಾವ ಬೀರಿರುವಂಥ, ಇತರರಿಗೆ ಮಾದರಿಯಾಗಿರುವಂಥ ವ್ಯಕ್ತಿಗಳು, ಸಂಘಗಳು ಮತ್ತು ಘಟನೆಗಳನ್ನು ನನ್ನೊಂದಿಗೆ ಹಂಚಿಕೊಳ್ಳಿ. ನಾನು ಇದನ್ನು ಜುಲೈ 26ರಂದು  ಮನ್​ ಕಿ  ಬಾತ್ ಕಾರ್ಯಕ್ರಮದಲ್ಲಿ ದೇಶವಾಸಿಗಳೊಂದಿಗೆ ಹಂಚಿಕೊಳ್ಳುತ್ತೇನೆ ಎಂದಿದ್ದಾರೆ.

ಈ ಸಂಬಂಧ ನಿಮ್ಮ ಐಡಿಯಾಗಳನ್ನು ಪ್ರಧಾನ ಮಂತ್ರಿಗಳ ಆ್ಯಪ್ MyGov ,  NaMo ಆ್ಯಪ್ ಅಥವಾ 1800-11-7800 ನಂಬರಿಗೆ ಕರೆ ಮಾಡಿ ತಿಳಿಸಿ ಎಂದು ಟ್ವೀಟ್ ಮಾಡಿದ್ದಾರೆ. ಆಸಕ್ತರು ತಮ್ಮ ನಡುವೆ ನಡೆದಂಥ ಘಟನೆಗಳನ್ನುಅಥವಾ ಇರುವಂಥ ವ್ಯಕ್ತಿಗಳ ಕುರಿತು ಈ ನಂಬರ್ ಅಥವಾ ಆ್ಯಪ್​ಗಳಲ್ಲಿ ಶೇರ್ ಮಾಡಿ ಎಂದು ಮೋದಿ ಕೇಳಿಕೊಂಡಿದ್ದಾರೆ.

Published On - 3:11 pm, Sat, 11 July 20