ಆ ಗುಡಿಸಿಲಿನ ಮೇಲೆ ದಾಳಿ ಮಾಡಿದಾಗ ಸಿಕ್ಕಿದ ಮದ್ದುಗುಂಡುಗಳೆಷ್ಟು, ಸತ್ತವರೆಷ್ಟು ಗೊತ್ತಾ?

ದಿಂಪುರ್: ನಾಗಾಲ್ಯಾಂಡ್​ನ ದಿಂಪುರ ಸಮೀಪ ಗಡಿಯಲ್ಲಿ ಅಸ್ಸಾಂ ರೈಫಲ್ಸ್, ಅರುಣಾಚಲ ಪ್ರದೇಶ ಪೊಲೀಸ್ ಮತ್ತು ನಾಗಲ್ಯಾಂಡ್ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಆರು ಜನ ಎನ್ಎಸ್ಸಿಎನ್ –ಐಎಮ್ ಕ್ಯಾಡರ್ ಕಾರ್ಯಕರ್ತರನ್ನ ಹೊಡೆದುರಿಳಿಸಲಾಗಿದೆ. ಹೌದು, ಸುಂದರ ಪರಿಸರದಲ್ಲಿದ್ದ ಚಿಕ್ಕ ಗುಡಿಸಲೊಂದು ನೋಡಲು ಸಾಮಾನ್ಯರು ವಾಸವಿದ್ದಂತೆ ಕಾಣುತ್ತಿತ್ತು. ಆದ್ರೆ ಸಿಕ್ಕ ಚಿಕ್ಕ ಸುಳಿವಿನ ಮೇಲೆ ಅಸ್ಸಾಂ ರೈಫಲ್ಸ್ ಯೋಧರು ಪೊಲೀಸರೊಂದಿಗೆ ಸೇರಿ ದಾಳಿ ನಡೆಸಿದಾಗ ಅಲ್ಲಿ ಇದ್ದದ್ದು ಸಾಮನ್ಯರಲ್ಲ. ಬದಲು ಎನ್ಎಸ್ಸಿಎನ್-ಐಎಮ್ ಕಾರ್ಯಕರ್ತರು ಎಂದು ತಿಳಿದುಬಂದಿದೆ. ತಕ್ಷಣವೆ ಪ್ರತಿದಾಳಿಯ ಸುಳಿವು […]

ಆ ಗುಡಿಸಿಲಿನ ಮೇಲೆ ದಾಳಿ ಮಾಡಿದಾಗ ಸಿಕ್ಕಿದ ಮದ್ದುಗುಂಡುಗಳೆಷ್ಟು, ಸತ್ತವರೆಷ್ಟು ಗೊತ್ತಾ?
Follow us
Guru
| Updated By:

Updated on:Jul 11, 2020 | 2:41 PM

ದಿಂಪುರ್: ನಾಗಾಲ್ಯಾಂಡ್​ನ ದಿಂಪುರ ಸಮೀಪ ಗಡಿಯಲ್ಲಿ ಅಸ್ಸಾಂ ರೈಫಲ್ಸ್, ಅರುಣಾಚಲ ಪ್ರದೇಶ ಪೊಲೀಸ್ ಮತ್ತು ನಾಗಲ್ಯಾಂಡ್ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಆರು ಜನ ಎನ್ಎಸ್ಸಿಎನ್ –ಐಎಮ್ ಕ್ಯಾಡರ್ ಕಾರ್ಯಕರ್ತರನ್ನ ಹೊಡೆದುರಿಳಿಸಲಾಗಿದೆ.

ಹೌದು, ಸುಂದರ ಪರಿಸರದಲ್ಲಿದ್ದ ಚಿಕ್ಕ ಗುಡಿಸಲೊಂದು ನೋಡಲು ಸಾಮಾನ್ಯರು ವಾಸವಿದ್ದಂತೆ ಕಾಣುತ್ತಿತ್ತು. ಆದ್ರೆ ಸಿಕ್ಕ ಚಿಕ್ಕ ಸುಳಿವಿನ ಮೇಲೆ ಅಸ್ಸಾಂ ರೈಫಲ್ಸ್ ಯೋಧರು ಪೊಲೀಸರೊಂದಿಗೆ ಸೇರಿ ದಾಳಿ ನಡೆಸಿದಾಗ ಅಲ್ಲಿ ಇದ್ದದ್ದು ಸಾಮನ್ಯರಲ್ಲ. ಬದಲು ಎನ್ಎಸ್ಸಿಎನ್-ಐಎಮ್ ಕಾರ್ಯಕರ್ತರು ಎಂದು ತಿಳಿದುಬಂದಿದೆ. ತಕ್ಷಣವೆ ಪ್ರತಿದಾಳಿಯ ಸುಳಿವು ಸಿಗುತ್ತಿದ್ದಂತೆ ಆಕ್ರಮಣಕಾರಿ ದಾಳಿ ನಡೆಸಿದ ಯೋಧರು ಆರು ಜನರನ್ನ ಹೊಡೆದುರುಳಿಸಿದ್ದಾರೆ. ಒಬ್ಬನನ್ನ ಬಂಧಿಸಿದ್ದಾರೆ.

ಇದಕ್ಕೂ ಆತಂಕಕಾರಿಯಂದ್ರೆ ಈ ಚಿಕ್ಕ ಗುಡಿಸಿಲಿನಲ್ಲಿ ಆಘಾತಕಾರಿ ಮದ್ದು ಗುಂಡುಗಳು ಸಿಕ್ಕಿವೆ. ನಾಲ್ಕು ಏಕೆ-47, ಎರಡು ಚೀನಾ ನಿರ್ಮಿತ ಎಮ್ಕ್ಯೂ ಪಿಸ್ತೂಲ್​ಗಳು, ಒಂದು .22 ಎಂ ಎಂ ಪಿಸ್ತೂಲ್ ಮತ್ತು ಐದು ಸುತ್ತಿನ ಗುಂಡುಗಳನ್ನ ವಶಪಡಿಸಿಕೊಳ್ಳಲಾಗಿದೆ. ಅಂದ ಹಾಗೆ ಈ ದಾಳಿಯಲ್ಲಿ ಅಸ್ಸಾಂ ರೈಫಲ್ಸ್‌ನ ಒಬ್ಬ ಯೋಧ ಗಾಯಗೊಂಡಿದ್ದಾನೆ.

Published On - 12:50 pm, Sat, 11 July 20

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ