ಹೈದರಾಬಾದ್: 18 ಮಹಿಳೆಯರ ಸರಣಿ ಹಂತಕನನ್ನು ಹೈದರಾಬಾದ್ನ ರಾಚಕೊಂಡ ಕಮಿಷನರೇಟ್ ಪೊಲೀಸರು ಬಂಧಿಸಿದ್ದಾರೆ. ಈತ ಇತ್ತೀಚೆಗಷ್ಟೇ ಇಬ್ಬರು ಮಹಿಳೆಯರನ್ನು ಹತ್ಯೆಗೈದಿದ್ದ. ಹಾಗೇ ಬೇರೆ ಕೆಲವು ಅಪರಾಧ ಪ್ರಕರಣಗಳಲ್ಲೂ ಬೇಕಾದವನಾಗಿದ್ದ.
ಆರೋಪಿಯ ಹೆಸರು ಮೈನಾ ರಾಮುಲು.. 45ವರ್ಷ ವಯಸ್ಸು. ಕಲ್ಲು ಒಡೆಯುವ ಕೆಲಸ ಮಾಡುವ ಈತ ಈ ಹಿಂದೆ ಕೂಡ 16 ಕೊಲೆ ಪ್ರಕರಣ, ನಾಲ್ಕು ಆಸ್ತಿಗೆ ಸಂಬಂಧಪಟ್ಟ ಅಪರಾಧಗಳ ಪ್ರಕರಣದಡಿ ಬಂಧಿತನಾಗಿದ್ದ. ಆದರೆ 2011ರಲ್ಲಿ ಜೈಲಿನಿಂದ ತಪ್ಪಿಸಿಕೊಂಡಿದ್ದ. ಈ ವರ್ಷ ಜನವರಿ 4ರಂದು ಜ್ಯುಬ್ಲಿ ಹಿಲ್ನಲ್ಲಿ ವೆಂಕಟಮ್ಮ ಎಂಬುವರನ್ನು ಹತ್ಯೆ ಮಾಡಿ, ಆಕೆಯ ಗುರುತು ಸಿಗಬಾರದು ಎಂದು ಮುಖವನ್ನು ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ ಸುಟ್ಟಿದ್ದ. ತನಿಖೆ ಪ್ರಾರಂಭಿಸಿದ ಪೊಲೀಸರು 20 ದಿನಗಳ ನಂತರ ರಾಮುಲುನನ್ನು ಬಂಧಿಸಿದ್ದಾರೆ.
21ನೇ ವರ್ಷದಲ್ಲೇ ಆತನಿಗೆ ಮದುವೆಯಾಗಿತ್ತು. ಆದರೆ ಕೆಲವೇ ಸಮಯದಲ್ಲಿ ಪತ್ನಿ ಆತನನ್ನು ಬಿಟ್ಟು ಹೋಗಿದ್ದಳು. ಅಲ್ಲಿಂದಲೇ ಇಂಥ ಅಪರಾಧದಲ್ಲಿ ತೊಡಗಿಕೊಂಡಿದ್ದ. ಕುಡಿತಕ್ಕೆ ದಾಸನಾಗಿದ್ದ ಈತ, ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ, ಲೈಂಗಿಕ ಬಯಕೆ ತೀರಿಸಿಕೊಳ್ಳಲು, ಹಣಕ್ಕಾಗಿ ಬೆನ್ನು ಹತ್ತುತ್ತಿದ್ದ. ಅದರಲ್ಲೂ ವೈನ್ ಶಾಪ್ಗೆ ಬರುವ ಹೆಣ್ಣುಮಕ್ಕಳು, ಮಹಿಳೆಯರ ಮೇಲೆ ಒಂದು ಕಣ್ಣಿಟ್ಟು ಅವರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ಅವರೊಂದಿಗೆ ಮದ್ಯ ಸೇವಿಸಿ, ನಂತರ ಕೊಂದು ಅವರ ಬಳಿ ಇದ್ದ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದ.
ನಾಪತ್ತೆಯಾಗಿದ್ದ ಬಾಲಕಿ ಕೆರೆಯಲ್ಲಿ ಶವವಾಗಿ ಪತ್ತೆ: ಯುವಕನ ಮೇಲೆ ಅತ್ಯಾಚಾರ ಆರೋಪ