ಉತ್ತರ ಪ್ರದೇಶ: ಪೊಲೀಸ್​ ಆಗಲು ಬಯಸಿದ್ದ ಮಹಿಳೆ ಈಗ ಬಸ್​ ಡ್ರೈವರ್

ಜೀವನವು ಬದುಕಲು ಅವಕಾಶಗಳನ್ನು ನೀಡಿದಾಗ ನಿರ್ಭಯವಾಗಿ ಮುನ್ನುಗ್ಗಬೇಕು ಎಂಬುದನ್ನು ಈ ಮಹಿಳೆಯನ್ನು ನೋಡಿ ಕಲಿಯಬೇಕು. ಪೊಲೀಸ್​ ಆಗಲು ಬಯಸಿದ್ದ ವೇದ್ ಕುಮಾರಿ ಈಗ ಬಸ್​ ಡ್ರೈವರ್ ಆಗಿದ್ದಾರೆ. ಕೌಶಂಬಿ-ಗಾಜಿಯಾಬಾದ್‌ನಿಂದ ಬುಡೌನ್ ಮಾರ್ಗದಲ್ಲಿ ಚಲಿಸುವ ಬಸ್‌ನ ಮೊದಲ ಮಹಿಳಾ ಚಾಲಕಿಯಾಗಿ ಅನೇಕ ಮಹಿಳೆಯರಿಗೆ ಮಾದರಿಯಾಗಿದ್ದಾರೆ.

ಉತ್ತರ ಪ್ರದೇಶ: ಪೊಲೀಸ್​ ಆಗಲು ಬಯಸಿದ್ದ ಮಹಿಳೆ ಈಗ ಬಸ್​ ಡ್ರೈವರ್
ವೇದ್ ಕುಮಾರಿ
Image Credit source: India Today

Updated on: Nov 08, 2023 | 8:14 AM

ಜೀವನವು ಬದುಕಲು ಅವಕಾಶಗಳನ್ನು ನೀಡಿದಾಗ ನಿರ್ಭಯವಾಗಿ ಮುನ್ನುಗ್ಗಬೇಕು ಎಂಬುದನ್ನು ಈ ಮಹಿಳೆಯನ್ನು ನೋಡಿ ಕಲಿಯಬೇಕು.
ಪೊಲೀಸ್​ ಆಗಲು ಬಯಸಿದ್ದ ವೇದ್ ಕುಮಾರಿ ಈಗ ಬಸ್​ ಡ್ರೈವರ್ ಆಗಿದ್ದಾರೆ. ಕೌಶಂಬಿ-ಗಾಜಿಯಾಬಾದ್‌ನಿಂದ ಬುಡೌನ್ ಮಾರ್ಗದಲ್ಲಿ ಚಲಿಸುವ ಬಸ್‌ನ ಮೊದಲ ಮಹಿಳಾ ಚಾಲಕಿಯಾಗಿ ಅನೇಕ ಮಹಿಳೆಯರಿಗೆ ಮಾದರಿಯಾಗಿದ್ದಾರೆ.

ಅದೇ ಬಸ್ಸಿನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುವ ಪತಿ ಮುಕೇಶ್ ಪ್ರಜಾಪತಿ ಕೆಲಸದಲ್ಲಿ ಕುಮಾರಿ ಅವರಿಗೆ ಸಹಾಯ ಮಾಡುತ್ತಾರೆ. ಇಂಡಿಯಾ ಟುಡೇ ವರದಿಯ ಪ್ರಕಾರ , ಕೌಶಲ ಅಭಿವೃದ್ಧಿ ಮಿಷನ್ ಅಡಿಯಲ್ಲಿ ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮದ (UPSRTC) ಬೆಂಬಲದೊಂದಿಗೆ 2021 ರಲ್ಲಿ ಕಾನ್ಪುರದ ಮಾದರಿ ಚಾಲನಾ ತರಬೇತಿ ಮತ್ತು ಸಂಶೋಧನಾ ಸಂಸ್ಥೆಯಿಂದ ಹೆವಿ ವೆಹಿಕಲ್ ಡ್ರೈವಿಂಗ್ ತರಬೇತಿಯನ್ನು ಪಡೆದರು. ಇದರ ನಂತರ, ಏಪ್ರಿಲ್ 2023 ರಲ್ಲಿ ಕೌಶಂಬಿ ಡಿಪೋಗೆ 10 ತಿಂಗಳ ಕಾಲ ತರಬೇತಿ ಕಾರ್ಯಕ್ರಮಕ್ಕಾಗಿ ಕಳುಹಿಸಲಾಗಿದೆ.

ದೆಹಲಿ ಪೊಲೀಸ್‌ನಲ್ಲಿ ಉದ್ಯೋಗಕ್ಕೆ ತಯಾರಿ ನಡೆಸುತ್ತಿದ್ದು, ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ ಎಂದು ಮಹಿಳಾ ಚಾಲಕ ಹೇಳಿದ್ದಾರೆ. ದೆಹಲಿ ಪೊಲೀಸ್ ತಯಾರಿ ನಡೆಸುತ್ತಿರುವಾಗ ಚಾಲಕನ ಉದ್ಯೋಗದ ಜಾಹೀರಾತು ಕಣ್ಣಿಗೆ ಬಿದ್ದಿತ್ತು ಎಂದು ಕುಮಾರಿ ಹೇಳಿದ್ದಾರೆ.
ಯಾವುದೇ ಕೆಲಸವು ಕಷ್ಟಕರವಲ್ಲ, ಸಾಧಿಸುವ ಛಲವೊಂದಿದ್ದರೆ ಗಂಡು, ಹೆಣ್ಣು ಎನ್ನುವ ಬೇಧವಿಲ್ಲ.

ಮತ್ತಷ್ಟು ಓದಿ: ಮಚ್ಚು ತೋರಿಸಿ ದರೋಡೆ ಯತ್ನ, ದಿಟ್ಟ ಮಹಿಳೆ ಮಾಡಿದ್ದೇನು ಗೊತ್ತಾ?

ಎರಡು ಮಕ್ಕಳ ತಾಯಿ, ಕುಮಾರಿ ಮತ್ತು ಅವರ ಪತಿ ತಮ್ಮ ಕೆಲಸದಲ್ಲಿ ನಿರತರಾಗಿದ್ದಾರೆ ಮತ್ತು ಅವರ ಹಿರಿಯ ಮಗ, 10 ನೇ ತರಗತಿ ಓದುತ್ತಿದ್ದು, ಮಗಳು ಇನ್ನೂ ಚಿಕ್ಕವಳು.

ಸಾಮಾಜಿಕ ಮಾನದಂಡಗಳನ್ನು ಧಿಕ್ಕರಿಸಿ, ಎಲ್ಲರಂತೆಯೇ ಮಹಿಳೆಯರು ಕೂಡ ಎಲ್ಲವನ್ನೂ ಸಾಧಿಸಬಲ್ಲರು, ಸಾಧಿಸುವ ಛಲವಿದ್ದರೆ ಯಾವ ಉದ್ಯೋಗವೂ ಕಷ್ಟವೆನಿಸಲು ಎಂದು ಮಹಿಳೆಯರಿಗೆ ಸಲಹೆ ನೀಡಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us