ದೆಹಲಿ ಅಕ್ಟೋಬರ್ 17: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಭಾರತದ ಗಗನ್‌ಯಾನ್ ಮಿಷನ್‌ನ (Gaganyaan Mission) ಪ್ರಗತಿಯನ್ನು ನಿರ್ಣಯಿಸಲು ಮತ್ತು ಭಾರತದ ಬಾಹ್ಯಾಕಾಶ ಪರಿಶೋಧನಾ ಪ್ರಯತ್ನಗಳನ್ನು ಪರಿಶೀಲಿಸಲು ಇಂದು (ಮಂಗಳವಾರ)ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬಾಹ್ಯಾಕಾಶ ಇಲಾಖೆಯು ಗಗನ್‌ಯಾನ್ ಮಿಷನ್‌ನ ಸಮಗ್ರ ಅವಲೋಕನವನ್ನು ಪ್ರಸ್ತುತಪಡಿಸಿದೆ. ಇವು ಇದುವರೆಗೆ ಅಭಿವೃದ್ಧಿಪಡಿಸಿದ ಉಡಾವಣಾ ವಾಹನಗಳು ಮತ್ತು ಸಿಸ್ಟಮ್ ಅರ್ಹತೆಯಂತಹ ವಿವಿಧ ತಂತ್ರಜ್ಞಾನಗಳನ್ನು ಒಳಗೊಂಡಿದೆ. ಮಾನವ ರೇಟೆಡ್ ಲಾಂಚ್ ವೆಹಿಕಲ್ (HLVM3) ನ 3 ಸಿಬ್ಬಂದಿರಹಿತ ಕಾರ್ಯಾಚರಣೆಗಳು ಸೇರಿದಂತೆ ಸುಮಾರು 20 ಪ್ರಮುಖ ಪರೀಕ್ಷೆಗಳನ್ನು ಯೋಜಿಸಲಾಗಿದೆ. ಕ್ರೂ ಎಸ್ಕೇಪ್ ಸಿಸ್ಟಮ್ ಟೆಸ್ಟ್ ವೆಹಿಕಲ್‌ನ ಮೊದಲ ಪ್ರದರ್ಶನ ಹಾರಾಟವನ್ನು ಅಕ್ಟೋಬರ್ 21 ರಂದು ನಿಗದಿಪಡಿಸಲಾಗಿದೆ. ಸಭೆಯು ಮಿಷನ್‌ನ ಸನ್ನದ್ಧತೆಯನ್ನು ಪರಿಶೀಲಿಸಿದ್ದು ,2025 ರಲ್ಲಿ ಅದರ ಉಡಾವಣೆಯನ್ನು ದೃಢೀಕರಿಸಿತು.
ಇತ್ತೀಚಿನ ಚಂದ್ರಯಾನ-3 ಮತ್ತು ಆದಿತ್ಯ L1 ಮಿಷನ್‌ಗಳು ಸೇರಿದಂತೆ ಭಾರತೀಯ ಬಾಹ್ಯಾಕಾಶ ಉಪಕ್ರಮಗಳ ಯಶಸ್ಸಿನ ನಂತರ 2035 ರ ವೇಳೆಗೆ ‘ಭಾರತೀಯ ಅಂತರಿಕ್ಷಾ ನಿಲ್ದಾಣ’ (ಭಾರತೀಯ ಬಾಹ್ಯಾಕಾಶ ನಿಲ್ದಾಣ) ಸ್ಥಾಪನೆ ಸೇರಿದಂತೆ 2040 ರ ವೇಳೆಗೆ ಮೊದಲ ಭಾರತೀಯನನ್ನು ಚಂದ್ರನಿಗೆ ಕಳುಹಿಸುವುದು- ಹೀಗೆ ಹೊಸ ಮತ್ತು ಮಹತ್ವಾಕಾಂಕ್ಷೆಯ ಗುರಿಗಳನ್ನಿಟ್ಟುಕೊಳ್ಳಬೇಕು ಎಂದು ಮೋದಿ ಹೇಳಿದ್ದಾರೆ.
ಈ ಕನಸನ್ನು ನನಸು ಮಾಡಲು ಬಾಹ್ಯಾಕಾಶ ಇಲಾಖೆಯು ಚಂದ್ರನ ಅನ್ವೇಷಣೆಗಾಗಿ ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸುತ್ತದೆ.
ಇದನ್ನೂ ಓದಿ: Gaganyaan: ಅಕ್ಟೋಬರ್ 21ಕ್ಕೆ ಗಗನಯಾನ ಮಿಷನ್ ಸಿಬ್ಬಂದಿ ಮಾಡ್ಯೂಲ್‌ನ ಮೊದಲ ಹಾರಾಟ ಪರೀಕ್ಷೆ: ಇಸ್ರೋ
ಇದು ಚಂದ್ರಯಾನ ಕಾರ್ಯಾಚರಣೆಗಳ ಸರಣಿ, ಮುಂದಿನ ಪೀಳಿಗೆಯ ಉಡಾವಣಾ ವಾಹನದ (NGLV) ಅಭಿವೃದ್ಧಿ, ಹೊಸ ಉಡಾವಣಾ ಪ್ಯಾಡ್‌ನ ನಿರ್ಮಾಣ, ಮಾನವ ಕೇಂದ್ರಿತ ಪ್ರಯೋಗಾಲಯಗಳು ಮತ್ತು ಸಂಬಂಧಿತ ತಂತ್ರಜ್ಞಾನಗಳನ್ನು ಒಳಗೊಂಡಿರುತ್ತದೆ.
ವೀನಸ್ ಆರ್ಬಿಟರ್ ಮಿಷನ್ ಮತ್ತು ಮಾರ್ಸ್ ಲ್ಯಾಂಡರ್ ಅನ್ನು ಒಳಗೊಂಡಿರುವ ಅಂತರಗ್ರಹ ಕಾರ್ಯಾಚರಣೆಗಳ ಕಡೆಗೆ ಕೆಲಸ ಮಾಡಲು ಭಾರತೀಯ ವಿಜ್ಞಾನಿಗಳಿಗೆ ಪ್ರಧಾನಿ ಕರೆ ನೀಡಿದ್ದಾರೆ.
ಭಾರತದ ಸಾಮರ್ಥ್ಯಗಳಲ್ಲಿ ವಿಶ್ವಾಸ ವ್ಯಕ್ತಪಡಿಸಿದ ಮೋದಿ, ಬಾಹ್ಯಾಕಾಶ ಪರಿಶೋಧನೆಯಲ್ಲಿ ಹೊಸ ಮಟ್ಟಕ್ಕೇರುತ್ತದೆ ಎಂದಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:40 pm, Tue, 17 October 23