ಲಕ್ನೋ: ಮೌನಿ ಅಮಾವಾಸ್ಯೆಯಾದ ಇಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಗಂಗೆಯಲ್ಲಿ ಪುಣ್ಯಸ್ನಾನ ಮಾಡಿದರು. ಉತ್ತರ ಪ್ರದೇಶದ ಪ್ರಯಾಗ್ರಾಜ್ ಬಳಿ ಇರುವ ಸಂಗಮದಲ್ಲಿ ಪ್ರಿಯಾಂಕಾ ಗಾಂಧಿ ಮಿಂದೆದ್ದರು. ಪ್ರಯಾಗರಾಜ್ನ ಸಂಗಮದಲ್ಲಿ ಇಂದು ಮೌನಿ ಅಮಾವಾಸ್ಯೆಯಾದ ಕಾರಣ ಪ್ರಿಯಾಂಕಾ ಗಾಂಧಿ ತಮ್ಮ ಪುತ್ರಿ ಜೊತೆ ಪವಿತ್ರ ಸ್ನಾನ ನೆರವೇರಿಸಿದರು. ಮೌನಿ ಅಮಾವಾಸ್ಯೆಯ ಸಂದರ್ಭದಲ್ಲಿ ಇಂದು ಸಾವಿರಾರು ಭಕ್ತರು ಗಂಗೆಯಲ್ಲಿ ಮಿಂದೆದ್ದರು. Priyanka Gandhi holy dip at Prayagraj on Mauni Amavasya
ಪುಣ್ಯಸ್ನಾನದ ಬಳಿಕ ಪ್ರಿಯಾಂಕಾ ಗಾಂಧಿ ಜಗದ್ಗುರು ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರನ್ನು ಭೇಟಿಯಾದರು. ಶ್ರೀಗಳ ಜೊತೆ ಚರ್ಚೆ ನಡೆಸಿದ ಕಾಂಗ್ರೆಸ್ ನಾಯಕಿ ನಂತರ ಅವರ ಆಶೀರ್ವಾದ ಪಡೆದರು.
ಪ್ರಯಾಗರಾಜ್ನ ಸಂಗಮದಲ್ಲಿ ಮಿಂದೆದ್ದ ಪ್ರಿಯಾಂಕಾ ಗಾಂಧಿ
ಮೌನಿ ಅಮಾವಾಸ್ಯೆಯಂದು ಗಂಗೆಯಲ್ಲಿ ಪುಣ್ಯಸ್ನಾನ ನೆರವೇರಿಸಿದ ಪ್ರಿಯಾಂಕಾ ಗಾಂಧಿ
ಜಗದ್ಗುರು ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರನ್ನು ಭೇಟಿಯಾದ ಕಾಂಗ್ರೆಸ್ ನಾಯಕಿ
ಇದನ್ನೂ ಓದಿ: ಉಡುಪಿಯ ಹೊಸಂಗಡಿಯಲ್ಲಿದೆ ಐತಿಹಾಸಿಕ ಹಿನ್ನೆಲೆಯ ಮಹಾ ಗಣಪತಿ ದೇವಸ್ಥಾನ
Published On - 6:07 pm, Thu, 11 February 21