ಮಹಾರಾಷ್ಟ್ರದ ಔರಂಗಾಬಾದ್, ಒಸ್ಮಾನಾಬಾದ್ ನಗರಕ್ಕೆ ಮರುನಾಮಕರಣ: ಕೇಂದ್ರದ ಒಪ್ಪಿಗೆ

|

Updated on: Feb 25, 2023 | 12:01 PM

ಮಹಾರಾಷ್ಟ್ರದ ಔರಂಗಾಬಾದ್ ನಗರ ಮತ್ತು ಒಸ್ಮಾನಾಬಾದ್ ನಗರದ ಹೆಸರನ್ನು ಬದಲಾವಣೆ ಮಾಡಲು ಕೇಂದ್ರ ಒಪ್ಪಿಗೆ ನೀಡಿದೆ. ಔರಂಗಾಬಾದ್ ನಗರಕ್ಕೆ 'ಛತ್ರಪತಿ ಸಂಭಾಜಿನಗರ' ಮತ್ತು ಒಸ್ಮಾನಾಬಾದ್ ನಗರವನ್ನು 'ಧಾರಶಿವ' ಎಂದು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ಮಹಾರಾಷ್ಟ್ರದ ಔರಂಗಾಬಾದ್, ಒಸ್ಮಾನಾಬಾದ್ ನಗರಕ್ಕೆ ಮರುನಾಮಕರಣ: ಕೇಂದ್ರದ ಒಪ್ಪಿಗೆ
ಸಾಂದರ್ಭಿಕ ಚಿತ್ರ
Follow us on

ಮುಂಬೈ: ಮಹಾರಾಷ್ಟ್ರದ ಔರಂಗಾಬಾದ್ ನಗರ ಮತ್ತು ಒಸ್ಮಾನಾಬಾದ್ ನಗರದ ಹೆಸರನ್ನು ಬದಲಾವಣೆ ಮಾಡಲು ಕೇಂದ್ರ ಒಪ್ಪಿಗೆ ನೀಡಿದೆ. ಔರಂಗಾಬಾದ್ ನಗರಕ್ಕೆ ‘ಛತ್ರಪತಿ ಸಂಭಾಜಿನಗರ’ ಮತ್ತು ಒಸ್ಮಾನಾಬಾದ್ ನಗರವನ್ನು ‘ಧಾರಶಿವ’ ಎಂದು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಈ ಬಗ್ಗೆ ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಔರಂಗಾಬಾದ್ ಎಂಬ ಹೆಸರನ್ನು ಮೊಘಲ್ ಚಕ್ರವರ್ತಿ ಔರಂಗಜೇಬನಿಂದ ಪಡೆದುಕೊಂಡಿತ್ತು, ಆದರೆ ಉಸ್ಮಾನಾಬಾದ್ ಅನ್ನು 20ನೇ ಶತಮಾನದ ಹೈದರಾಬಾದ್ ರಾಜಪ್ರಭುತ್ವದ ಆಡಳಿತಗಾರನಿಗೆ ಹೆಸರಿಸಲಾಗಿದೆ. ಛತ್ರಪತಿ ಶಿವಾಜಿ ಮಹಾರಾಜರ ಹಿರಿಯ ಮಗ ಛತ್ರಪತಿ ಸಂಭಾಜಿ, ತನ್ನ ತಂದೆ ಸ್ಥಾಪಿಸಿದ ಮರಾಠ ರಾಜ್ಯದ ಎರಡನೇ ಆಡಳಿತಗಾರ. 1689 ರಲ್ಲಿ ಔರಂಗಜೇಬನ ಆದೇಶದ ಮೇರೆಗೆ ಸಂಭಾಜಿ ಮಹಾರಾಜರನ್ನು ಗಲ್ಲಿಗೇರಿಸಲಾಯಿತು. ಕೆಲವು ವಿದ್ವಾಂಸರ ಪ್ರಕಾರ ಒಸ್ಮಾನಾಬಾದ್ ಬಳಿಯ ಗುಹೆ ಸಂಕೀರ್ಣದ ಹೆಸರು ಧಾರಶಿವ್ 8ನೇ ಶತಮಾನಕ್ಕೆ ಹಿಂದಿನದು ಎಂದು ಹೇಳಲಾಗಿದೆ.

ಹಿಂದೂ ಬಲಪಂಥೀಯ ಸಂಘಟನೆಗಳು ಎರಡು ನಗರಗಳ ಮರುನಾಮಕರಣವನ್ನು ಬಹಳ ಹಿಂದಿನಿಂದಲೂ ಒತ್ತಾಯಿಸುತ್ತಿವೆ. ಫಡ್ನವೀಸ್ ಅವರು ಫೆಬ್ರವರಿ 24 ರಂದು ರಾಜ್ಯ ಸಾಮಾನ್ಯ ಆಡಳಿತ ಇಲಾಖೆಯ ಉಪ ಕಾರ್ಯದರ್ಶಿಗೆ ಗೃಹ ಸಚಿವಾಲಯದಿಂದ ಎರಡು ಪತ್ರಗಳ ಕುರಿತು ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಮಹಾರಾಷ್ಟ್ರ ನಗರಗಳ ಹೆಸರು ಬದಲಾವಣೆಗೆ ಕೇಂದ್ರದ ಅಭ್ಯಂತರವಿಲ್ಲ ಎಂದು ಪತ್ರಗಳಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:ಔರಂಗಾಬಾದ್ ಹೆಸರು ಸಂಭಾಜಿನಗರ, ಉಸ್ಮಾನಾಬಾದ್ ಹೆಸರು ಧಾರಾಶಿವ್ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಮಹಾ ಸರ್ಕಾರ ಒಪ್ಪಿಗೆ

ಈ ನಿರ್ಧಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಫಡ್ನವೀಸ್ ಧನ್ಯವಾದ ತಿಳಿಸಿದ್ದಾರೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ರಾಜ್ಯ ಸರ್ಕಾರ ಭರವಸೆ ನೀಡಿದ್ದನ್ನು ಮಾಡಿದೆ ಎಂದು ಅವರು ಹೇಳಿದರು. ಇದೊಂದು ಗಮನಾರ್ಹ ವಿಚಾರವಾಗಿದ್ದು, ಔರಂಗಾಬಾದ್ ಅನ್ನು ಸಂಭಾಜಿನಗರ ಎಂದು ಮರುನಾಮಕರಣ ಮಾಡುವುದು ಮತ್ತು ಉಸ್ಮಾನಾಬಾದ್ ಅನ್ನು ಧರಾಶಿವ್ ಎಂದು ಮರುನಾಮಕರಣ ಮಾಡುವುದು ಉದ್ಧವ್ ಠಾಕ್ರೆ ವಿರುದ್ಧ ಶಿಂಧೆಯವರ ಬಂಡಾಯದ ನಂತರ ಕಳೆದ ಜೂನ್‌ನಲ್ಲಿ ಪತನಗೊಂಡ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಸರ್ಕಾರದ ಕೊನೆಯ ಕ್ಯಾಬಿನೆಟ್ ನಿರ್ಧಾರವಾಗಿತ್ತು.

ಶಿಂಧೆ ನೇತೃತ್ವದ ಹೊಸ ಸರ್ಕಾರ ಸಂಪುಟ ನಿರ್ಧಾರವನ್ನು ರದ್ದುಪಡಿಸಿ ಹೊಸ ನಿರ್ಧಾರವನ್ನು ತೆಗೆದುಕೊಂಡಿತು. ಸುದ್ದಿಗೆ ಪ್ರತಿಕ್ರಿಯಿಸಿದ ಔರಂಗಾಬಾದ್ ಸಂಸದ ಮತ್ತು ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ನಾಯಕ ಇಮ್ತಿಯಾಜ್ ಜಲೀಲ್ ಅವರು ಔರಂಗಾಬಾದ್‌ಗೆ ತಮ್ಮ ಶಕ್ತಿಯನ್ನು ತೋರಿಸುವುದಾಗಿ ಟ್ವೀಟ್ ಮಾಡಿದ್ದಾರೆ. ಔರಂಗಾಬಾದ್ ನಮ್ಮ ನಗರವಾಗಿದೆ ಜೊತೆಗೆ ಯಾವತ್ತೂ ಅದೇ ಹೆಸರು ಇರುತ್ತದೆ. ನಮ್ಮ ನಗರದ ಹೆಸರಿನಲ್ಲಿ ರಾಜಕೀಯ ಮಾಡುವ ಈ ಶಕ್ತಿಗಳನ್ನು (ಬಿಜೆಪಿ) ಸೋಲಿಸಲು ಔರಂಗಬಾದಿಗಳು ಸಿದ್ಧರಾಗಿ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಮರುನಾಮಕರಣವು ಶಿವಸೇನೆ ಸಂಸ್ಥಾಪಕ ದಿವಂಗತ ಬಾಳ್ ಠಾಕ್ರೆ ಅವರ ನಿಲುವಿನ ವಿಜಯವಾಗಿದೆ ಎಂದು ಶಿವಸೇನಾ (ಯುಬಿಟಿ) ನಾಯಕ ಅಂಬಾದಾಸ್ ದಾನ್ವೆ ಹೇಳಿದ್ದಾರೆ. ಮಹಾರಾಷ್ಟ್ರ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ದಾನ್ವೆ, ಠಾಕ್ರೆ ಅವರು ಮೇ 9, 1988 ರಂದು ಔರಂಗಾಬಾದ್ ನಗರವನ್ನು ಛತ್ರಪತಿ ಸಂಭಾಜಿನಗರ ಎಂದು ಮರುನಾಮಕರಣ ಮಾಡಿದರು ಎಂದು ಟ್ವೀಟ್ ಮಾಡಿದ್ದಾರೆ. ಕಾಶಿ ವಿಶ್ವೇಶ್ವರ ದೇವಸ್ಥಾನವನ್ನು ಒಡೆದ ವ್ಯಕ್ತಿಯ (ಔರಂಗಜೇಬ್) ಹೆಸರನ್ನು ಅಳಿಸಲಾಗಿದೆ ಎಂದು ಅವರು ಬರೆದಿದ್ದಾರೆ.

Published On - 11:59 am, Sat, 25 February 23