ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು, ಆಸ್ಪತ್ರೆಯಲ್ಲಿ ತರಬೇತಿ ನಿರತ ವೈದ್ಯೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಂಜಯ್ಗೆ ಸೀಲ್ದಾ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. 2024ರ ಆಗಸ್ಟ್ 9ರಂದು ಆಸ್ಪತ್ರೆಯ ಕಾನ್ಫರೆನ್ಸ್ ಕೊಠಡಿಯಲ್ಲಿ 31 ವರ್ಷದ ತರಬೇತಿ ನಿರತ ವೈದ್ಯೆಯ ಶವ ಪತ್ತೆಯಾಗಿತ್ತು. ವೈದ್ಯರ ಮೇಲೆ ಮೊದಲು ಅತ್ಯಾಚಾರ ಎಸಗಿ ನಂತರ ಕೊಲೆ ಮಾಡಿರುವುದು ಬೆಳಕಿಗೆ ಬಂದಿತ್ತು.
ಈ ಘಟನೆಯನ್ನು ವಿರೋಧಿಸಿ ವೈದ್ಯರು ಬಹಳ ದಿನಗಳಿಂದ ಪ್ರತಿಭಟನೆ ನಡೆಸಿದ್ದರು. ಒಟ್ಟು 50 ಸಾಕ್ಷಿಗಳ ವಿಚಾರಣೆ ನಡೆದು ಜನವರಿ 9ರಂದು ವಿಚಾರಣೆ ಮುಕ್ತಾಯವಾಯಿತು. ಈ ಪ್ರಕರಣದ ಪ್ರಮುಖ ಆರೋಪಿ ಸಂಜಯ್ ರಾಯ್. ಆಗಸ್ಟ್ 9 ರಂದು ಘಟನೆ ನಡೆದ ಕೂಡಲೇ ಪೊಲೀಸರು ಸಂಜಯ್ ರಾಯ್ ಅವರನ್ನು ಆಗಸ್ಟ್ 10 ರಂದು ಬಂಧಿಸಿದ್ದರು. ಮೃತರ ದೇಹದ ಬಳಿ ಬ್ಲೂಟೂತ್ ಪತ್ತೆಯಾಗಿತ್ತು. ಸಂಜಯ್ ರಾಯ್ ಅದೇ ಬ್ಲೂ ಟೂತ್ ಧರಿಸಿ ಸೆಮಿನಾರ್ ಹಾಲ್ಗೆ ಪ್ರವೇಶಿಸುತ್ತಿರುವುದು ಸಿಸಿಟಿವಿಯಲ್ಲಿ ಕಂಡುಬಂದಿತ್ತು.
ಸೀಲ್ದಾ ಜಿಲ್ಲಾ ಹೆಚ್ಚುವರಿ & ಸೆಷನ್ಸ್ ಕೋರ್ಟ್ನಿಂದ ತೀರ್ಪು ಪ್ರಕಟವಾಗಿದೆ, ನ್ಯಾಯಾಧೀಶ ಅನಿರ್ಬನ್ ದಾಸ್ ಅವರು ಜೀವಾವಧಿ ಶಿಕ್ಷೆ ಪ್ರಕರಟಿಸಿದ್ದಾರೆ. ವೈದ್ಯೆ ಕುಟುಂಬಕ್ಕೆ 17 ಲಕ್ಷ ರೂ. ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿದ್ದು, 50 ಸಾವಿರ ರೂ. ದಂಡ ವಿಧಿಸಿದೆ.
ಶಿಕ್ಷೆಯ ಘೋಷಣೆಗೂ ಮುನ್ನ ಅಪರಾಧಿ ಸಂಜಯ್ ರಾಯ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಧೀಶರು ಅವರು ತಪ್ಪಿತಸ್ಥ ಎಂದು ಘೋಷಿಸಿದ್ದರು. ಶಿಕ್ಷೆಯ ಬಗ್ಗೆ ಏನಾದರೂ ಹೇಳಲು ಇದೆಯೇ ಎಂದು ನ್ಯಾಯಾಲಯ ಕೇಳಿದಾಗ ತಾನು ತಪ್ಪಿತಸ್ಥನಲ್ಲ, ನಾನು ಯಾವ ತಪ್ಪು ಮಾಡಿಲ್ಲ, ನಾನು ಅಂದು ರುದ್ರಾಕ್ಷಿ ಮಾಲೆಯನ್ನು ಹಾಕಿದ್ದೆ, ಕೆಲವರು ತಪ್ಪೊಪ್ಪಿಕೊಳ್ಳುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಿದ್ದಾನೆ.
ಸಂಜಯ್ ಎಸಗಿರುವ ಕೃತ್ಯ ಸಮಾಜಕ್ಕೆ ಆತಂಕಕಾರಿಯಾಗಿದೆ, ಹಾಗಾಗಿ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸುವುದೇ ಸೂಕ್ತವೆಂದು ಸಿಬಿಐ ಮನವಿ ಮಾಡಿದೆ. ಗಲ್ಲು ಶಿಕ್ಷೆ ವಿಧಿಸುವುದರಿಂದ ವೈದ್ಯೆ ಸಾವಿಗೆ ನ್ಯಾಯ ಸಿಗುತ್ತದೆ ಎಂದು ನ್ಯಾಯಾಧೀಶ ಅನಿರ್ಬನ್ ದಾಸ್ ಅವರಿಗೆ ಸಿಬಿಐ ಪರ ವಕೀಕರು ಮನವಿ ಮಾಡಿದ್ದಾರೆ.
ಆಗಸ್ಟ್ 9, 2024 ರಂದು, ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ 31 ವರ್ಷದ ಮಹಿಳಾ ವೈದ್ಯೆಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಲಾಯಿತು. ಮೊದಲು ಆಕೆಯ ಮೇಲೆ ಅತ್ಯಾಚಾರವೆಸಗಲಾಯಿತು ಮತ್ತು ನಂತರ ಆಕೆಯನ್ನು ಕೊಲೆ ಮಾಡಲಾಯಿತು. ಕಳೆದ ವರ್ಷ ನವೆಂಬರ್ 12ರಂದು ಸಿಬಿಐ ಕೋರ್ಟ್ ವಿಚಾರಣೆ ಆರಂಭಿಸಿತ್ತು. ಘಟನೆ ಸಂಬಂಧ ರಾಯ್‌ನನ್ನು ಆಗಸ್ಟ್ 10ರಂದು ಪೊಲೀಸರು ಬಂಧಿಸಿದ್ದರು. ಆತನ ಮೇಲೆ ಭಾರತೀಯ ನ್ಯಾಯ ಸಂಹಿತೆಯ 64, 66 ಹಾಗೂ 103 (1) ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿತ್ತು. ಫೋರೆನ್ಸಿಕ್ ವರದಿ ಆಧರಿಸಿ ನ್ಯಾಯಾಲಯವು ಈ ಪ್ರಕರಣದಲ್ಲಿ ಸಂಜಯ್ ರಾಯ್‌ನನ್ನು ದೋಷಿ ಎಂದು ಘೋಷಿಸಿತು.
2024 ರ ಆಗಸ್ಟ್ 8-9 ರ ರಾತ್ರಿ ನಡೆದ ಈ ಘಟನೆಯ ಸುಮಾರು 162 ದಿನಗಳ ನಂತರ, ನ್ಯಾಯಾಲಯವು ಶನಿವಾರ ತನ್ನ ತೀರ್ಪನ್ನು ನೀಡಿತು ಮತ್ತು ಸಂಜಯ್ ರಾಯ್ ಅವರನ್ನು ಅಪರಾಧಿ ಎಂದು ಘೋಷಿಸಿತು. ಈ ಪ್ರಕರಣದ ವಿಚಾರಣೆ ಸುಮಾರು 57 ದಿನಗಳ ಕಾಲ ನಡೆಯಿತು. ಈ ಮೊದಲು ಈ ಪ್ರಕರಣವನ್ನು ಕೋಲ್ಕತ್ತಾ ಪೊಲೀಸರು ತನಿಖೆ ನಡೆಸುತ್ತಿದ್ದರು. ನಂತರ ಹೈಕೋರ್ಟ್ ಮಧ್ಯಪ್ರವೇಶದ ನಂತರ ಪ್ರಕರಣವನ್ನು ಸಿಬಿಐಗೆ ವಹಿಸಲಾಯಿತು. ಈ ಪ್ರಕರಣದ ತನಿಖೆಯನ್ನು ಸಿಬಿಐ ಆಗಸ್ಟ್ 13 ರಂದು ವಹಿಸಿಕೊಂಡಿತ್ತು. ಇದಾದ ಬಳಿಕ ತನಿಖೆ ಆರಂಭಿಸಲಾಗಿತ್ತು. ಸಿಬಿಐ 120ಕ್ಕೂ ಹೆಚ್ಚು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ. ಸುಮಾರು ಎರಡು ತಿಂಗಳ ಕಾಲ ಈ ಪ್ರಕರಣದಲ್ಲಿ ಕ್ಯಾಮೆರಾ ಪ್ರಯೋಗ ನಡೆದಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:57 pm, Mon, 20 January 25