ಲಸಿಕಾ ಅಭಿಯಾನಕ್ಕೆ ತಗುಲಲಿರುವ ವೆಚ್ಚವು ಲಾಕ್​ಡೌನ್​ಗಳಿಂದ ಆಗಿರುವ ನಷ್ಟಕ್ಕಿಂತ ಕಡಿಮೆಯಿರಲಿದೆ: ವರದಿ

|

Updated on: May 23, 2021 | 12:24 AM

ಯುಪಿ ಮತ್ತು ಬಿಹಾರದಂಥ ರಾಜ್ಯಗಳಲ್ಲಿ ಆದಾಯ ಖೋತಾ ಲಸಿಕೆ ಮೇಲಿನ ವೆಚ್ಚಕ್ಕಿಂತ ಕಡಿಮೆಯಾಗಿದೆ. ಹಾಗೆಯೇ, ಆದಾಯದ ನಷ್ಟವನ್ನು ಭರಿಸಲು ಕ್ಯಾಪಿಟಲ್ ವೆಚ್ಚವೆಂದು ಅಂದಾಜಿಸಿರುವ 8.8 ಲಕ್ಷ ಕೋಟಿ ರೂ.ಗಳಲ್ಲಿ ಮಹತ್ತರದ ರೋಲ್ ಬ್ಯಾಕ್ ಮಾಡುವ ಸಾಧ್ಯತೆಯೂ ಇದೆ ಎಂದು ವರದಿ ಹೇಳುತ್ತದೆ

ಲಸಿಕಾ ಅಭಿಯಾನಕ್ಕೆ ತಗುಲಲಿರುವ ವೆಚ್ಚವು ಲಾಕ್​ಡೌನ್​ಗಳಿಂದ ಆಗಿರುವ ನಷ್ಟಕ್ಕಿಂತ ಕಡಿಮೆಯಿರಲಿದೆ: ವರದಿ
ಕೊರೊನಾ ವ್ಯಾಕ್ಸಿನ್
Follow us on

ಭಾರತದ ಪ್ರತಿಯೊಬ್ಬ ನಾಗರಿಕನಿಗೆ ಕೊವಿಡ್-19 ವಿರುದ್ಧ ಲಸಿಕೆ ಹಾಕಿಸಲು ಅಂದಾಜು 3,70,000 ಕೋಟಿ ರೂ. ತಗುಲಲಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕಿನ ವರದಿಯೊಂದರ ಪ್ರಕಾರ ತಿಳಿದುಬಂದಿದೆ. ವಿವಿಧ ದರಗಳ ಆಧಾರದದಲ್ಲಿ ನಮ್ಮ ದೇಶದ ನಿಜ ಜೀವನದ ಸನ್ನಿವೇಶದಲ್ಲಿ ರೂಪಾಯಿ ಮತ್ತು ಡಾಲರ್ ನಡುವಿನ ಬದಲಾವಣೆ ದರ 73 ಇಟ್ಟುಕೊಂಡು, ಲಸಿಕೆಯನ್ನು  5 ಡಾಲರ್​, 10 ಡಾಲರ್, 20 ಡಾಲರ್, ಮತ್ತು 40 ಡಾಲರ್​ಗಳಿಗೆ ಖರೀದಿಸದರೆ ಮತ್ತು ಅದರಲ್ಲಿ ಶೇಕಾಡಾ 50ರಷ್ಟನ್ನು ರಾಜ್ಯಗಳಿಗೆ ಭಾರತ ಸರ್ಕಾರ ನೀಡಲಿದೆ ಎಂದು ಭಾವಿಸಿಕೊಂಡು ಉಳಿದ ಶೇಕಡಾ 50 ಲಸಿಕೆಗಳನ್ನು ಬೇರೆ ಬೇರೆ ರಾಜ್ಯಗಳಿಗೆ ನೀಡುವ ಯೋಜನೆ ಹಾಕಿಕೊಂಡಲ್ಲಿ, ಸಿಕ್ಕಿಂಗೆ 20 ಕೋಟಿ ರೂಪಾಯಿ (ಲಸಿಕೆಯ ಪ್ರತಿ ಡೋಸನ್ನು 5 ಡಾಲರ್​ಗಳಿಗೆ ಖರೀದಿಸಿದರೆ) ಖರ್ಚು ಬೀಳುತ್ತದೆ ಮತ್ತು ಉತ್ತರ ಪ್ರದೇಶಕ್ಕೆ 67,100 ಕೋಟಿ ರೂಪಾಯಿ (ಲಸಿಕೆ ಪ್ರತಿ ಡೋಸನ್ನು 40 ಡಾಲರ್​ಗಳಿಗೆ ಖರೀದಿಸಿದರೆ) ಖರ್ಚು ಬೀಳಲಿದೆ ಎಂದು ಎಸ್​ಬಿಐನ ಸಮೀಕ್ಷಾ ವರದಿ ತಿಳಿಸುತ್ತದೆ.

ಆದರೆ, ಈ ಅಂಕಿಅಂಶಗಳನ್ನು ಲೆಕ್ಕ ಹಾಕುವಾಗ ಗರಿಷ್ಠ ಬೆಲೆಯ ಮತ್ತು ಅತೀ ಗಂಭೀರ  ಸನ್ನಿವೇಶದ ಆದಾರದಲ್ಲಿ ಲೆಕ್ಕ ಹಾಕಲಾಗಿದೆ ಮತ್ತು ಲಸಿಕೆಗಳ ದರ ಇವೆರಡರ ನಡುವೆ ಇರಲಿದೆ ಎಂದು ವರದಿ ಹೇಳುತ್ತದೆ. ಈ ಸನ್ನಿವೇಶದ ವಿಶ್ಲೇಷಣೆಯನ್ನು ನಾವು ಲೆಕ್ಕಾಚಾರ ಮಾಡಿದ್ದೇಯಾದಲ್ಲಿ 20 ಪ್ರಮುಖ ರಾಜ್ಯಗಳಿಗೆ ಆರ್ಥಿಕ ವರ್ಷ 2022 ದ ಬಜೆಟ್​​ಗೆ ಅಂದಾಜಿಸಿರುವ ಒಟ್ಟು ವೆಚ್ಚ, ಲಸಿಕೆ ಗರಿಷ್ಠ ಬೆಲೆ ಅವಧಿಯ ಈ ಸಮಯದಲ್ಲಿ ಲಸಿಕೆಯನ್ನು ಪಡೆದುಕೊಳ್ಳಲು ಬಿಹಾರ ರಾಜ್ಯಕ್ಕೆ ಒಟ್ಟು ವೆಚ್ಚದ ಶೇ.16 ಮತ್ತು ಉತ್ತರ ಪ್ರದೇಶ ಮತ್ತು ಜಾರ್ಖಂಡ್​ನಂಥ ರಾಜ್ಯಗಳಿಗೆ ಶೇ 12 ರಷ್ಟು ತಗಲುತ್ತದೆ,’ ಎಂದು ವರದಿ ಹೇಳುತ್ತದೆ

ಆದರೆ, ಲಸಿಕೆಯ ಗರಿಷ್ಠ ದರದ ಹಿನ್ನೆಲೆಯಲ್ಲಿ ಈ ತೆರನಾದ ವೆಚ್ಚ ಮಾಡಲೇಬೇಕಾಗುತ್ತದೆ, ಸಮಗ್ರ ಲಸಿಕಾ ಅಭಿಯಾನದ ವೆಚ್ಚ 3.7 ಲಕ್ಷ ಕೋಟಿಗಳ ಮೊತ್ತವು, ಜೂನ್ ತಿಂಗಳ ಆರಂಭದ ಹೊತ್ತಿಗೆ ಲಾಕ್​ಡೌನ್ ಹಂತಗಳು ಕೊನೆಗೊಳ್ಳಲಿವೆ ಅಂತಿಟ್ಟುಕೊಂಡರೆ, ಲಾಕ್​ಡೌನ್​ಗಳಿಂದ ಆಗಿರುವ 5.5 ಲಕ್ಷ ಕೋಟಿ ನಷ್ಟಕ್ಕೆ ಹೋಲಿಸಿದರೆ, ಲಸಿಕೆಗೆ ತಗುಲಲಿರುವ ವೆಚ್ಚವು ಬಹಳ ಕಡಿಮೆಯೆನಿಸುತ್ತದೆ, ಎಂದು ವರದಿ ಹೇಳುತ್ತದೆ.

ಗಮನಾರ್ಹ ಸಂಗತಿಯೆಂದರೆ, ಯುಪಿ ಮತ್ತು ಬಿಹಾರದಂಥ ರಾಜ್ಯಗಳಲ್ಲಿ ಆದಾಯ ಖೋತಾ ಲಸಿಕೆ ಮೇಲಿನ ವೆಚ್ಚಕ್ಕಿಂತ ಕಡಿಮೆಯಾಗಿದೆ. ಹಾಗೆಯೇ, ಆದಾಯದ ನಷ್ಟವನ್ನು ಭರಿಸಲು ಕ್ಯಾಪಿಟಲ್ ವೆಚ್ಚವೆಂದು ಅಂದಾಜಿಸಿರುವ 8.8 ಲಕ್ಷ ಕೋಟಿ ರೂ.ಗಳಲ್ಲಿ ಮಹತ್ತರದ ರೋಲ್ ಬ್ಯಾಕ್ ಮಾಡುವ ಸಾಧ್ಯತೆಯೂ ಇದೆ ಎಂದು ವರದಿ ಹೇಳುತ್ತದೆ. ಇದು ಜಿಡಿಪಿ ನಷ್ಟವನ್ನು ಹೆಚ್ಚಿಸುವುದು ನಿಶ್ಚಿತ. ಹಾಗೆಯೇ, ಲಸಿಕೆಗೆ ಹಣ ಪಾವತಿಯನ್ನು ಭಾರತೀಯ ಕರೆನ್ಸಿ ರೂಪಾತಿಗಲ್ಲಿ ಮಾಡಲಿರುವುದರಿಂದ ವಿದೇಶೀ ಮೂಲದ ಹೂಡಿಕೆದಾರರು ಭಾರತದಲ್ಲಿ ಇನ್ವೆಸ್ಟ್​ ಮಾಡುವ ಉತ್ಸಾಹ ತೋರಲಿದ್ದಾರೆ ಎಂದು ವರದಿ ಹೇಳುತ್ತದೆ.

ಕಳೆದೊಂದು ವಾರದ ಅವಧಿಯ ಸರಾಸರಿಯನ್ನು ನೋಡಿದಲ್ಲಿ, ಕೊವಿಡ್-19 ಎರಡನೇ ಅಲೆಯ ತೀವ್ರತೆ ಕ್ರಮೇಣ ತಗ್ಗುತ್ತಿರುವುದು ಅದರ ಗರಿಷ್ಠ ಪ್ರಮಾಣದ ಭೀತಿ ಮಾಯವಾಗಿರುವುದನ್ನು ಸೂಚಿಸುತ್ತದೆ ಎಂದು ವರದಿ ಹೇಳುತ್ತದೆ. ಅಲ್ಲದೆ, ಸೋಕಿನಿಂದ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆಯೂ ದಿನೇದಿನೆ ಹೆಚ್ಚುತ್ತಿದ್ದು ಹೊಸ ಪ್ರಕರಣಗಳು ಮತ್ತು ಚೇತರಿಸಿಕೊಂಡಿರುವವರ ಸಂಖ್ಯೆಯ ಅಂತರ ದೊಡ್ಡದಾಗುತ್ತಿದೆ.

ಆದರೆ, ಗ್ರಾಮೀಣ ಭಾಗದ ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ದಿಗಿಲು ಮಾಡಿಸುತ್ತಿದೆ. ಏಪ್ರಿಲ್ ತಿಂಗಳ ಅಂತ್ಯದಲ್ಲಿ ಶೇಕಡಾ 45.2ರಷ್ಟಿದ್ದ ಸೋಂಕಿತರ ಪ್ರಮಾಣ ಇತ್ತೀಚಿನ ಮಾಹಿತಿ ಪ್ರಕಾರ ಶೇ 52.9 ತಲುಪಿದೆ. ಮೊದಲ ಅಲೆಯಲ್ಲಿ ಗರಿಷ್ಠ ಪ್ರಮಾಣವಾಗಿದ್ದ ಶೇ 53.7ಕ್ಕಿಂತ ಇದು ಕೊಂಚ ಕಡಿಮೆಯಿದೆ, ಆದರೆ ಕಳೆದ ಸೆಪ್ಟಂಬರ್​ಗೆ ಹೋಲಿಸಿದರೆ, ಆಂಧ್ರ ಪ್ರದೇಶ, ಬಿಹಾರ, ಕರ್ನಾಟಕ, ತಮಿಳು ನಾಡು, ಉತ್ತರಾಖಂಡ್ ಮತ್ತು ಪಶ್ಚಿಮ ಬಂಗಾಳ ಮೊದಲಾದ ರಾಜ್ಯಗಳಲ್ಲಿ ಪರಸ್ಥಿತಿ ಸ್ವಲ್ಪ ಉತ್ತಮವಾಗಿದೆ. ಈ ರಾಜ್ಯಗಳಲ್ಲಿ ಮೊದಲ ಅಲೆಯ ಗರಿಷ್ಠ ಪ್ರಮಾಣ ಎರಡನೇ ಅಲೆಯ ಮೇ ತಿಂಗಳಲ್ಲಿ ಇದ್ದ ಪ್ರಮಾಣಕ್ಕಿಂತ ಜಾಸ್ತಿಯಿತ್ತು.

ಆದರೆ, ಕರ್ನಾಟಕ, ಗೋವಾ, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ, ರಾಜಸ್ತಾನ ಮತ್ತು ಒಡಿಶಾ ರಾಜ್ಯಗಳಲ್ಲಿ ಟೆಸ್ಟಿಂಗ್ ಪ್ರಮಾಣ ಕಮ್ಮಿ ಮತ್ತು ಪಾಸಿಟಿವಿಟಿ ಪ್ರಮಾಣ ಹೆಚ್ಚಿರುವುದು ಚಿಂತೆಯ ವಿಷಯವಾಗಿದೆ ಎಂದು ಎಸ್​ಬಿಐ ತನ್ನ ವರದಿಯಲ್ಲಿ ಹೇಳಿದೆ. ಸದರಿ ರಾಜ್ಯಗಳಲ್ಲಿ ಲಾಕ್​ಡೌನ್ ವಿಸ್ತರಿಸಿರುವುದು ಆರ್ಥಿಕತೆ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ. ಎಸ್​ಬಿಐ ಬಿಸಿನೆಸ್ ಚಟುವಟಿಕೆ ಸೂಚ್ಯಂಕವು ಮೇ 17 ವಾರಾಂತ್ಯಕ್ಕೆ 62.2 ಕ್ಕೆ ಕುಸಿದಿದ್ದು ಇದು ಮೇ 25, 2020ರಿಂದ ಇಲ್ಲಿಯವರೆಗಿನ ಕನಿಷ್ಠ ಸೂಚ್ಯಂಕವಾಗಿದೆ

‘ಹಾಗೆಯೇ, ಲಸಿಕೆಗಳ ವಿವಿಧ ಹಂತಗಳ ಬೆಳವಣಿಗೆಯನ್ನು ನಾವು ಗಮನಿದರೆ, 15 ಲಸಿಕೆಗಳಿಗೆ ತುರ್ತು ಬಳಕೆಯ ಅನುಮೋದನೆ ನೀಡಲಾಗಿದೆ, 15 ಕ್ಯಾಂಡಿಡೇಟ್​ಗಳು 1, 2 ಮತ್ತ 3ನೇ ಹಂತದ ಬೆಳವಣಿಗೆಯಲ್ಲಿವೆ ಮತ್ತು ನಾಲ್ಕು ರೆಗ್ಯುಲೇಟರಿ ಪರಶೀಲನೆ ಹಂತದಲ್ಲಿವೆ,’ ಎಂದು ವರದಿ ಹೇಳುತ್ತದೆ. ಈ ಹಿನ್ನೆಲೆಯಲ್ಲಿ ಭಾರತದ ಕೆಲ ರಾಜ್ಯಗಳು ಲಸಿಕೆಯನ್ನು ಪಡೆದುಕೊಳ್ಳಲು ಜಾಗತಿಕ ಟೆಂಡರ್​ಗಳನ್ನು ಕರೆಯುತ್ತಿವೆ. ಕೇಂದ್ರ ಸರ್ಕಾರವೂ ಆರ್​ಎನ್​ಎ ಟೆಕ್ನಾಲಜಿ ಹೊಂದಿರುವ ಫೈಜರ್, ಮೊಡೆರ್ನಾ, ಜಾನ್ಸೆನ್ ಫಾರ್ಮಾಸ್ಯೂಟಿಕ್ಸ್ ಮೊದಲಾದ ಕಂಪನಿಗಳೊಂದಿಗೆ ಲಸಿಕೆ ಸರಬರಾಜು ಮಾಡುವ ಕುರಿತು ಮಾತುಕತೆ ನಡೆಸುತ್ತಿದೆ. ಯುನಿಸೆಫ್​ನಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ ಆರ್​ಎನ್​ಎ ಟೆಕ್ನಾಲಜಿಯ 3.9 ಬಿಲಿಯನ್ ಲಸಿಕೆ ಡೋಸುಗಳ ಪೈಕಿ 2.69 ಬಿಲಿಯನ್ ಡೋಸ್​ಗಳನ್ನು ಇತರ ರಾಷ್ಟ್ರಗಳು ಖರೀದಿಸಿವೆ.

ಇದನ್ನೂ ಓದಿ: 18-44 Vaccination in Karnataka: ಮೇ 22ರಿಂದಲೇ 18 ರಿಂದ 44 ವರ್ಷದವರಿಗೆ ಕೊವಿಡ್ ಲಸಿಕೆ; ಕೊವಿಡ್ ಸೇನಾನಿಗಳಿಗೆ ಮೊದಲ ಆದ್ಯತೆ