ಕೇವಲ 899ರೂ.ಗೆ ಒಂದು ಬದಿ ಪ್ರಯಾಣ; ವಿಶೇಷ ಕೊಡುಗೆ ಘೋಷಿಸಿದ ಸ್ಪೈಸ್​ಜೆಟ್​

2021ರ ಎಪ್ರಿಲ್ 1ರಿಂದ ಸೆಪ್ಟೆಂಬರ್ 30ರವರೆಗಿನ ಪ್ರಯಾಣವನ್ನು ಮುಂಚಿತವಾಗಿ ಬುಕ್ ಮಾಡುವ ಮೂಲಕ ಪ್ರಯಾಣಿಕರು ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಟಿಕೆಟ್ ಕಾಯ್ದಿರಿಸಲು ಜನವರಿ 17 ಕೊನೆಯ ದಿನಾಂಕವಾಗಿದೆ.

ಕೇವಲ 899ರೂ.ಗೆ ಒಂದು ಬದಿ ಪ್ರಯಾಣ; ವಿಶೇಷ ಕೊಡುಗೆ ಘೋಷಿಸಿದ ಸ್ಪೈಸ್​ಜೆಟ್​
ಸಾಂಕೇತಿಕ ಚಿತ್ರ
Updated By: Lakshmi Hegde

Updated on: Jan 14, 2021 | 11:55 AM

ದೆಹಲಿ: ಕೊರೊನಾ ಸೋಂಕಿನಿಂತ ತತ್ತರಿಸಿದ್ದ ವಿಮಾನಯಾನ ಕ್ಷೇತ್ರ ಮತ್ತೆ ಚೇತರಿಸಿಕೊಳ್ಳುವ ಪ್ರಯತ್ನವಾಗಿ ಸ್ಪೈಸ್​ಜೆಟ್ ಹೊಸ ಕೊಡುಗೆ ಘೋಷಿಸಿದೆ. ಕೇವಲ 899ರೂ.ಗೆ ಒಂದು ಬದಿಯ ಪ್ರಯಾಣವನ್ನು ಕಾಯ್ದಿರಿಸುವ ‘ಬುಕ್ ಬೇಫಿಕರ್ ಸೇಲ್’ ಯೋಜನೆಯನ್ನು ಸ್ಪೈಸ್​ಜೆಟ್  ಘೋಷಿಸಿದೆ.

2021ರ ಎಪ್ರಿಲ್ 1ರಿಂದ ಸೆಪ್ಟೆಂಬರ್ 30ರವರೆಗಿನ ಪ್ರಯಾಣವನ್ನು ಮುಂಚಿತವಾಗಿ ಬುಕ್ ಮಾಡುವ ಮೂಲಕ ಪ್ರಯಾಣಿಕರು ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಟಿಕೆಟ್ ಕಾಯ್ದಿರಿಸಲು ಜನವರಿ 17 ಕೊನೆಯ ದಿನಾಂಕವಾಗಿದೆ.

ಒಂದು ವೇಳೆ ಪ್ರಯಾಣದ ದಿನಾಂಕ ಬದಲಾದಲ್ಲಿ ಅಥವಾ ಪ್ರಯಾಣ ರದ್ದಾದಲ್ಲಿ ಒಂದು ಬದಿ ಪ್ರಯಾಣದ ಹಣವನ್ನು ಮರುಪಾವತಿಸುವುದಾಗಿಯೂ ಸಂಸ್ಥೆ ಹೇಳಿದೆ. ಆದರೆ ಕನಿಷ್ಠ 21 ದಿನಗಳ ಮುನ್ನ ಪ್ರಯಾಣಿಕರು ಪ್ರಯಾಣ ಖಚಿತಪಡಿಸಬೇಕಿದೆ.

ಅಲ್ಲದೇ ಗರಿಷ್ಠ 1000 ವರೆಗಿನ ಉಡುಗೊರೆ ಕೂಪನ್​ಗಳನ್ನು ಸಹ ನೀಡುವುದಾಗಿ ಸ್ಪೈಸ್​ಜೆಟ್ ತಿಳಿಸಿದೆ. ಈ ಕೊಡುಗೆ ಫೆಬ್ರವರಿ 28 ರವರೆಗೆ ಲಭ್ಯವಿದ್ದು, ಎಪ್ರಿಲ್ 1ರಿಂದ ಸೆಪ್ಟೆಂಬರ್ 30ರವರೆಗಿನ ಪ್ರಯಾಣದಲ್ಲಿ ಕನಿಷ್ಠ 5500 ಬೆಲೆಯ ಟಿಕೆಟ್ ಖರೀದಿಗೆ ಕೂಪನ್ ಕಾರ್ಡ್​ ಬಳಸಬಹುದು ಎಂದು ಸ್ಫೈಸ್​​ಜೆಟ್ ತಿಳಿಸಿದೆ.

ಸ್ಯಾನ್​ ಫ್ರಾನ್ಸಿಸ್ಕೋ ಟು ಬೆಂಗಳೂರು; 17 ಗಂಟೆಗಳ ನಾನ್​ಸ್ಟಾಪ್ ವಿಮಾನಯಾನದ ನೇತೃತ್ವ ವಹಿಸಿದ ಏರ್ ಇಂಡಿಯಾ ಮಹಿಳಾ ಪೈಲಟ್ ತಂಡ