ನವದೆಹಲಿ, ಆಗಸ್ಟ್ 5: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Dehli) ಶನಿವಾರ ರಾತ್ರಿ ಪ್ರಬಲ ಭೂಕಂಪನ (Earthquake) ಅನುಭವವಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ. ಜಮ್ಮು ಮತ್ತು ಕಾಶ್ಮೀರದ (Jammu Kashmir) ಗುಲ್ಮಾರ್ಗ್‌ನಲ್ಲಿ ಇಂದು ಮುಂಜಾನೆ 5.2 ತೀವ್ರತೆಯ ಭೂಕಂಪ ಸಂಭವಿಸಿದ ಬೆನ್ನಲೇ ಈ ಕಂಪನ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 5.5 ಭೂಕಂಪದ ತೀವ್ರತೆ ದಾಖಲಾಗಿದೆ.
ಇದೇ ವೇಳೆ ಚಂಡೀಗಢ ಮತ್ತು ಪಂಜಾಬ್ನ ಹಲವು ಪ್ರದೇಶಗಳಲ್ಲಿ ಭೂಕಂಪನದಿಂದ ಭೂಮಿ ನಡುಗಿದೆ. ಇದರ ಕೇಂದ್ರವನ್ನು ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್ ಜಿಲ್ಲೆಯಿಂದ 89 ಕಿಮೀ ಉತ್ತರ-ವಾಯುವ್ಯಕ್ಕೆ ಹೇಳಲಾಗುತ್ತಿದೆ. ಇದೇ ವೇಳೆ, ಅಫ್ಘಾನಿಸ್ತಾನ, ಪಾಕಿಸ್ತಾನದಲ್ಲೂ ಭೂಕಂಪವಾಗಿದೆ. ಆಫ್ಘನ್ನ ಹಿಂದುಕುಶ್ ಪರ್ವತದಲ್ಲಿ ಭೂಕಂಪದ ಕೇಂದ್ರ ಬಿಂದುವಾಗಿದೆ. ಭೂಮಿ ಕಂಪಿಸಿದ ಹಿನ್ನೆಲೆ ಜನರು ಭಯದಿಂದ ಮನೆಗಳಿಂದ ಹೊರಕ್ಕೆ ಓಡಿ ಬಂದಿದ್ದಾರೆ.
ಇಂದು ಮುಂಜಾನೆ 8:36 ಕ್ಕೆ ಗುಲ್ಮಾರ್ಗ್‌ದಲ್ಲಿ 5.2 ತೀವ್ರತೆಯ ಭೂಕಂಪ ಸಂಭವಿಸಿತ್ತು. ಭೂಕಂಪದ ಕೇಂದ್ರಬಿಂದು ಗುಲ್ಮಾರ್ಗ್‌ನಿಂದ ಸುಮಾರು 184 ಕಿಮೀ ದೂರದಲ್ಲಿ ಭೂಮಿಯ ಮೇಲ್ಮೈಯಿಂದ 129 ಕಿಮೀ ಕೆಳಗೆ ಇತ್ತು. ಆದರೆ, ಯಾವುದೇ ಹಾನಿಯ ಬಗ್ಗೆ ವರದಿಯಾಗಿಲ್ಲ.
ಇದನ್ನೂ ಓದಿ: Andaman Earthquake: ಅಂಡಮಾನ್-ನಿಕೋಬಾರ್ ದ್ವೀಪದಲ್ಲಿ ಎರಡು ದಿನಗಳಲ್ಲಿ ಎರಡನೇ ಬಾರಿ ಭೂಕಂಪ, 4.3 ತೀವ್ರತೆ ದಾಖಲು
ಅಧಿಕಾರಿಗಳ ಪ್ರಕಾರ, ಈ ವರ್ಷದ ಜೂನ್‌ನಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ವಿವಿಧ ತೀವ್ರತೆಯ 12 ಕಂಪನಗಳು ಸಂಭವಿಸಿವೆ. ಜುಲೈ 10 ರಂದು ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ 4.9 ತೀವ್ರತೆಯ ಭೂಕಂಪ ಸಂಭವಿಸಿತ್ತು. ಜೂನ್ 13 ರಂದು, ದೋಡಾ ಜಿಲ್ಲೆಯಲ್ಲಿ ಸಂಭವಿಸಿದ 5.4 ತೀವ್ರತೆಯ ಭೂಕಂಪನದಿಂದ ಮನೆಗಳು ಸೇರಿದಂತೆ ಹತ್ತಾರು ಕಟ್ಟಡಗಳು ಬಿರುಕುಗೊಂಡಿದ್ದವು.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:00 pm, Sat, 5 August 23