‘ಟಿಕ್ ಟಾಕ್’ ಚಟಕ್ಕೆ ಚಟ್ಟವೇರಿದ ಯುವಕ; ನಂದಿತು ಆ ಯುವಕನ ಬಾಳು

|

Updated on: Sep 23, 2019 | 11:03 AM

ಇತ್ತೀಚಿನ ದಿನಗಳಲ್ಲಿ ಎಂತಹವರ ಮೊಬೈನಲ್ಲೂ ‘ಟಿಕ್​ ಟಾಕ್’ ಇದ್ದೇ ಇರುತ್ತೆ. ಅದ್ರಲ್ಲೂ ಹೆಚ್ಚಾಗಿ ‘ಟಿಕ್​ ಟಾಕ್’​ ಗೀಳಿಗೆ ಯುವಕರೇ ಅಡಿಕ್ಟ್​ ಆಗಿರುವುದು ಬೇಸರದ ಸಂಗತಿಯಾಗಿದೆ. ಯುವಜನತೆಯನ್ನು ಸಾಕಷ್ಟು ಕಾಡಿರುವ ಈ ಟಿಕ್​ ಟಾಕ್​ನಿಂದ  ಎಷ್ಟೋ ತಂದೆ-ತಾಯಂದಿರು ತಮ್ಮ ಮಕ್ಕಳನ್ನು ಕಳೆದುಕೊಳ್ಳುತ್ತಿದ್ದಾರೆ. ಮೊನ್ನೆಯಷ್ಟೇ ಕೋಲಾರದ ಯುವತಿಯೊಬ್ಬಳು ಟಿಕ್​ ಟಾಕ್ ಮಾಡಲು ಹೋಗಿ ಪಕ್ಕದಲ್ಲಿದ್ದ ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಳು. ಇದೀಗ ತೆಲಂಗಾಣದ ಗೋನಗುಪ್ಪಲದ ಕಪ್ಪಲ ಬಳಿ ಭಾರೀ ಪ್ರವಾಹಕ್ಕೆ ಕೊಚ್ಚಿ ಹೋಗಿ ಯುವಕ ಮೃತಪಟ್ಟಿದ್ದಾನೆ. ಇತ್ತೀಚೆಗಷ್ಟೇ ಮೂವರು ಯುವಕರು […]

‘ಟಿಕ್ ಟಾಕ್’ ಚಟಕ್ಕೆ ಚಟ್ಟವೇರಿದ ಯುವಕ; ನಂದಿತು ಆ ಯುವಕನ ಬಾಳು
Follow us on

ಇತ್ತೀಚಿನ ದಿನಗಳಲ್ಲಿ ಎಂತಹವರ ಮೊಬೈನಲ್ಲೂ ‘ಟಿಕ್​ ಟಾಕ್’ ಇದ್ದೇ ಇರುತ್ತೆ. ಅದ್ರಲ್ಲೂ ಹೆಚ್ಚಾಗಿ ‘ಟಿಕ್​ ಟಾಕ್’​ ಗೀಳಿಗೆ ಯುವಕರೇ ಅಡಿಕ್ಟ್​ ಆಗಿರುವುದು ಬೇಸರದ ಸಂಗತಿಯಾಗಿದೆ. ಯುವಜನತೆಯನ್ನು ಸಾಕಷ್ಟು ಕಾಡಿರುವ ಈ ಟಿಕ್​ ಟಾಕ್​ನಿಂದ  ಎಷ್ಟೋ ತಂದೆ-ತಾಯಂದಿರು ತಮ್ಮ ಮಕ್ಕಳನ್ನು ಕಳೆದುಕೊಳ್ಳುತ್ತಿದ್ದಾರೆ.

ಮೊನ್ನೆಯಷ್ಟೇ ಕೋಲಾರದ ಯುವತಿಯೊಬ್ಬಳು ಟಿಕ್​ ಟಾಕ್ ಮಾಡಲು ಹೋಗಿ ಪಕ್ಕದಲ್ಲಿದ್ದ ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಳು. ಇದೀಗ ತೆಲಂಗಾಣದ ಗೋನಗುಪ್ಪಲದ ಕಪ್ಪಲ ಬಳಿ ಭಾರೀ ಪ್ರವಾಹಕ್ಕೆ ಕೊಚ್ಚಿ ಹೋಗಿ ಯುವಕ ಮೃತಪಟ್ಟಿದ್ದಾನೆ.

ಇತ್ತೀಚೆಗಷ್ಟೇ ಮೂವರು ಯುವಕರು ನಿಜಾಮಾಬಾದ್​ನ ಗೋನಗುಪ್ಪಲದ ಚೆಕ್​ ಡ್ಯಾಂ ಬಳಿ ಟಿಕ್ ಟಾಕ್ ಮಾಡುತ್ತಿದ್ದರು, ಈ ವೇಳೆ ಪ್ರವಾಹಕ್ಕೆ ಸಿಲುಕಿ ಮೂವರು ಯುವಕರೂ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಈ ವೇಳೆ ಸ್ಥಳೀಯರು ಇಬ್ಬರನ್ನು ರಕ್ಷಿಸಿದ್ದಾರೆ. ಆದ್ರೆ ದಿನೇಶ್​ ಪ್ರವಾಹದಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾನೆ. ಬಳಿಕ ಸ್ಥಳೀಯ ಪೊಲೀಸರು ಯುವಕನ ಮೃತದೇಹವನ್ನು ಹೊರತೆಗೆದಿದ್ದಾರೆ.

Published On - 7:10 pm, Sun, 22 September 19