ಬೆಂಗಳೂರಿನಲ್ಲಿ ಹಲವು ತಿಂಗಳುಗಳ ಕಾಲ ಉಗ್ರರು ವಾಸವಿದ್ರು ಎಂಬ ಸ್ಫೋಟಕ ಮಾಹಿತಿ ಇದೀಗ ಬೆಳಕಿಗೆ ಬಂದಿದೆ. ಸೋಲದೇವನಹಳ್ಳಿಯ ಬಾಡಿಗೆ ಮನೆಯಲ್ಲಿ 5ಕ್ಕೂ ಹೆಚ್ಚು ಉಗ್ರರು ವಾಸವಿದ್ರು ಎಂಬ ಭಯಾನಕ ಸತ್ಯವನ್ನ ವಿಚಾರಣೆ ವೇಳೆ ನಜೀರ್ ಹೊರಹಾಕಿದ್ದಾನೆ.
ಅಗರ್ತಲದಲ್ಲಿ ಆ.26ರಂದು ನಜೀರ್ ಶೇಖ್ ನನ್ನು ಎನ್ ಐಎ ತಂಡ ಬಂಧಿಸಿತ್ತು. ಬಂಧಿತ ನಜೀರ್ ಬಾಂಗ್ಲಾದೇಶದ ನಿಷೇಧಿತ ಉಗ್ರ ಸಂಘಟನೆ ಜಮಾತ್ ಉಲ್ ಮುಜಾಹಿದ್ದೀನ್ ಸದಸ್ಯನಾಗಿದ್ದ. ಜೂನ್ 26ರಂದು ಅನುಮಾನಾಸ್ಪದ ಮೇರೆಗೆ ದೊಡ್ಡಬಳ್ಳಾಪುರದ ಮಸೀದಿಯಲ್ಲಿ ಹಬೀಬುರ್ ನನ್ನು ಎನ್ ಐಎ ಬಂಧಿಸಿತ್ತು. ಹಬೀಬುರ್ ಬಂಧನ ಬಳಿಕ ಉಗ್ರರು ರಾಜ್ಯ ತೊರೆದು ಬೇರೆ ಕಡೆ ತೆರಳಿದ್ದಾರೆ ಎಂದು ಸ್ಫೋಟಕ ಮಾಹಿತಿಯನ್ನು ನಜೀರ್ ಬಾಯ್ಬಿಟ್ಟಿದ್ದಾನೆ.
Published On - 4:40 pm, Fri, 30 August 19