Tesla: ಭಾರತದಲ್ಲಿ ಕಾರು ಉತ್ಪಾದನಾ ಘಟಕ ಸ್ಥಾಪನೆಗೆ ಟೆಸ್ಲಾ ಪ್ರಸ್ತಾಪ

|

Updated on: May 17, 2023 | 10:46 PM

ದೇಶೀಯ ಮಾರಾಟ ಮತ್ತು ರಫ್ತುಗಾಗಿ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸಲು ಭಾರತದಲ್ಲಿ ಘಟಕ ಒಂದನ್ನು ಸ್ಥಾಪಿಸಲು ಟೆಸ್ಲಾ ಇಂಕ್​ ಪ್ರಸ್ತಾಪಿಸಿದೆ ಎಂದು ಮೂಲಗಳು ಹೇಳಿವೆ.

Tesla: ಭಾರತದಲ್ಲಿ ಕಾರು ಉತ್ಪಾದನಾ ಘಟಕ ಸ್ಥಾಪನೆಗೆ ಟೆಸ್ಲಾ ಪ್ರಸ್ತಾಪ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ವಿಶ್ವದ ಅತಿದೊಡ್ಡ ಶ್ರೀಮಂತ ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಸಂಸ್ಥೆ (Tesla) ತನ್ನ ವಿದ್ಯುತ್​ ಕಾರನ್ನು ಭಾರತದಲ್ಲಿ ಪರಿಚಯಿಸಲು ಮುಂದಾಗಿದ್ದು, ದೇಶೀಯ ಮಾರಾಟ ಮತ್ತು ರಫ್ತುಗಾಗಿ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸಲು ಭಾರತದಲ್ಲಿ ಘಟಕ ಒಂದನ್ನು ಸ್ಥಾಪಿಸಲು ಟೆಸ್ಲಾ ಇಂಕ್​ ಪ್ರಸ್ತಾಪಿಸಿದೆ ಎಂದು ಕಾರು ತಯಾರಕರು ಬುಧವಾರ ಸರ್ಕಾರಿ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ಮೂಲಕಗಳು ಹೇಳಿವೆ. ಮೊದಲ ಹಂತದಲ್ಲಿ ಟೆಸ್ಲಾ ಕಂಪೆನಿಯು ಇದಕ್ಕೆ ಸಂಬಂಧಿಸಿದ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಬೆಂಗಳೂರಿನಲ್ಲಿ ತೆರೆಯಲು ಯೋಚನೆ ಮಾಡಿದೆ. ಭಾರತಕ್ಕೆ ಎಲೆಕ್ರ್ಟಿಕ್​ ಕಾರ್ ತರಬೇಕು, ಅದರ ನಿರ್ಮಾಣ ಭಾರತದಲ್ಲೇ ಆಗಬೇಕು ಎಂದು ಪದೇ ಪದೇ ಪ್ರಸ್ತಾಪಿಸಲಾಗುತ್ತಿತ್ತು.

ಅದರಂತೆ ಕಾರುಗಳ ಮೇಲಿನ ಆಮದು ತೆರಿಗೆಯನ್ನು ಕಡಿಮೆ ಮಾಡಲು ಕಳೆದ ವರ್ಷ ಟೆಸ್ಲಾ ವಿನಂತಿ ಮಾಡತ್ತು. ಆದರೆ ಭಾರತ ಅದನ್ನು ನಿರಾಕರಿಸಿತ್ತು. ಅದರ ಬೆನ್ನೆಲೆ ಈ ಪ್ರಸ್ತಾಪ ಬಂದಿದೆ ಎನ್ನಲಾಗುತ್ತಿದೆ. ನಮ್ಮಲಿಗೆ ಬಂದು ಕಾರು ತಯಾರಿಸುವಂತೆ ಭಾರತ ಈ ಹಿಂದೆ ಹೇಳಿತ್ತು. ಆದರೆ ಟೆಸ್ಲಾ ಮೊದಲು ಆಮದು ಮೂಲಕ ಮಾರುಕಟ್ಟೆ ಬಗ್ಗೆ ತಿಳಿದುಕೊಳ್ಳಲು ಬಯಸಿತ್ತು. ಬಳಿಕ ಈ ಕುರಿತಾಗಿ ಮಾತುಕತೆ ಇಲ್ಲಿಗೆ ನಿಂತ್ತಿತ್ತು.

ಇದನ್ನೂ ಓದಿ: PLI scheme: ಮೋದಿ ಸರ್ಕಾರದಿಂದ ಐಟಿ ಕ್ಷೇತ್ರಕ್ಕೆ ಪಿಎಲ್​ಐ ಯೋಜನೆಯಡಿ 17,000 ಕೋಟಿ ರೂ; ಅಶ್ವಿನಿ ವೈಷ್ಣವ್

ಸದ್ಯ ಟೆಸ್ಲಾ ಭಾರತೀಯ ಅಧಿಕಾರಿಗಳೊಂದಿಗೆ ಕಡಿಮೆ ಆಮದು ತೆರಿಗೆಗಳ ಬಗ್ಗೆ ಚರ್ಚಿಸದಿದ್ದರೂ, ಸ್ಥಳ ಅಥವಾ ಹೂಡಿಕೆಯನ್ನು ನಿರ್ದಿಷ್ಟಪಡಿಸದೆ ಹೊಸ ತಯಾರಕಾ ಘಟಕ ಸ್ಥಾಪಿಸಲು ಪ್ರಸ್ತಾಪಿಸಿದೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಅಭಿಯಾನದಡಿ ಸ್ಥಳೀಯವಾಗಿ ಕಾರು ಉತ್ಪಾದನೆಗೆ ಹೆಚ್ಚಿನ ಮಹತ್ವ ನೀಡುವುದು ಕೇಂದ್ರ ಸರ್ಕಾರದ ಆದೇಶವಾಗಿದೆ. ಆ ಮೂಲಕ ಇಂತಹ ಕಂಪನಿಗಳನ್ನು ಆಕರ್ಷಿಸಲಾಗುತ್ತಿದೆ.

ಇದನ್ನೂ ಓದಿ: ರಷ್ಯಾದ ತೈಲ ಖರೀದಿಸಿದ ಭಾರತದ ವಿರುದ್ಧ ಕ್ರಮಕ್ಕಾಗಿ ಯುರೋಪಿಯನ್ ಒಕ್ಕೂಟದ ಕರೆಗೆ ಖಡಕ್ ಉತ್ತರ ನೀಡಿದ ಎಸ್ ಜೈಶಂಕರ್

ಹಿರಿಯ ಟೆಸ್ಲಾ ಕಾರ್ಯನಿರ್ವಾಹಕರು ಈ ವಾರ ಭಾರತಕ್ಕೆ ಭೇಟಿ ನೀಡಿದ್ದು, ಬಿಡಿಭಾಗಗಳ ಸ್ಥಳೀಯ ಸೋರ್ಸಿಂಗ್ ಮತ್ತು ಇತರೆ ವಿಷಯಗಳ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸಲಿದ್ದಾರೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ಮಂಗಳವಾರ ವರದಿ ಮಾಡಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.