
ಥಾಣೆ, ಡಿಸೆಂಬರ್ 07: ಕೌಟುಂಬಿಕ ನ್ಯಾಯಾಲಯದ ಆವರಣದಲ್ಲಿ ಮಹಿಳೆಯೊಬ್ಬರ ಮೇಲೆ ಇಬ್ಬರು ಯೂಟ್ಯೂಬರ್ಗಳು ಸಾಮೂಹಿಕ ಅತ್ಯಾಚಾರ(Rape)ವೆಸಗಿರುವ ಘಟನೆ ಥಾಣೆಯಲ್ಲಿ ನಡೆದಿದೆ. ಮಹಿಳೆಗೆ ಕೇಕ್‌ನಲ್ಲಿ ನಿದ್ರಾಜನಕ ಮಾತ್ರೆ ಬೆರೆಸಿ ಆಕೆಗೆ ತಿನ್ನಿಸಿ ಎಚ್ಚರ ತಪ್ಪಿಸಿದ್ದರು.ಆರೋಪಿಗಳನ್ನು ಹಿರಾಲಾಲ್ ಕೇದಾರ್ ಮತ್ತು ರವಿ ಪವಾರ್ ಎಂದು ಗುರುತಿಸಲಾಗಿದೆ.
ಕೇದಾರ್ ನನ್ನು ಬಂಧಿಸಲಾಗಿದ್ದು, ಪವಾರ್ ಪರಾರಿಯಾಗಿದ್ದಾನೆ. ಕಳೆದ ವರ್ಷ ಆಗಸ್ಟ್ 25 ರಂದು ಈ ಘಟನೆ ನಡೆದಿತ್ತು. ಪದೇ ಪದೇ ಆಕೆಯನ್ನು ಬ್ಲಾಕ್ ಮೇಲ್ ಮಾಡಲು ಪ್ರಯತ್ನಿಸಿದ ನಂತರ, ಮಹಿಳೆ ಅಂತಿಮವಾಗಿ ಡಿಸೆಂಬರ್ 5 ರಂದು ಥಾಣೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾರಿನೊಳಗೆ ಮಹಿಳೆಯ ಮೇಲೆ ಇಬ್ಬರು ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಥಾಣೆ ನಗರ ಪೊಲೀಸ್ ಠಾಣೆಯಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಥಾಣೆ ಕೌಟುಂಬಿಕ ನ್ಯಾಯಾಲಯದ ಆವರಣದಲ್ಲಿ ಈ ಹಲ್ಲೆ ನಡೆದಿದ್ದು, ಮಹಿಳೆಗೆ ಕೇಕ್‌ನಲ್ಲಿ ಮಾದಕ ದ್ರವ್ಯ ಬೆರೆಸಿ , ನಂತರ ಹಿರಾಲಾಲ್ ಕೇದಾರ್ ಮತ್ತು ರವಿ ಪವಾರ್ ಎಂಬುವವರು ಕಾರಲ್ಲಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಕರಣದ ಆರೋಪಿಗಳು ಯೂಟ್ಯೂಬರ್ ಎಂದು ಹೇಳಲಾಗಿದ್ದು, ಅವರ ವಿರುದ್ಧ ಈಗಾಗಲೇ ಸುಲಿಗೆಗೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿವೆ.
ಸುಮಾರು ಒಂದೂವರೆ ವರ್ಷದ ಹಿಂದೆ ಈ ಹಲ್ಲೆ ನಡೆದಿತ್ತು, ಆದರೆ ಆ ಮಹಿಳೆ ಭಯಭೀತಳಾಗಿದ್ದಳು ಮತ್ತು ಯಾರಿಗೂ, ತನ್ನ ಕುಟುಂಬದವರಿಗೂ ಸಹ ಹೇಳಿರಲಿಲ್ಲ. ಆದಾಗ್ಯೂ, ಕಳೆದ ತಿಂಗಳಿನಿಂದ, ಆರೋಪಿಗಳಲ್ಲಿ ಒಬ್ಬಾತ ಆಕೆಯನ್ನು ಮತ್ತೆ ಲೈಂಗಿಕಕ್ರಿಯೆಗೆ ಒತ್ತಾಯಿಸಿದ್ದ ಎಂದು ಆರೋಪಿಸಲಾಗಿದೆ. ಈ ನಿರಂತರ ಕಿರುಕುಳದ ನಂತರ, ಮಹಿಳೆ ಅಂತಿಮವಾಗಿ ಪೊಲೀಸ್ ದೂರು ದಾಖಲಿಸಿದ್ದಾರೆ.
ಮತ್ತಷ್ಟು ಓದಿ: 7ನೇ ತರಗತಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ: SP ಬಿಚ್ಚಿಟ್ಟ ಶಾಕಿಂಗ್ ವಿಚಾರ
ಮತ್ತೊಂದು ಘಟನೆ
ಪುರಿಯಲ್ಲಿ ಗೆಳೆಯನ ಎದುರೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ
ಪುರಿಯಲ್ಲಿ ಗೆಳೆಯ ಎದುರೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ(Rape)ವೆಸಗಲಾಗಿದೆ.ಒಡಿಶಾದ ಪುರಿ ಜಿಲ್ಲೆಯ ದೇವಸ್ಥಾನದ ಬಳಿ ಘಟನೆ ನಡೆದಿದೆ. ಯುವತಿ ದೇವಸ್ಥಾನಕ್ಕೆ ಭೇಟಿಕೊಟ್ಟು ಗೆಳೆಯನ ಜತೆ ಬೀಚ್‌ಗೆ ಹೋದಾಗ ಕೆಲವು ಕಿಡಿಗೇಡಿಗಳು ಅವರನ್ನು ಹಿಂಬಾಲಿಸಿದ್ದರು. ಇಬ್ಬರ ವಿಡಿಯೋ ಚಿತ್ರೀಕರಿಸಿಕೊಂಡು ಬ್ಲ್ಯಾಕ್ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅವರು ಕೇಳಿದಷ್ಟು ಹಣವನ್ನು ಪಾವತಿಸಲು ಸಾಧ್ಯವಾಗದಿದ್ದಾಗ, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ.
ಯುವತಿಯ ಸ್ನೇಹಿತನನ್ನು ಕೂಡ ಥಳಿಸಿದ್ದಾರೆ. ಮಾಹಿತಿಯ ಪ್ರಕಾರ, ಸೆಪ್ಟೆಂಬರ್ 13 ರಂದು ಯುವತಿ ಮತ್ತು ಆಕೆಯ ಸ್ನೇಹಿತ ಬ್ರಹ್ಮಗಿರಿಯಲ್ಲಿರುವ ಮಾ ಬಾಲಿ ಹರಚಂಡಿ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಈ ಘಟನೆ ನಡೆದಿದೆ. ಪ್ರಾರ್ಥನೆ ಸಲ್ಲಿಸಿದ ನಂತರ, ಇಬ್ಬರು ಬೀಚ್‌ಗೆ ತೆರಳಿದ್ದರು, ಅಲ್ಲಿ ಆರೋಪಿಗಳು ಅವರನ್ನು ಹಿಂಬಾಲಿಸಿದ್ದರು.
ನಂತರ ಆರೋಪಿಗಳು ಇಬ್ಬರ ವಿಡಿಯೋಗಳನ್ನು ಚಿತ್ರೀಕರಿಸಿದ್ದಾರೆ, ನಂತರ ಅವರು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿದರು. ಆನ್ಲೈನ್ ವಹಿವಾಟಿನ ಮೂಲಕ 2,500 ರೂ. ಮತ್ತು 1,000 ರೂ. ನಗದು ಪಾವತಿಸಿದ್ದಾರೆ, ಆದರೆ ಆ ಮೊತ್ತ ಸಾಕಾಗಲಿಲ್ಲ. ಹೆಚ್ಚಿನ ಹಣ ನೀಡಲು ನಿರಾಕರಿಸಿದಾಗ, ಆರೋಪಿ ಮೊದಲು ಆ ವ್ಯಕ್ತಿಗೆ ಥಳಿಸಿ, ನಂತರ ಅವರ ಮುಂದೆಯೇ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ಅಪರಾಧದ ನಂತರ, ದಂಪತಿಯನ್ನು ಹತ್ತಿರದ ಅರಣ್ಯ ಪ್ರದೇಶದಲ್ಲಿ ಬಿಟ್ಟು ಹೋಗಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ