ರೈಲಿನಲ್ಲಿ ಇರುತ್ತೆ 11 ರೀತಿಯ ಹಾರ್ನ್​ಗಳು, ಪ್ರತಿ ಶಬ್ದಕ್ಕೂ ಇದೆ ವಿಭಿನ್ನ ಅರ್ಥ

|

Updated on: Jan 01, 2024 | 12:35 PM

ಕಂಫರ್ಟ್​ ದೃಷ್ಟಿಯಿಂದ ದೇಶದಲ್ಲಿ ಬಹುತೇಕ ಮಂದಿ ರೈಲು ಪ್ರಯಾಣವನ್ನೇ ಹೆಚ್ಚು ಇಷ್ಟಪಡುತ್ತಾರೆ. ರೈಲಿನ ಹಾರ್ನ್​ ಅನ್ನು ನೀವು ಹಲವು ಬಾರಿ ಕೇಳಿರುತ್ತೀರಿ, ಎಲ್ಲಾ ಸಲವೂ ಒಂದೇ ರೀತಿಯ ಹಾರ್ನ್​ ಇರುವುದಿಲ್ಲ ಎಂಬುದನ್ನು ಕೆಲವರು ಗಮನಿಸಿರಬಹುದು. ರೈಲಿನಲ್ಲಿ 11 ಬಗೆಯ ಹಾರ್ನ್​ ಇರುತ್ತದೆ ಅದಕ್ಕೆ ಬೇರೆ ಬೇರೆ ಅರ್ಥವೂ ಕೂಡ ಇರಲಿದೆ.

ರೈಲಿನಲ್ಲಿ ಇರುತ್ತೆ 11 ರೀತಿಯ ಹಾರ್ನ್​ಗಳು, ಪ್ರತಿ ಶಬ್ದಕ್ಕೂ ಇದೆ ವಿಭಿನ್ನ ಅರ್ಥ
ರೈಲು
Follow us on

ಕಂಫರ್ಟ್​ ದೃಷ್ಟಿಯಿಂದ ದೇಶದಲ್ಲಿ ಬಹುತೇಕ ಮಂದಿ ರೈಲು ಪ್ರಯಾಣವನ್ನೇ ಹೆಚ್ಚು ಇಷ್ಟಪಡುತ್ತಾರೆ. ರೈಲಿನ ಹಾರ್ನ್​ ಅನ್ನು ನೀವು ಹಲವು ಬಾರಿ ಕೇಳಿರುತ್ತೀರಿ, ಎಲ್ಲಾ ಸಲವೂ ಒಂದೇ ರೀತಿಯ ಹಾರ್ನ್​ ಇರುವುದಿಲ್ಲ ಎಂಬುದನ್ನು ಕೆಲವರು ಗಮನಿಸಿರಬಹುದು. ರೈಲಿನಲ್ಲಿ 11 ಬಗೆಯ ಹಾರ್ನ್​ ಇರುತ್ತದೆ ಅದಕ್ಕೆ ಬೇರೆ ಬೇರೆ ಅರ್ಥವೂ ಕೂಡ ಇರಲಿದೆ.

1 ಶಾರ್ಟ್​ ಹಾರ್ನ್​: ರೈಲು ನಿಲ್ದಾಣಕ್ಕೆ ಬಂದಿದೆ, ಮತ್ತು ಅದನ್ನು ಸ್ವಚ್ಛಗೊಳಿಸುವ ಸಮಯ.
2 ಶಾರ್ಟ್​ ಹಾರ್ನ್​: ಇದರರ್ಥ ರೈಲು ಈಗ ಚಲಿಸಲು ಸಿದ್ಧವಾಗಿದೆ.
3 ಶಾರ್ಟ್​ ಹಾರ್ನ್ಸ್​: ಇದರರ್ಥ ರೈಲಿನ ಲೋಕೋಪೈಲಟ್ ಇಂಜಿನ್​ನ ನಿಯಂತ್ರಣವನ್ನು ಕಳೆದುಕೊಂಡಿದೆ ಮತ್ತು ಈಗ ಗಾರ್ಡ್​ ವ್ಯಾಕ್ಯೂಮ್​ ಬ್ರೇಕ್​ನೊಂದಿಗೆ ರೈಲನ್ನು ನಿಲ್ಲಿಸಬೇಕಾಗಿದೆ.

ಮತ್ತಷ್ಟು ಓದಿ: ಮಂಗಳೂರು ಗೋವಾ ವಂದೇ ಭಾರತ್ ರೈಲು ವೇಳಾಪಟ್ಟಿ, ಪ್ರಯಾಣದ ಸಮಯ: ಇಲ್ಲಿದೆ ಪೂರ್ಣ ವಿವರ

4 ಶಾರ್ಟ್​ ಹಾರ್ನ್ಸ್​: ಈ ಹಾರ್ನ್​ ಅರ್ಥ ರೈಲಿನಲ್ಲಿ ತಾಂತ್ರಿಕ ದೋಷ ಉಂಟಾಗಿದ್ದು, ಈಗ ರೈಲು ಮುಂದೆ ಸಾಗುವುದಿಲ್ಲ.

6 ಶಾರ್ಟ್​ ಹಾರ್ನ್ಸ್​: ಲೋಕೊಪೈಲಟ್​ ಯಾವುದೇ ಅಪಾಯವನ್ನು ಗ್ರಹಿಸಿದ ಸಂದರ್ಭದಲ್ಲಿ ಈ ಹಾರ್ನ್​ ಮಾಡುತ್ತಾರೆ.

2 ಸಣ್ಣ ಮತ್ತು 1 ದೊಡ್ಡ ಹಾರ್ನ್​: ಈ ರೀತಿಯ ಹಾರ್ನ್​ ಯಾರಾದರೂ ರೈಲಿನ ಸರಪಳಿ ಎಳೆದಾಗ ಅಥವಾ ಸಿಬ್ಬಂದಿ ಒತ್ತಡ ಬ್ರೇಕ್​ ಹಾಕಿದಾಗ ಮಾಡಲಾಗುತ್ತದೆ.

ಬಹಳ ಹೊತ್ತು ಹಾರ್ನ್​ ಮಾಡುತ್ತಲೇ ಇರುವುದು: ರೈಲು ನಿರಂತರವಾಗಿ ಹಾರ್ನ್​ ಮಾಡುತ್ತಿದ್ದರೆ ಪ್ಲಾಟ್​ಫಾರ್ಮ್​ನಲ್ಲಿ ನಿಲ್ಲುವುದಿಲ್ಲ ಎಂದರ್ಥ.

ಮಧ್ಯಂತರದಲ್ಲಿ ಎರಡು ಬಾರಿ ಹಾರ್ನ್​ ಊದುವುದು: ರೈಲು ರೈಲ್ವೆ ಕ್ರಾಸಿಂಗ್ ಸಮೀಪಿಸಿದಾಗ ರೈಲು ಎರಡು ಬಾರಿ ಹಾರ್ನ್​ ಮಾಡುತ್ತದೆ.

ಎರಡು ಉದ್ದ ಮತ್ತು ಒಂದು ಸಣ್ಣ ಹಾರ್ನ್​: ರೈಲು ತನ್ನ ಟ್ರ್ಯಾಕ್ ಅನ್ನು ಬದಲಾಯಿಸಿದಾಗ ಈ ರೀತಿಯ ಹಾರ್ನ್​ ಮಾಡಲಾಗುತ್ತದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ