ಆಂಧ್ರ ಪ್ರದೇಶದ ನಂದ್ಯಾಲ ಜಿಲ್ಲೆಯಲ್ಲಿ ರಸ್ತೆ ಅಪಘಾತ ನಡೆದಿದೆ. ತೆಂಗಿನ ಕಾಯಿ ಎಳನೀರು ತುಂಬಿದ್ದ ಲಾರಿಯೊಂದು ಉರುಳಿ ಬಿದ್ದಿದೆ. ಮಂಡಲ ಜಗದೂರ್ತಿ ವೇದಿಕೆಗೆ ಬಂದಾಗ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಹೈದ್ರಾಬಾದ್ ಕಡೆಯಿಂದ ತೆಂಗಿನ ಕಾಯಿ ತುಂಬಿಕೊಂಡು ಗುತ್ತಿ ಕಡೆಗೆ ಬರುತ್ತಿದ್ದ ಲಾರಿಯ ಮುಂಭಾಗದ ಟೈರ್ ಸ್ಫೋಟಗೊಂಡು ಈ ಅವಘಡ ಸಂಭವಿಸಿದೆ. ಲಾರಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ಲಾರಿ ಪಲ್ಟಿಯಾಗಿದ್ದು, ತೆಂಗಿನ ಕಾಯಿಗಳೆಲ್ಲ ರಸ್ತೆಯ ಇಕ್ಕೆಲೆಗಳಲ್ಲಿ ಚೆಲ್ಲಾಪಿಲ್ಲಿಯಾಗಿವೆ. ಅಪಘಾತವನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಅದಕ್ಕೂ ಮುಂಚೆ ಅಲ್ಲಿ ಒಂದೇ ಒಂದು ಕಾಯಿಯೂ ಉಳಿಯದಂತೆ ದೋಚಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ನೋಡಿದಾಗ ಕುರುಹಿಗೆ ಎಂಬಂತೆ ಒಂದಷ್ಟು ಕಾಯಿಗಳುನ ಇನ್ನೂ ಉಳಿದಿದ್ದವು. ಕೊನೆಗೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಜೆಸಿಬಿ ಸಹಾಯದಿಂದ ಲಾರಿಯನ್ನು ಹೊರತೆಗೆದಿದ್ದಾರೆ.
ಈ ಹಿಂದೆಯೂ ಇಂತಹ ಹಲವು ಘಟನೆಗಳು ನಡೆದಿವೆ. ಕೋಳಿ, ಮೇಕೆ ಕಾಲು, ಮದ್ಯದ ಬಾಟಲಿ, ವ್ಯಾನ್, ಹಾಲು, ಪೆಟ್ರೋಲು, ಡೀಸೆಲು ಸಾಗಿಸುವ ಲಾರಿಗಳು ಅಪಘಾತಕ್ಕೀಡಾಗುವಾಗ ಪ್ರಸಂಗಗಳು ನಡೆದಿವೆ.
ಚಾಲಕನ ಸ್ಥಿತಿ ಏನಾಗಿದೆ, ಲಾರಿಯಲ್ಲಿ ಬೇರೆ ಯಾರಾದ್ರೂ ಇದ್ದರಾ, ದೊಡ್ಡ ಅವಘಡವೇ ಸಂಭವಿಸಿದೆಯಲ್ಲವಾ ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳದ ಸ್ಥಳೀಯರು ಸಿಕ್ಕ ಸಿಕ್ಕ ತೆಂಗಿನಕಾಯಿಗಳನ್ನು ಎದೆಗವಚಿಕೊಂಡು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲವರು ಚೀಲಗಳಲ್ಲಿ ತೆಂಗಿನಕಾಯಿಯನ್ನು ತುಂಬಿಕೊಂಡು ಹೋದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ