ಭಾರತದಲ್ಲಿ ಕೊವಿಡ್​ 19 ವಿರುದ್ಧ ಹೋರಾಟಕ್ಕೆ ಟ್ವಿಟರ್​ ಸಿಇಒ ಜ್ಯಾಕ್​ ಡಾರ್ಸೆಯಿಂದ 15 ಮಿಲಿಯನ್ ಡಾಲರ್ ಆರ್ಥಿಕ ನೆರವು..

|

Updated on: May 11, 2021 | 8:32 PM

ಟ್ವಿಟರ್​ ಸಿಇಒ ಜ್ಯಾಕ್​ ಡಾರ್ಸೆ ಒಟ್ಟು ಮೂರು ಎನ್​ಜಿಒಗಳಿಗೆ ಹಣ ಹಂಚಿಕೆ ಮಾಡಿದ್ದು, ಅದರಲ್ಲಿ ಒಂದು ಆರ್​ಎಸ್​ಎಸ್​ನ ಅಂಗಸಂಸ್ಥೆಯಾದ ಸೇವಾ ಇಂಟರ್​ನ್ಯಾಶನಲ್​​ಗೆ 2,500,000 ಡಾಲರ್​ ನೀಡಿದ್ದಾಗಿ ಮೂಲಗಳು ತಿಳಿಸಿವೆ.

ಭಾರತದಲ್ಲಿ ಕೊವಿಡ್​ 19 ವಿರುದ್ಧ ಹೋರಾಟಕ್ಕೆ ಟ್ವಿಟರ್​ ಸಿಇಒ ಜ್ಯಾಕ್​ ಡಾರ್ಸೆಯಿಂದ 15 ಮಿಲಿಯನ್ ಡಾಲರ್ ಆರ್ಥಿಕ ನೆರವು..
ಜ್ಯಾಕ್ ಡಾರ್ಸೆ
Follow us on

ಚೆನ್ನೈ: ಭಾರತದಲ್ಲಿ ಅಬ್ಬರಿಸುತ್ತಿರುವ ಕೊರೊನಾ ವಿರುದ್ಧ ಹೋರಾಟಕ್ಕೆ, ಸೋಷಿಯಲ್ ಮೀಡಿಯಾ ದೈತ್ಯ ಟ್ವಿಟರ್​​ ಸಿಇಒ ಜ್ಯಾಕ್​ ಡೋರ್ಸೆ ಅವರು ವೈಯಕ್ತಿಕವಾಗಿ 15 ಮಿಲಿಯನ್ ಡಾಲರ್​​ ಅಂದರೆ ಸುಮಾರು 110 ಕೋಟಿ ರೂಪಾಯಿ ಆರ್ಥಿಕ ನೆರವು ನೀಡಿದ್ದಾರೆ.

ಈ ಬಗ್ಗೆ ಸೋಮವಾರ ಟ್ವೀಟ್ ಮಾಡಿರುವ ಡಾರ್ಸೆ, ಕೊವಿಡ್​ 19 ಪರಿಹಾರ ಕಾರ್ಯ ನಡೆಸುತ್ತಿರುವ ಕೇರ್​, ಏಡ್​ ಇಂಡಿಯಾ ಮತ್ತು ಸೇವಾ ಇಂಟರ್​ನ್ಯಾಷನಲ್ ಎನ್​ಜಿಒಗಳಿಗೆ 15 ಮಿಲಿಯನ್ ಡಾಲರ್​ಗಳನ್ನು ಹಂಚಿ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಜ್ಯಾಕ್​ ಡೋರ್ಸೆ ಅವರು, ಅಸೋಸಿಯೇಶನ್​ ಆಫ್ ಇಂಡಿಯಾ (AID India)ಕ್ಕೆ 2,500,000 ಡಾಲರ್​, ಕೇರ್​ ಎನ್​ಜಿಒಕ್ಕೆ 10,000,000 ಡಾಲರ್​ ಮತ್ತು ಆರ್​ಎಸ್​ಎಸ್​ನ ಅಂಗಸಂಸ್ಥೆಯಾದ ಸೇವಾ ಇಂಟರ್​ನ್ಯಾಶನಲ್​​ಗೆ 2,500,000 ಡಾಲರ್​ ನೀಡಿದ್ದಾಗಿ ಮೂಲಗಳು ತಿಳಿಸಿವೆ.

ಜ್ಯಾಕ್ ಡಾರ್ಸೆ ಅವರು ಕಳೆದ ವರ್ಷ ಏಪ್ರಿಲ್​ನಿಂದಲೂ ಜಾಗತಿಕವಾಗಿ ಕೊವಿಡ್​ 19 ವಿರುದ್ಧ ಹೋರಾಟಕ್ಕೆ ಆರ್ಥಿಕ ನೆರವು ಘೋಷಿಸುತ್ತಲೇ ಇದ್ದಾರೆ. ಎನ್​ಜಿಒ ಮೂಲಕ ಹಣವನ್ನು ದೇಣಿಗೆ ನೀಡುತ್ತಿದ್ದಾರೆ. ಇಲ್ಲಿಯವರೆಗೆ ಸುಮಾರು 200 ಸಂಸ್ಥೆಗಳಿಗೆ ಹಣ ನೀಡಿದ್ದಾರೆ. ಇದೀಗ ಭಾರತದ ಮೂರು ಎನ್​ಜಿಒಗಳಿಗೆ ದೇಣಿಗೆ ನೀಡಿದ್ದಾರೆ. ಭಾರತದಲ್ಲಿ ಸದ್ಯ ಬೆಡ್​, ಆಕ್ಸಿಜನ್ ಸೇರಿ ಹಲವು ವೈದ್ಯಕೀಯ ಉಪಕರಣಗಳ ಕೊರತೆ ಉಂಟಾಗಿದೆ. ಬೇರೆ ಅನೇಕ ದೇಶಗಳು ಭಾರತದ ನೆರವಿಗೆ ನಿಂತಿವೆ. ಆಕ್ಸಿಜನ್​, ಮಾಸ್ಕ್, ರೆಮ್​ಡೆಸಿವಿರ್ ಇಂಜಕ್ಷೆನ್​ ಸೇರಿ ಅಗತ್ಯ ವಸ್ತುಗಳನ್ನು ತಮ್ಮ ದೇಶಗಳಿಂದ ಕಳಿಸುತ್ತಿವೆ.

Published On - 8:20 pm, Tue, 11 May 21